ಕುಶಾಲನಗರ, ಸೆ. ೨೦: ಸಾಲ ನೀಡುವುದಾಗಿ ಆಮಿಷವೊಡ್ಡಿ ನೂರಾರು ಜನರಿಂದ ತಲಾ ಸಾವಿರ ರೂ. ಸಂಗ್ರಹಿಸಿ ವಂಚನೆ ಮಾಡಿರುವುದಾಗಿ ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತಲಿನ ನಾಗರಿಕರು ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ವರದಿಯಾಗಿದೆ. ಖಾಸಗಿ ಫೈನಾನ್ಸ್ ಹೆಸರಿನಲ್ಲಿ ಸಾಲ ನೀಡುವ ಆಮಿಷವೊಡ್ಡಿ ಪ್ರತಿಯೊಬ್ಬರಿಂದ ವಂತಿಗೆ ಸಂಗ್ರಹಿಸಿದ ಫೈನಾನ್ಸ್ ಸಂಸ್ಥೆಯ ಕೆಲವು ವ್ಯಕ್ತಿಗಳ ಮೇಲೆ ದೂರು ದಾಖಲಾಗಿದ್ದು, ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಗೋಣಿಕೊಪ್ಪದ ಕುಸುಮ ಹಾಗೂ ಮುಳ್ಳುಸೋಗೆಯ ಜಮುನಾ ಎಂಬವರುಗಳನ್ನು ಬಂಧಿಸಿದ್ದಾರೆ.