ಕೂಡಿಗೆ, ಸೆ. ೧೮: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದ ಮಲ್ಲಿಕಾರ್ಜುನ ಎಂಬವರ ಜಮೀನಿಗೆ ಕಾಡಾನೆಗಳು ಧಾಳಿ ಮಾಡಿ ಬೆಳೆ ನಾಶಗೊಳಿಸಿವೆ.
ಆನೆಕಾಡು ವ್ಯಾಪ್ತಿಯ ಅತ್ತೂರು ಪ್ರದೇಶದ ನಾಲ್ಕುಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೆಂಡೆಬೆಟ್ಟದ ಮೂಲಕ ದೊಡ್ಡತ್ತೂರು ಗ್ರಾಮದ ಕೆಲ ರೈತರ ಜಮೀನಿಗೆ ದಾಳಿ ಮಾಡಿ ಮರಗೆಣಸು, ಬಾಳೆ, ಸಿಹಿಗೆಣಸು ಸೇರಿದಂತೆ ಶುಂಠಿ ಬೆಳೆಗಳನ್ನು ತಿಂದು ತುಳಿದು ಬಾರಿ ನಷ್ಟಪಡಿಸಿವೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿ ವರ್ಗ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದಾರೆ.