ವೀರಾಜಪೇಟೆ, ಸೆ. ೨೦ : ಭಾರತದ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ಅನುಗುಣವಾಗಿ ವಿಶೇಷ ತಿಂಡಿತಿನಿಸುಗಳನ್ನು ಮಾಡಲಾಗುತ್ತದೆ. ಇಂತಹ ಸಮಯೋಚಿತ ತಿಂಡಿತಿನಿಸುಗಳನ್ನು ತಿನ್ನುವುದರಿಂದ ಭಾರತೀಯರ ಆರೋಗ್ಯವು ಇತರ ಯಾವುದೇ ರಾಷ್ಟಿçÃಯರ ಆರೋಗ್ಯಕ್ಕಿಂತಲೂ ಉತ್ತಮ ಮಟ್ಟದಲ್ಲಿ ಇರುತ್ತದೆ, ನಮ್ಮ ಹಿರಿಯರು ಇದಕ್ಕಾಗಿಯೇ ವರ್ಷವನ್ನು ಆರು ಋತುಗಳಾಗಿ ವಿಂಗಡಿಸಿ ಯಾವ ಋತುವಿನಲ್ಲಿ ಯಾವ ಆಹಾರವನ್ನು ತಿನ್ನಬೇಕೆಂಬ ನಿಯಮವನ್ನು ಮಾಡಿದ್ದರು ಎಂದು ಡಾ|| ಅಭಿಜ್ಞಾ ವಿವರಿಸಿದರು.
ಅವರು ಇಲ್ಲಿಗೆ ಸಮೀಪದ ಶ್ರೀ ಅರಮೇರಿ ಕಳಂಚೇರಿ ಮಠದಲ್ಲಿ ಇದೇ ತಾ. ೧೮ರಂದು ನಡೆದ ೨೦೨ನೇ ಮಾಸಿಕ ತತ್ತ÷್ವಚಿಂತನಾ ಗೋಷ್ಠಿಯಲ್ಲಿ ‘‘ಭಾರತೀಯ ಹಬ್ಬಗಳಲ್ಲಿ ತಯಾರಿಸುವ ವಿವಿಧ ವಿಶಿಷ್ಟ ಭಕ್ಷö್ಯಗಳ ಮಹತ್ವ’’ ಎಂಬುದರ ಬಗ್ಗೆ ಉಪನ್ಯಾಸ ನೀಡಿದ್ದು, ಋತುಮಾನಕ್ಕೆ ಸರಿಯಾಗಿ ನಿರ್ದಿಷ್ಟ ಭಕ್ಷö್ಯಗಳನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ರಾಜೇಂದ್ರ ಅವರು, ನಾವು ಸೇವಿಸುವ ಆಹಾರದ ಶೈಲಿಯು ನಮ್ಮ ಬದುಕನ್ನು ನಿರೂಪಿಸುತ್ತದೆ. ನಮ್ಮ ಆಹಾರಸೇವನೆಯ ನಿಯಮಗಳು ಸರಿಯಿದ್ದಾಗ ಮಾತ್ರ ಬದುಕು ಹಸನಾಗುತ್ತದೆ ಎಂದು ತಿಳಿಸಿದರು. ಶ್ರೀ ಮಠದ ಶ್ರೀಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರು ನಮ್ಮ ಹಿರಿಯರ ಆಹಾರ ಪದ್ಧತಿಯ ವೈಜ್ಞಾನಿಕ ಧೋರಣೆಗಳನ್ನು ಶ್ಲಾಘಿಸುತ್ತ ಪಾಶ್ಚಾತ್ಯರ ಆಹಾರ ಪದ್ಧತಿಯ ಅಂಧಾನುಕರu ೆಯನ್ನು ತ್ಯಜಿಸಿ ನಮ್ಮ ಭಾರತೀಯರ ಪಾರಂಪರಿಕ ಆಹಾರವನ್ನು ಬಳಸುವ ಅಗತ್ಯದ ಬಗ್ಗೆ ಒತ್ತು ನೀಡಿ ಮಾತನಾಡಿದರು.
ಇದೇ ಸಮಯದಲ್ಲಿ ಹಿರಿಯ ಸಾಹಿತಿ ಕಿಗ್ಗಾಲು ಎಸ್ ಗಿರೀಶ್‌ರವರ ಹದಿಮೂರನೆಯ ಕೃತಿ ಭಾಮಿನೀಷಟ್ಪದಿಯಲ್ಲಿ ಪ್ರಕೃತಿವೈಭವ ಎಂಬ ಛಂದೋಬದ್ಧ ರಚನೆಯನ್ನು ಬಿಡುಗಡೆ ಮಾಡಲಾಯಿತು. ನಮ್ಮ ಪ್ರಕೃತಿಯಲ್ಲಿ ನಾವು ಕಾಣುವ ಹಲವಾರು ವಿಷಯಗಳನ್ನು ಷಟ್ಪದಿಯ ರೂಪದಲ್ಲಿ ತಂದಿರುವುದಾಗಿ ಕೃತಿಕಾರರು ಹೇಳಿದರು. ಈ ಕೃತಿಯನ್ನು ಲೋಕಕ್ಕೆ ಅರ್ಪಿಸಿದ ಶಕ್ತಿ ಪತ್ರಿಕೆಯ ರಾಜೇಂದ್ರ ವಿದ್ಯಾರ್ಥಿಗಳು ಮತ್ತು ಆಸಕ್ತರಿಗೆ ಛಂದೋಬದ್ಧ ರಚನೆಗಳ ಬಗ್ಗೆ ಕಾರ್ಯಾಗಾರವನ್ನು ನಡೆಸಿದಲ್ಲಿ ಮುಂದಿನ ಪೀಳಿಗೆಗೂ ಇಂತಹ ರಚನೆಗಳನ್ನು ಮಾಡುವ ಕೌಶಲ್ಯವು ಲಭ್ಯವಾಗುವುದೆಂದು ಅಭಿಪ್ರಾಯಪಟ್ಟರು. ಶ್ರೀಮಠದ ವಿದ್ಯಾರ್ಥಿಗಳು ಕಾರ್ಯಕ್ರಮ ನಿರ್ವಹಣೆಗೈದರು. - ಕಿಗ್ಗಾಲು ಎಸ್. ಗಿರೀಶ್