ಮಡಿಕೇರಿ, ಸೆ. ೨೦: ಇಲ್ಲಿಗೆ ಸನಿಹದ ಮಕ್ಕಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೨೦೨೧-೨೨ನೇ ಸಾಲಿನಲ್ಲಿ ಒಟ್ಟು ರೂ. ೨೪೦೩೫೧೫.೧೩ ಲಾಭ ಗಳಿಸಿದ್ದು, ಸಂಘದ ಸದಸ್ಯರುಗಳಿಗೆ ಶೇ. ೧೨ ರಷ್ಟು ಡಿವಿಡೆಂಡ್ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಕೊಕ್ಕಲೆರ ಸುಜು ತಿಮ್ಮಯ್ಯ ಹೇಳಿದರು.
ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಸದಸ್ಯರುಗಳ ಪಾಲು ಹಣ, ಸರಕಾರದ ಪಾಲು ಹಣ ಸೇರಿದಂತೆ ಇತರ ನಿಧಿಗಳು, ಸದಸ್ಯರಿಗೆ ನೀಡಿದ ಸಾಲದ ಬಡ್ಡಿ ಹಣ, ಗೊಬ್ಬರ, ಹತ್ಯಾರುಗಳ ಮಾರಾಟದಿಂದ ಕ್ರೋಢೀಕರಣವಾದ ಹಣದಿಂದ ಬ್ಯಾಂಕ್ ವರ್ಷಂಪ್ರತಿ ಲಾಭದಿಂದ ಮುನ್ನಡೆಯುತ್ತಿದೆ. ಇದಕ್ಕೆ ಸದಸ್ಯರುಗಳ ಸಹಕಾರ ಮೂಲ ಕಾರಣವಾಗಿದೆ ಎಂದು ಹೇಳಿದರು.
೪೪೭ ಮಂದಿಗೆ ರೂ. ೬೮೩.೨೯ ಲಕ್ಷದಷ್ಟು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದೊಂದಿಗೆ ರೂಪೇ ಕಾರ್ಡ್ ವಿತರಣೆ ಮಾಡಲಾಗಿದೆ. ೪೧೬ ಮಂದಿಗೆ ರೂ. ೬೬೧.೭೯ ಲಕ್ಷದಷ್ಟು ಕೆಸಿಸಿ ಸಾಲ ಕೊಡಿಸಲಾಗಿದೆ. ೨೬೧ ಮಂದಿಗೆ ರೂ. ೬೫.೭೪ ಲಕ್ಷದಷ್ಟು ಆಭರಣ ಈಡಿನ ಸಾಲ ನೀಡಲಾಗಿದೆ. ರೂ. ೭೨.೪೨ ಲಕ್ಷ ಜಾಮೀನು ಸಾಲ, ರೂ. ೨೨.೯೫ ಲಕ್ಷ ಎಸ್ಹೆಚ್ಜಿ ಸಾಲ, ರೂ. ೪೨.೬೦ ಲಕ್ಷದಷ್ಟು ಪಿಗ್ಮಿ ಠೇವಣಿ ಸಾಲ ನೀಡಲಾಗಿದೆ. ಗೊಬ್ಬರ ಮಾರಾಟದಲ್ಲಿ ರೂ. ೩೪.೮ ಹಾಗೂ ಕಾಫಿ ಚೀಲ, ಥಾಟ್, ಮಾರಾಟದಲ್ಲಿ ರೂ. ೪೦ ಸಾವಿರದಷ್ಟು ವ್ಯಾಪಾರ ವಹಿವಾಟು ಮಾಡಲಾಗಿದ್ದು, ರೂ. ೧.೮೮ ಲಕ್ಷ ಲಾಭ ಬಂದಿದೆ.
ರಾಜ್ಯ ಸರಕಾರದಿಂದ ೨೧-೨೨ನೇ ಸಾಲಿಗೆ ರೂ. ೧೬.೯೧ ರಷ್ಟು ಬಡ್ಡಿ ಸಹಾಯಧನ ಬಂದಿದ್ದು, ಕೇಂದ್ರದಿAದ ರೂ. ೮೧ ಸಾವಿರ ಬಂದಿದೆ.
ಜಿಲ್ಲಾ ಕೇಂದ್ರ ಬ್ಯಾಂಕಿನಿAದ ರೂ. ೬೫೫ ಲಕ್ಷ ಕೆಸಿಸಿ ಸಾಲ ಪಡೆಯಲಾಗಿದ್ದು, ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಲಾಗಿದೆ. ಎಂ.ಸಿ.ಸಿ. ಸಾಲ ರೂ. ೪೪.೫೦ ರಷ್ಟು ಪಡೆದಿದ್ದು, ಮಳೆಗಾಲದ ನಂತರ ಸಂಘದ ಜಾಗದಲ್ಲಿ ಹೊಸ ಗೋದಾಮು ನಿರ್ಮಾಣ ಮಾಡಲಿದ್ದು, ಇದರಿಂದಾಗಿ ಧವಸ ಭಂಡಾರದ ಅಭಿವೃದ್ಧಿಗೂ ಪೂರಕವಾಗಲಿದೆ ಎಂದು ಮಾಹಿತಿ ನೀಡಿದರು.
ಸಂಘದಲ್ಲಿ ಒಟ್ಟು ೧೩,೨೪,೯೦೦ ಸುಸ್ತಿ ಸಾಲವಿದ್ದು, ಈ ಪೈಕಿ ರೂ. ೧,೮೧,೦೦೦ ರಷ್ಟು ಅರ್ಧಕ್ಕೂ ಮೇಲ್ಪಟ್ಟ ಸುಸ್ತಿ ಸಾಲವಾಗಿದ್ದು, ಇದು ಮರು ಪಾವತಿಯಾದಲ್ಲಿ ಸಂಘವು ಶೇ. ೧೦೦ ರಷ್ಟು ಪ್ರಗತಿ ಸಾಧಿಸಿದಂತಾಗುತ್ತದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸ ಲಾಯಿತು. ಕರ್ನಾಟಕದ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಸಂಘದ ಮಾಜಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರನ್ನು ಸನ್ಮಾನಿಸಲಾಯಿತು. ಸಂಘವು ಪ್ರಗತಿ ಪಥದಲ್ಲಿ ಸಾಗುತ್ತಿರುವುದು ಶ್ಲಾಘನೀಯ; ತಾನು ಅಧ್ಯಕ್ಷನಾಗಿದ್ದ ಸಂಘದಲ್ಲಿ ಸನ್ಮಾನ ಆಗುತ್ತಿರುವುದು ಹೆಮ್ಮೆಯೆನಿಸುತ್ತದೆ ಎಂದು ಹೇಳಿದರಲ್ಲದೆ, ಮಂಡಳಿಯ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಅಣ್ಣಚ್ಚಿರ ಸತೀಶ್, ನಿರ್ದೇಶಕರು ಗಳಾದ ಕುಂಬಗೌಡನ ಪ್ರಸನ್ನ, ಕನ್ನಿಕಂಡ ಸುಬ್ಬಯ್ಯ, ಬಿ.ಎನ್. ರಮೇಶ್ ಸುವರ್ಣ, ಲಕ್ಕಪ್ಪನ ವಿಜೇತ್, ಕೊಟ್ಟಕೇರಿಯನ ಪ್ರದೀಪ್, ಹೆಚ್.ಎಂ. ಸುಧಾಕರ, ಪಡಿಯೇಟಿರ ಕವಿತಾ, ಉಕ್ಕೇರಂಡ ನೀಲಮ್ಮ, ಪಿ.ಎಂ. ಸುಲೋಚನ, ಡಿಸಿಸಿಬಿ ಪ್ರತಿನಿಧಿ ಎಂ.ಕೆ. ಲಲಿತ, ಸಂಘದ ಗೌರವ ಕಾರ್ಯದರ್ಶಿ ಸಿ.ಬಿ. ಕುಟ್ಟಪ್ಪ, ಪ್ರಬಾರ ಕಾರ್ಯ ನಿರ್ವಹಣಾಧಿಕಾರಿ ಎಂ.ಎಸ್. ಶೋಭಾವತಿ, ಸಿಬ್ಬಂದಿಗಳಾದ ಎಂ.ಎಸ್. ವಿಜಯ್ ಕುಮಾರ್, ಹಟ್ಟಿಹೊಳೆ ಶಾಖೆ ವ್ಯವಸ್ಥಾಪಕ ಸಂತೋಷ್, ಕೆ.ಆರ್. ಹೇಮಲತಾ, ಎ.ಡಿ. ಪೊನ್ನಪ್ಪ ಇದ್ದರು.