ಸಿದ್ದಾಪುರ, ಸೆ. ೧೯: ಮಾಲ್ದಾರೆ ಬಾಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಗತಿಯ ಪಥದತ್ತ ದಾಪುಗಾಲು ಇಡುತ್ತಿದೆ ಎಂದು ಮಾಲ್ದಾರೆ ಬಾಡಗ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ಸಿ.ಎ. ನಂದ ಸುಬ್ಬಯ್ಯ ತಿಳಿಸಿದರು. ಸಹಕಾರ ಸಂಘದ ವತಿಯಿಂದ ಮಾಲ್ದಾರೆಯಲ್ಲಿ ನಿರ್ಮಾಣ ಮಾಡಿದ ಸಂಘದ ನೂತನ ಕಚೇರಿ ಹಾಗೂ ಸಭಾಂಗಣ ಉದ್ಘಾಟನೆಯ ಬಳಿಕ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ದರು.

ಸಂಘವು ಪ್ರಸಕ್ತ ವರ್ಷ ರೂ. ೧೯ ಲಕ್ಷಕ್ಕೂ ಅಧಿಕ ನಿವ್ವಳ ಲಾಭ ಗಳಿಸಿದ್ದು, ಸದಸ್ಯರುಗಳಿಗೆ ಉತ್ತಮ ರೀತಿಯ ಡಿವಿಡೆಂಡ್ ನೀಡಲಾಗುವು ದೆಂದರು. ಸಂಘದ ಕಚೇರಿಯ ಹಳೆ ಕಟ್ಟಡವನ್ನು ಉಳಿಸಿಕೊಂಡು ಮುಂದಿನ ದಿನಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸಲು ಯೋಜನೆಯನ್ನು ರೂಪಿಸ ಲಾಗುವುದು ಎಂದರು. ಸಂಘಕ್ಕೆ ರೂ. ೬೦ ಲಕ್ಷ ವೆಚ್ಚದಲ್ಲಿ ನೂತನ ಕಚೇರಿ ಹಾಗೂ ಸಭಾಂಗಣ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು, ಆಡಳಿತ ಮಂಡಳಿಯ ಸಂಪೂರ್ಣ ಸಹಕಾರ ದಿಂದ ಈ ಕಾರ್ಯ ಪೂರ್ಣ ಗೊಂಡಿದೆ ಎಂದರು.

ಸAಘದ ಸದಸ್ಯರುಗಳು ಸಂಘದ ಬ್ಯಾಂಕಿನಲ್ಲಿ ಹೆಚ್ಚಿನ ವ್ಯವಹಾರಗಳನ್ನು ಮಾಡುವ ಮೂಲಕ ಸಂಘದ ಕಾರ್ಯಗಳಲ್ಲಿ ಸಕ್ರಿಯವಾಗಿ ಸಹಕಾರ ನೀಡುವಂತೆ ಮನವಿ ಮಾಡಿದರು. ಸದಸ್ಯರುಗಳು ಪಡೆದುಕೊಂಡ ಸಾಲಗಳನ್ನು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ತಿಳಿಸಿದರು. ಮಹಿಳೆಯರು ಮೈಕ್ರೋ ಫೈನಾನ್ಸ್ ಮೂಲಕ ಅಧಿಕ ಬಡ್ಡಿಗೆ ಸಾಲವನ್ನು ಪಡೆಯದೆ ಸ್ಥಳೀಯ ಸಹಕಾರಿ ಬ್ಯಾಂಕುಗಳಿAದ ಕಡಿಮೆ ಬಡ್ಡಿದರಗಳಲ್ಲಿ ಸಾಲಗಳನ್ನು ಪಡೆದು ಕೊಳ್ಳಬೇಕೆಂದು ಸಲಹೆ ನೀಡಿದರು.

ಇದೇ ಸಂದÀರ್ಭ ಮಾಲ್ದಾರೆ ಸರಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕಗಳಿAದ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ಅಲ್ಲದೆ ಈ ಹಿಂದೆ ಮಾಲ್ದಾರೆ ಸಹಕಾರ ಸಂಘದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪಿ.ಎಂ. ಸೋಮಣ್ಣ, ಎಂ.ಎA. ನಂಜಪ್ಪ, ಎನ್.ಎಸ್. ಅಯ್ಯಪ್ಪ, ಟಿ.ಎನ್. ಗಣೇಶ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಭೆಯಲ್ಲಿ ಹಾಗೂ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಎಂ.ಎನ್ ಬೋಪಣ್ಣ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಜಿ. ವಲ್ಸ ರಾಜು, ನಿರ್ದೇಶಕರಾದ ಎನ್.ಕೆ. ಪ್ರಭಾಕರ್, ಹೆಚ್.ಎಲ್. ಪುಟ್ಟುಸ್ವಾಮಿ, ಎಂ. ಷರೀಫ್, ಬಿ.ಎಸ್. ಬಿದ್ದಪ್ಪ, ಜಿ.ಬಿ. ಸೋಮಯ್ಯ, ಪಿ.ಟಿ. ಯತೀಶ್, ಹೆಚ್.ಎಂ. ಮಾದೇವ, ಪಿ.ಆರ್. ಸುಮಿತ, ಸಿ.ಎನ್. ಮಾಲತಿ, ಲೀನಾ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.