ಗೋಣಿಕೊಪ್ಪ ವರದಿ, ಸೆ. ೧೯: ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಕುಟ್ಟಂದಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಶುಕ್ರವಾರ ಗಾಯನ ಸ್ಪರ್ಧೆ ನಡೆಸಲಾಯಿತು. ಎಚ್. ಎಸ್. ರೇಖಾ ಪ್ರಥಮ, ಜೆ. ಆರ್. ಮುತ್ತಮ್ಮ ದ್ವಿತೀಯ, ಪಿ. ಸಿ. ಈಶ್ವರಿ ತೃತೀಯ, ಶಿಕ್ಷಕರಿಗೆ ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ದ್ವೀಪ ಪ್ರಥಮ, ಬೋಜಮ್ಮ ದ್ವಿತೀಯ, ಯಶ್ಮ ತೃತೀಯ ಸ್ಥಾನ ಪಡೆದುಕೊಂಡರು. ಮುಖ್ಯ ಶಿಕ್ಷಕಿ ದ್ವಿಪ, ಘಟಕದ ಅಧ್ಯಕ್ಷ ಅಪ್ಪಂಡೇರAಡ. ಪಿ. ದಿನೇಶ್, ನಿಕಟ ಪೂರ್ವ ಅಧ್ಯಕ್ಷ ಮಂದೆಯAಡ ವನಿತ್‌ಕುಮಾರ್, ಆಪಟ್ಟಿರ ಟಾಟು ಮೊಣ್ಣಪ್ಪ, ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ, ಯೋಜನಾ ನಿರ್ದೇಶಕ ಟಿ. ಜಿ ಲಿಖಿತ್‌ಕುಮಾರ್, ಅಪ್ಪಂಡೇರAಡ ಬೋಪಣ್ಣ ಇದ್ದರು.