ಮಡಿಕೇರಿ, ಸೆ. ೨೦: ಕಸ್ತೂರಿ ರಂಗನ್ ವರದಿಗೆ ಆಕ್ಷೇಪ ವ್ಯಕ್ತಪಡಿಸಿ ಕರ್ನಾಟಕ ಸರಕಾರದ ಪರವಾಗಿ ಶಾಸಕ ಕೆ.ಜಿ. ಬೋಪಯ್ಯ ಅವರು ಕೇಂದ್ರ ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್ ಅವರಿಗೆ ಬರೆದಿದ್ದ ಪತ್ರಕ್ಕೆ ಸಚಿವರು ಸ್ಪಂದಿಸಿದ್ದಾರೆ.

ಆಕ್ಷೇಪವನ್ನು ತಾನು ಗಮನಿಸಿದ್ದು, ಸೂಕ್ತ ಸ್ಪಂದನ ನೀಡುವುದಾಗಿ ಬೋಪಯ್ಯ ಅವರಿಗೆ ಭೂಪೇಂದ್ರ ಯಾದವ್ ಪತ್ರ ಬರೆದಿದ್ದಾರೆ. ಕೇಂದ್ರ ಸರಕಾರ ತಾ. ೬.೭.೨೦೨೨ ರಂದು ಕಸ್ತೂರಿ ರಂಗನ್ ವರದಿ ಸಂಬAಧ ಕರಡು ಅಧಿಸೂಚನೆ ಹೊರಡಿಸಿದ್ದ ಹಿನ್ನೆಲೆಯಲ್ಲಿ ೧೮.೮.೨೦೨೨ ರಂದು ಬೋಪಯ್ಯ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದರು. ಅಧಿಸೂಚನೆಯಲ್ಲಿ ಕೊಡಗಿನ ೨೭ ಗ್ರಾಮಗಳನ್ನೂ ಪರಿಸರ ಸೂಕ್ಷö್ಮ ಪ್ರದೇಶದಡಿ ಗುರುತಿಸಲಾಗಿತ್ತು.