ವೀರಾಜಪೇಟೆ, ಸೆ. ೧೯: ವೀರಾಜಪೇಟೆ ಕೊಡವ ಸಂಘ ಒಕ್ಕೂಟ. ಪಂಜರುಪೇಟೆ ಕೊಡವಕೇರಿ, ವೀರಾಜಪೇಟೆ ಕೊಡವ ಸಮಾಜದ ಸಂಯುಕ್ತ ಆಶ್ರಯದಲ್ಲಿ ತಾ. ೨೧ ರಂದು ವೀರಾಜಪೇಟೆ ಕೊಡವ ಸಮಾಜದಲ್ಲಿ ಬೃಹತ್ ಉಚಿತ ಆರೋಗ್ಯ ಮೇಳವನ್ನು ಆಯೋಜಿಸಲಾಗಿದೆ ಎಂದು ವೀರಾಜಪೇಟೆ ಕೊಡವ ಸಂಘ ಒಕ್ಕೂಟದ ಅಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕೂಟ ಪ್ರಾರಂಭವಾಗಿ ಮೂರು ವರ್ಷಗಳು ಕಳೆದಿದೆ. ಕಳೆದ ಬಾರಿ ವೀರಾಜಪೇಟೆಯ ೭ ಕೇರಿಗಳಲ್ಲಿರುವ ಕೊಡವ ಜನಾಂಗದವರಿಗೆ ಶಟಲ್ ಬ್ಯಾಡ್‌ಮಿಂಟನ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಈ ಬಾರಿ ಪಟ್ಟಣದ ಸಾರ್ವಜನಿಕರಿಗೆ ಅನುಕೂಲವಾಗು ವಂತೆ ಮೈಸೂರಿನ ಸುಯೋಗ್ ಆಸ್ಪತ್ರೆ, ವೀರಾಜಪೇಟೆಯ ದಂತ ಮಹಾ ವಿದ್ಯಾಲಯ, ಗೋಣಿಕೊಪ್ಪದ ಲೋಪಮುದ್ರ ಆಸ್ಪತ್ರೆಗಳ ಸಹಯೋಗದಲ್ಲಿ ನುರಿತ ತಜ್ಞವೈದ್ಯರಿಂದ ಸಾಮಾನ್ಯ ರೋಗ ತಪಾಸಣೆ, ಸ್ತಿçÃರೋಗ ಮತ್ತು ಪ್ರಸೂತಿ, ಮೂಳೆ ಮತ್ತು ಕೀಲು ರೋಗ, ಮೂತ್ರರೋಗ, ಹೃದಯ ಸಂಬAಧಿ ಕಾಯಿಲೆ, ಇ.ಸಿ.ಜಿ ಎಕೋ, ದಂತರೋಗ ಪರೀಕ್ಷೆ, ಕಣ್ಣಿನ ತಪಾಸಣೆೆ ಸಕ್ಕರೆ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಚೇದಂಡ ವಸಂತ್‌ಕುಮಾರ್, ನಿರ್ದೇಶಕರಾದ ಮಾದೇಯಂಡ ಸಂಪಿಪೂಣಚ್ಚ, ಕಾಂಡAಡ ರಶ್ಮಿ ಉಪಸ್ಥಿತರಿದ್ದರು.