ಮಡಿಕೇರಿ, ಸೆ. ೧೯: ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಒಟ್ಟು ರೂ. ೧೪.೭೧ ಲಕ್ಷ ನಿವ್ವಳ ಲಾಭ ಗಳಿಸಿದ್ದು, ಲಾಭಾಂಶ ಕಳೆದು ವರ್ಷಾಂತ್ಯಕ್ಕೆ ರೂ. ೧೩.೮೧ ಕೋಟಿ ಕ್ರೋಢಿಕೃತ ನಷ್ಟದಲ್ಲಿದೆ ಎಂದು ಸಂಘದ ಅಧ್ಯಕ್ಷ ಮುದ್ದಂಡ ಬಿ. ದೇವಯ್ಯ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಒಟ್ಟು ೯೦೭೩ ಜನ ಸದಸ್ಯರಿಂದ ರೂ. ೧.೨೮ ಕೋಟಿ ಹಾಗೂ ರಾಜ್ಯ ಸರಕಾರದ ೩.೦೪ ಕೋಟಿ ಸೇರಿ ೪.೩೨ ಕೋಟಿ ಪಾಲು ಬಂಡವಾಳವಿದೆ. ಹುಣಸೂರು ಹಾಗೂ ಹೆಬ್ಬಾಲೆಯಲ್ಲಿ ಪೆಟ್ರೋಲ್ ಬಂಕ್ ವ್ಯವಹಾರಗಳು ನಡೆಯುತ್ತಿದ್ದು, ಹುಣಸೂರಿನಲ್ಲಿ ರೂ. ೨೫.೨೩ ಲಕ್ಷ, ಹೆಬ್ಬಾಲೆಯಲ್ಲಿ ೭.೪೭ ಲಕ್ಷ ಆದಾಯ ಪಡೆಯಲಾಗಿದೆ. ಕಾಫಿ ಪುಡಿ ವ್ಯವಹಾರದಲ್ಲಿ ಒಟ್ಟು ೨.೧೮ ಲಕ್ಷ, ಕಾಫಿ ಸಂಸ್ಕರಣದಿAದ ರೂ. ೨.೮೯ ಲಕ್ಷ, ಕಟ್ಟಡ ಬಾಡಿಗೆಯಲ್ಲಿ ರೂ. ೨೦ ಲಕ್ಷ, ಹುಣಸೂರಿನಲ್ಲಿ ೪೪.೯೯, ಹೆಬ್ಬಾಲೆಯಲ್ಲಿ ೧೬.೩೨ ಲಕ್ಷ ಸೇರಿ ಒಟ್ಟು ೮೧.೬೨ ಲಕ್ಷ ಬಂದಿದೆ. ಬಂದ ಆದಾಯದಲ್ಲಿ ಖರ್ಚು ಕಳೆದು ರೂ. ೧೪.೭೧ ಲಕ್ಷ ಲಾಭಾಂಶ ದೊರೆತಿದೆ ಎಂದು ವಿವರಿಸಿದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ರೂ. ೧೩.೬೪ ಲಕ್ಷ ಬಡ್ಡಿ ಪಾವತಿ, ಕೊರೊನಾದಿಂದ ಚಟುವಟಿಕೆಗಳಿಗೆ ತೊಡಕು, ಸಾಲ ಮರುಪಾವತಿಯಲ್ಲಿ ಹಿನ್ನಡೆಯಿಂದ ಲಾಭ ಕಡಿಮೆಯಾಗಿದೆ. ಕಾಫಿ ಮಂಡಳಿಯ ವ್ಯಾಜ್ಯಕ್ಕೆ ಸಂಬAಧಿಸಿದAತೆ ರೂ. ೫ ಕೋಟಿಯಷ್ಟು ಬಡ್ಡಿ ಪಾವತಿಸಲು ನ್ಯಾಯಾಲಯದ ಆದೇಶ ಹಿನ್ನೆಲೆ ಈ ಬಗ್ಗೆ ಸಂಘದಿAದ ರಾಜ್ಯ ಉಚ್ಚನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದು, ಇದು ಇತ್ಯರ್ಥಕ್ಕೆ ಬಾಕಿ ಇದೆ ಎಂದು ತಿಳಿಸಿದ ಅವರು, ಸಂಘದ ಪ್ರಗತಿಗೆ ದುಡಿಯಲಾಗುತ್ತಿದೆ. ತಾ. ೨೨ ರಂದು ಬೆಳಿಗ್ಗೆ ೧೧ ಗಂಟೆಗೆ ಕೊಡವ ಸಮಾಜ ಸಭಾಂಗಣದಲ್ಲಿ ಮಹಾಸಭೆ ನಡೆಯಲಿದೆ ಎಂದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಎಸ್.ಪಿ. ಪೊನ್ನಪ್ಪ, ನಿರ್ದೇಶಕರುಗಳಾದ ಪಾಸುರ ಕಾವೇರಪ್ಪ, ಚೆಟ್ರಂಡ ಲೀಲಾ ಮೇದಪ್ಪ, ನಾಪಂಡ ರವಿ ಕಾಳಪ್ಪ, ವ್ಯವಸ್ಥಾಪಕ ಮುಕ್ಕಾಟೀರ ನಾಣಯ್ಯ ಹಾಜರಿದ್ದರು.