ಕಡಂಗ, ಸೆ. ೧೮: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಯುವ ಮೋರ್ಚಾದ ವತಿಯಿಂದ ಬೆಳ್ಳುಮಾಡು ಸೇತುವೆಯಿಂದ ಕುಂಜಲಗೇರಿ ಭಗವತಿ ದೇವಸ್ಥಾನದವರೆಗೆ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು,
ಗ್ರಾಮದ ಹಿರಿಯರು ಕಿರಿಯರು ಮಹಿಳೆಯರು ಹಾಗೂ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾದ ಚರ್ಮಂಡ ಅಪ್ಪುಣು ಪೂವಯ್ಯ, ಕಾಕೋಟುಪರಂಬು ಶಕ್ತಿ ಕೆಂದ್ರದ ಅಧ್ಯಕ್ಷ ಮುಕ್ಕಾಟಿರ ಬಿನ್ನು ಮುದ್ದಪ್ಪ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕುಂಜಲಗೇರಿ ಬೂತ್ ಸಮಿತಿ ಅಧ್ಯಕ್ಷ ಕುಳಿಯಕಂಡ ಪೊನ್ನಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಬಟ್ಟಕಾಳಂಡ ಕಾಮಿ ಸುರೇಶ್, ಕೃಷಿ ಮೋರ್ಚಾದ ಉಪಾಧ್ಯಕ್ಷ ಪಾಲೆಕಂಡ ಪ್ರವೀಣ್ ತಿಮ್ಮಯ್ಯ ಮತ್ತು ಶಕ್ತಿ ಕೇಂದ್ರದ ಯುವ ಮೋರ್ಚಾದ ಅಧ್ಯಕ್ಷ ಹಾಗೂ ಕುಂಜಲಗೇರಿ ಬೂತ್ ಸಮಿತಿ ಕಾರ್ಯದರ್ಶಿಯಾದ ಗಿರೀಶ್ ರೈ ಪಾಲ್ಗೊಂಡಿದ್ದರು.