ಹೆಚ್.ಜೆ. ರಾಕೇಶ್ ಮಡಿಕೇರಿ, ಸೆ. ೧೯: ವಿಶಿಷ್ಟ ಸಂಸ್ಕೃತಿ, ಆಚಾರ-ವಿಚಾರ, ಪದ್ಧತಿ, ಪರಂಪರೆಯಿAದ ಪ್ರಪಂಚವ್ಯಾಪಿ ಗಮನ ಸೆಳೆದ ಕೊಡವ ಜನಾಂಗದ ಹಿನ್ನೆಲೆಯನ್ನು ಪ್ರವಾಸಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ರೂಪಿಸಲಾದ ‘ಕೊಡವ ಹೆರಿಟೇಜ್’ ಯೋಜನೆ ಇದೀಗ ಮೂಲೆಗುಂಪಾಗಿದ್ದು, ಅರೆಬರೆ ಕಾಮಗಾರಿಯಿಂದ ಕಟ್ಟಡ ಅನಾಥ ಸ್ಥಿತಿಯಲ್ಲಿದೆ. ಅಲ್ಲದೇ, ಶಿಥಿಲಗೊಂಡು ಕಟ್ಟಡ ಹಾಳಾಗುವ ಹಂತ ತಲುಪಿದ್ದು, ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ.

ಪ್ರವಾಸಿಗರ ಸ್ವರ್ಗ, ಮಂಜಿನನಗರಿ ಮಡಿಕೇರಿ ನಗರದಿಂದ ಅನತಿ ದೂರದ ಕರವಲೆ ಬಾಡಗ ಗ್ರಾಮದ (ವಿದ್ಯಾನಗರ) ೫ ಎಕರೆ ಜಾಗದಲ್ಲಿ ೨೦೦೪ರಲ್ಲಿ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಮೂಲಕ ಯೋಜನೆ ಕಾರ್ಯಗತಕ್ಕೆ ಮಂಜೂರಾತಿ ನೀಡಲಾಯಿತು. ಆದರೆ, ಅಂದಿನಿAದ ಇಂದಿನ ತನಕವೂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಕೊಡವ ಹೆರಿಟೇಜ್ ಎಂದು ಪೂರ್ಣಗೊಳ್ಳುತ್ತೆ? ಎಂದು ಚಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ೧೮ ವರ್ಷದಿಂದಲೂ ಕಾಮಗಾರಿ ನಡೆಯುತ್ತಲ್ಲಿದ್ದು, ಇದೀಗ ಕೆಲಸ ಸ್ಥಗಿತಗೊಂಡಿದೆ. ನಿರ್ಮಾಣದ ಹಂತದಿAದಲೂ ಒಂದಿಲ್ಲೊAದು ಸಮಸ್ಯೆಗಳು, ಕಳಪೆ ಕಾಮಗಾರಿ, ಗುತ್ತಿಗೆದಾರರ ಬದಲಾವಣೆ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕೆಲಸ ತಡವಾಗುತ್ತಿದೆ. ಇದೀಗ ಕಾಮಗಾರಿಗೆ ಹೆಚ್ಚುವರಿಯಾಗಿ ರೂ. ೪.೯೫ ಕೋಟಿಯ ಅವಶ್ಯಕತೆ ಇದೆ.

ಕೊಡವ ಐನ್‌ಮನೆ ಮಾದರಿಯಲ್ಲಿ ಕೊಡವ ಹೆರಿಟೇಜ್ ಸೆಂಟರ್ ಸ್ಥಾಪಿಸಲು ಚಿಂತನೆ ನಡೆಸಲಾಯಿತು. ಐನ್‌ಮನೆ, ಸಭಾಂಗಣ, ಕೊಡವರ, ಸಂಸ್ಕೃತಿ, ಪದ್ಧತಿ, ಪರಂಪರೆ, ಉಡುಪು ಪ್ರದರ್ಶನ, ಕೊಡಗಿನ ಪ್ರಮುಖ ಬೆಳೆ ಹಾಗೂ ಕೊಡವರ ಪೂರ್ವಿಕರು ಬಳಸುತ್ತಿದ್ದ ವಸ್ತುಗಳ ಪ್ರದರ್ಶನ ಇಡಲು ವಸ್ತು ಸಂಗ್ರಹಾಲಯ ಹಾಗೂ ಇನ್ನಿತರ ವ್ಯವಸ್ಥೆಗಳೊಂದಿಗೆ ಕೊಡವರ ಸಂಸ್ಕೃತಿ ಬಗ್ಗೆ ಪೂರಕ ಮಾಹಿತಿ ನೀಡುವುದು ಇದರ ಉದ್ದೇಶವಾಗಿತ್ತು.

ಕೊಡವ ಹೆರಿಟೇಜ್ ಸೆಂಟರ್ ನಿರ್ಮಾಣ ಕಾಮಗಾರಿಯಲ್ಲಿ ಪ್ರಮುಖವಾಗಿ ಗೋಡೆಗಳಿಗೆ ಪಾಲಿಷಿಂಗ್ ಆಗಬೇಕಿದ್ದು, ಕಟ್ಟಡದ ಮುಂಭಾಗ ಗೇಟ್ ಮತ್ತು ಸುತ್ತ ಗೋಡೆ ನಿರ್ಮಿಸಬೇಕಿದೆ. ಮೆಟ್ಟಿಲುಗಳಿಗೆ ರೇಲಿಂಗ್ಸ್ ಮತ್ತು ಪ್ಲೋರಿಂಗ್ ಮಾಡಬೇಕಿದೆ. ರಂಗಮAದಿರಕ್ಕೆ ಮೇಲ್ಛಾವಣಿ ಅಳವಡಿಕೆ ಹಾಗೂ ಇತರ ಕೆಲಸಗಳು ಬಾಕಿ ಇವೆ. (ಮೊದಲ ಪುಟದಿಂದ) ಕೊಡವ ಹೆರಿಟೇಜ್ ಸೆಂಟರ್ ನಿರ್ಮಾಣ ಸಂಬAಧ ೩,೩೦,೪೫,೧೧೦ ರೂ.ಗಳ ಕಾಮಗಾರಿಗೆ ಅನುಮೋದನೆ ದೊರೆತಿದೆ. ಸದ್ಯಕ್ಕೆ ೨ ಐನ್‌ಮನೆಗಳ ಮೇಲ್ಛಾವಣಿ ಕೆಲಸ, ಪ್ರವೇಶ ದ್ವಾರ, ಅಡುಗೆ ಕೊಠಡಿ, ಮೆಟ್ಟಿಲುಗಳು, ಲಿಂಪಿಕ್, ಥಿಯೇಟರ್, ಗ್ರಂಥಾಲಯ, ವಿದ್ಯುದೀಕರಣ, ಕಿಟಕಿ, ಬಾಗಿಲುಗಳ ಕೆಲಸ ಸೇರಿದಂತೆ ಮತ್ತಿತರ ಸಣ್ಣಪುಟ್ಟ ಕಾಮಗಾರಿಗಳು ನಡೆದಿವೆ. ಇನ್ನೂ ಅನೇಕ ಕೆಲಸಗಳು ಬಾಕಿ ಉಳಿದುಕೊಂಡಿವೆ.

ಕೊಡವ ಪಾರಂಪರಿಕ ಕೇಂದ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಲಹಾ ಸಮಿತಿ ಮತ್ತು ಕಾರ್ಯಕಾರಿ ಸಮಿತಿಯನ್ನು ನೇಮಿಸುವ ಸಂಬAಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಮಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷರಾಗಿ, ಜಿಲ್ಲೆಯ ಜನಪ್ರತಿನಿಧಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಆದರೆ, ಈ ಸಮಿತಿ ಇನ್ನೂ ಕೂಡ

ಕಾರ್ಯೋನ್ಮುಖಗೊಂಡಿಲ್ಲ.

ಅನುದಾನ ಬಿಡುಗಡೆಯಾಗಿದ್ದೆಷ್ಟು.?

ಯೋಜನೆ ರೂಪಿಸಿದಾಗಲಿಂದ ಇದುವರೆಗೂ ನಾಲ್ಕು ಬಾರಿ ಅನುದಾನದ ಮೊತ್ತ ಬದಲಾವಣೆಗೊಂಡಿದೆ. ಈ ಪೈಕಿ ೨೦೦೪ರಲ್ಲಿ ಮೊದಲ ಕಂತಾಗಿ ರೂ. ೩೩.೫೪ ಲಕ್ಷವನ್ನು ಬಿಡುಗಡೆ ಮಾಡಲಾಯಿತು. ೧೮.೯.೨೦೧೦ರಂದು ಎರಡನೇ ಕಂತಾಗಿ ರೂ.೨೦ ಲಕ್ಷವನ್ನು ಜಿಲ್ಲಾಧಿಕಾರಿಗೆ, ೭.೬.೨೦೧೪ ರಂದು ಮೂರನೇ ಕಂತಾಗಿ ರೂ. ೧ ಕೋಟಿ, ೭.೨.೨೦೧೫ ರಂದು ನಾಲ್ಕನೇ ಕಂತಾಗಿ ರೂ. ೧ ಕೋಟಿ, ೮.೧೨.೨೦೨೧ ರಂದು ಐದನೇ ಕಂತಾಗಿ ರೂ. ೨೯ ಲಕ್ಷ, ಒಟ್ಟಾರೆಯಾಗಿ ರೂ. ೨.೮೨ ಕೋಟಿ ಹಣವನ್ನು ಕಾಮಗಾರಿಗಾಗಿ ಬಿಡುಗಡೆ ಮಾಡಲಾಗಿದೆ.

ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಗುತ್ತಿಗೆದಾರರಿಗೆ ನೋಟೀಸ್ ನೀಡಿದರು ಕೂಡ ಕಾಮಗಾರಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿಲ್ಲ. ಈ ಕಾರಣಕ್ಕಾಗಿ ೨೦೧೮ರಲ್ಲಿ ಗುತ್ತಿಗೆದಾರರನ್ನು ಬದಲಾಯಿಸಲಾಯಿತು. ಇದರಿಂದ ಗುತ್ತಿಗೆದಾರರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಮಳೆಗಾಲ ಹಾಗೂ ಕೋವಿಡ್ ಪರಿಸ್ಥಿತಿಯಿಂದ ಕೂಡ ಕಾಮಗಾರಿ ಮತ್ತಷ್ಟು ತಡವಾಯಿತು. ಸದ್ಯ ಯಾವ ಕಾಮಗಾರಿಗಳು ನಡೆಯುತ್ತಿಲ್ಲ.

ಕೊಡವ ಪಾರಂಪರಿಕ ತಾಣ ಇದೀಗ ಅನಾಥವಾಗಿದೆ. ಗೇಟ್ ಹಾಗೂ ಸೂಕ್ತ ಭದ್ರತೆ ಇಲ್ಲದಿರುವುದು ಆಡಳಿತ ಹಾಗೂ ಜನಪ್ರನಿಧಿಗಳ ಇಚ್ಛಾಶಕ್ತಿಗೆ ಕೈಗನ್ನಡಿ ಹಿಡಿದಂತಾಗಿದೆ. ಯಾರು ಬೇಕಾದರೂ ಇಲ್ಲಿಗೆ ನಿರ್ಭೀತಿಯಿಂದ ಯಾವ ಸಮಯಕ್ಕೂ ತೆರಳಬಹುದಾದ ಸ್ಥಿತಿ ಸೃಷ್ಟಿಯಾಗಿದೆ. ಜೊತೆಗೆ ಹೆರಿಟೇಜ್ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುವ ಮೊದಲು ಇಲಾಖೆ ಇದಕ್ಕೆ ಸೂಕ್ತ ಭದ್ರತೆ ಕಲ್ಪಿಸಬೇಕು. ಬೆಲೆಬಾಳುವ ಹೆಂಚು, ಕಬ್ಬಿಣ ವಸ್ತುಗಳು ಕೂಡ ಇದ್ದು ಭದ್ರತೆಯ ಅವಶ್ಯಕತೆಯೂ ಇದೆ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತು ಕಾಮಗಾರಿ ಚುರುಕುಗೊಳಿಸಲು ಮುಂದಾಗಬೇಕಾಗಿದೆ.