ಗುರುವಾಯೂರು ದೇವಾಲಯಕ್ಕೆ ರೂ. ೧.೫೦ ಕೋಟಿ ದೇಣಿಗೆ

ತಿರುವನಂತಪುರA, ಸೆ. ೧೮: ಇತ್ತೀಚಿಗೆ ತಿರುಪತಿ ವೆಂಕಟೇಶ್ವರ ದೇವಾಲ ಯಕ್ಕೆ ೧.೫ ಕೋಟಿ ರೂಪಾಯಿ ದೇಣಿಗೆ ನೀಡಿದ್ದ ರಿಲಯನ್ಸ್ ಇಂಡಸ್ಟಿçÃಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ, ಇದೀಗ ಕೇರಳದ ಪ್ರಸಿದ್ಧ ದೇವಾಲಯ ಗುರುವಾಯೂರು ದೇವಾಲಯಕ್ಕೂ ೧.೫೧ ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಅನಂತ್ ಅಂಬಾನಿ ನಿಶ್ಚಿತಾರ್ಥ ಮಾಡಿಕೊಂಡಿರುವ ರಾಧಿಕಾ ಮರ್ಚೆಂಟ್ ಜೊತೆಗೆ ಶನಿವಾರ ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದ ಮುಕೇಶ್ ಅಂಬಾನಿ, ದೇವರ ದರ್ಶನ ಪಡೆದು, ಅನ್ನದಾನ ನಿಧಿಗಾಗಿ ಒಂದೂವರೆ ಕೋಟಿ ರೂಪಾಯಿ ದೇಣಿಗೆ ನೀಡಿರುವ ವಿಚಾರವನ್ನು ದೇವಾಲಯದ ಆಡಳಿತ ಮಂಡಳಿಯ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ವೇಳೆ ಸುಮಾರು ರೂ. ೫೦ ಕೋಟಿ ವೆಚ್ಚದ ಹೊಸ ವೈದ್ಯಕೀಯ ಕೇಂದ್ರ ನಿರ್ಮಿಸುವ ಯೋಜನೆಗೆ ನೆರವು ನೀಡುವಂತೆ ದೇವಾಲಯ ಆಡಳಿತ ಮಂಡಳಿ ಮುಂದಿಟ್ಟ ಬೇಡಿಕೆಯನ್ನು ಪರಿಗಣಿಸುವುದಾಗಿ ಅವರು ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮಾವೋವಾದಿ ನಾಯಕನನ್ನು ಬಂಧಿಸಿದ ಮಹಾ ಎಟಿಎಸ್

ಮುಂಬೈ, ಸೆ. ೧೮: ಜಾರ್ಖಂಡ್‌ನ ಮಾವೋವಾದಿ ನಾಯಕನನ್ನು ಮಹಾರಾಷ್ಟçದ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಭಾನುವಾರ ಪಾಲ್ಘರ್ ಜಿಲ್ಲೆಯಿಂದ ಬಂಧಿಸಿದೆ. ಈ ನಕ್ಸಲ್ ನಾಯಕನ ತಲೆಗೆ ೧೫ ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಜಾರ್ಖಂಡ್ ಪೊಲೀಸ್ ವೆಬ್‌ಸೈಟ್‌ನಲ್ಲಿ ಬಂಧಿತ ನಕ್ಸಲ್ ನಾಯಕನ ಹೆಸರನ್ನು ದೀಪಕ್ ಯಾದವ್ ಅಲಿಯಾಸ್ ಕರು ಹುಲಾಸ್ ಯಾದವ್ ‘ಮೋಸ್ಟ್ ವಾಂಟೆಡ್ ನಕ್ಸಲ್' ಪಟ್ಟಿಯಲ್ಲಿರುವುದಾಗಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜಾರ್ಖಂಡ್‌ನಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಪ್ರಾದೇಶಿಕ ಸಮಿತಿ ಸದಸ್ಯ ಯಾದವ್ (೪೫) ವೈದ್ಯಕೀಯ ಚಿಕಿತ್ಸೆಗಾಗಿ ಮಹಾರಾಷ್ಟçಕ್ಕೆ ಬಂದಿದ್ದ. ಈ ವೇಳೆ ಆತನನ್ನು ಬಂಧಿಸಲಾಗಿದೆ. ಇಂದು ಬೆಳಿಗ್ಗೆ ನಡೆದ ಕಾರ್ಯಾ ಚರಣೆಯಲ್ಲಿ, ಮಹಾರಾಷ್ಟçದ ಭಯೋತ್ಪಾದನಾ ನಿಗ್ರಹ ದಳವು ರಾಜ್ಯ ರಾಜಧಾನಿ ಮುಂಬೈನಿAದ ೫೦ ಕಿ.ಮೀ. ದೂರದಲ್ಲಿರುವ ಪಾಲ್ಘರ್‌ನ ನಲ ಸೋಪಾರಾ ಪ್ರದೇಶದ ಚಾಲ್ (ವಠಾರ) ಮೇಲೆ ದಾಳಿ ನಡೆಸಿ ನಕ್ಸಲ್ ನಾಯಕನನ್ನು ಬಂಧಿಸಿದೆ.

ಯಡಿಯೂರಪ್ಪ, ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದ ಲೋಕಾಯುಕ್ತ

ಬೆಂಗಳೂರು, ಸೆ. ೧೮: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬAಧಿಸಿದAತೆ ಯಡಿಯೂರಪ್ಪ ಹಾಗೂ ಅವರ ಕುಟುಂಬದ ಹಲವು ಸದಸ್ಯರ ವಿರುದ್ಧ ಲೋಕಾಯುಕ್ತ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕುಟುಂಬ ಸದಸ್ಯರು ಅಧಿಕಾರ ದುರುಪಯೋಗಪಡಿಸಿಕೊಂಡು ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣ ಕುರಿತು ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಕಳೆದ ಬುಧವಾರ ಆದೇಶಿಸಿತ್ತು. ಕೋರ್ಟ್ ಆದೇಶದಂತೆ ಯಡಿಯೂರಪ್ಪ ಹಾಗೂ ಅವರ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ, ಅವರ ಮೊಮ್ಮಗ ಮತ್ತು ಆಗಿನ ಬಿಡಿಎ ಆಯುಕ್ತರು ಸೇರಿದಂತೆ ಬಿಜೆಪಿಯ ಹಿರಿಯ ನಾಯಕ ಮತ್ತು ಅವರ ಸಂಬAಧಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಸತಿ ಯೋಜನೆಗೆ ಗುತ್ತಿಗೆ ನೀಡುವ ಸಲುವಾಗಿ ರಾಮಲಿಂಗA ಕನ್ಸ್ಸ್ಟçಕ್ಷನ್ ಕಂಪೆನಿಯಿAದ ಕೋಟ್ಯಂತರ ರೂಪಾಯಿ ನಗದು ಹಾಗೂ ಶೆಲ್ ಕಂಪೆನಿಗಳ ಮೂಲಕ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ದೂರು ನೀಡಿದ್ದರು.