ಮಡಿಕೇರಿ, ಸೆ. ೧೯: ತಾ. ೧೬ ರಂದು ಮಂಗಳೂರಿನಲ್ಲಿ ನಡೆದ ವಿಭಾಗ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ ಜಿಲ್ಲೆಯ ಪಿ.ಎ. ಪುರುಷೋತ್ತಮ ಅವರ ಪುತ್ರ ಜಸ್ವಿತ್ ಬೋಪಣ್ಣ ಹಾಗೂ ಮಂಡಿರ ರೋಶನ್ ಅವರ ಪುತ್ರ ಸಾಸ್ವಿತ್ ಸೋಮಣ್ಣ ಮಂಗಳೂರು ವಿಭಾಗ ತಂಡದ ಪರ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಡಲು ಆಯ್ಕೆಯಾಗಿದ್ದಾರೆಂದು ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ರಘು ಮಾದಪ್ಪ ಅವರು ತಿಳಿಸಿದ್ದಾರೆ.