ಬೆಂಗಳೂರು, ಸೆ. ೧೮ : ಕಳೆದ ಕೆಲ ವರ್ಷಗಳಿಂದ ಚರ್ಚೆಯಲ್ಲಿದ್ದ ನಾಗರಹೊಳೆ ಮತ್ತು ಬಂಡೀಪುರದ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಬರುವ ಎರಡು ರೈಲ್ವೆ ಮಾರ್ಗ ನಿರ್ಮಾಣ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಸುದ್ದಿ ಗಾರರಿಗೆ ತಿಳಿಸಿದರು.
ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅವರ ಜೊತೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ನಮ್ಮ ಪರಿಸರ, ಸಂಪತ್ತಿನ ರಕ್ಷಣೆ ವಿಚಾರದಲ್ಲಿ ಯಾವುದೇ ರೀತಿಯಲ್ಲಿಯೂ ರಾಜಿಯಾಗಲು ಸಾದ್ಯವಿಲ್ಲ ಎಂದು ಸ್ಪಷ್ಟಪಡಿಸಿದರು..
ಕೇರಳ ಮುಖ್ಯಮಂತ್ರಿ ವಿಜಯನ್ ಅವರು ಮೂರು ವಿಚಾರಗಳ ಕುರಿತು ಚರ್ಚೆ ನಡೆಸಿದರು. ಅದರಲ್ಲಿ ಮೈಸೂರು -ಕಣ್ಣೂರು ರೈಲ್ವೇ ಮಾರ್ಗ ನಿರ್ಮಾಣ ಕೂಡ ಇತ್ತು . ನಮ್ಮ ರಾಜ್ಯದ ವ್ಯಾಪ್ತಿಯಲ್ಲಿ ೪೫ ಕಿಲೋಮೀಟರ್ ನಷ್ಟು ರೈಲ್ವೇ ಮಾರ್ಗ ಬರುತ್ತದೆ. ಈ ಯೋಜನೆಯನ್ನು ಕೇಂದ್ರ ರೈಲ್ವೇ ಇಲಾಖೆಯು ಈ ಹಿಂದೆಯೇ ತಿರಸ್ಕರಿ ಸಿತ್ತು. ನಂತರ ಉಭಯ ರಾಜ್ಯದವರು ಒಪ್ಪಿಗೆ ಕೊಟ್ಟರೆ ಪರಿಗಣಿಸುವುದಾಗಿ ತಿಳಿಸಿತ್ತು. ಹಾಗಾಗಿ ವಿಜಯನ್ ಬಂದು ಚರ್ಚಿಸಿದರು.
ಆದರೆ ನಾವು ಕೇರಳದ ಪ್ರಸ್ತಾಪವನ್ನು ತಿರಸ್ಕಾರ ಮಾಡಿ ದ್ದೇವೆ. ಈ ಮಾರ್ಗ ಸುಬ್ರಮಣ್ಯ, ಸುಳ್ಯ ಭಾಗದಲ್ಲಿ ಬರುತ್ತದೆ. ಇದು ಇಕೋಸೆನ್ಸಿಟಿವ್ ಜೋನ್ ಆಗಿದೆ. ಅಲ್ಲದೆ ನಮ್ಮ ರಾಜ್ಯದ ಪ್ರಯಾಣಿಕರಿಗೆ ಲಾಭದಾಯಕವೂ ಅಲ್ಲ. ಹಾಗಾಗಿ (ಮೊದಲ ಪುಟದಿಂದ) ತಿರಸ್ಕರಿಸಿದ್ದೇವೆ. ಕೇರಳ ಮೈಸೂರು ಮಾರ್ಗದ ಬಗ್ಗೆ ಚರ್ಚೆಯಾಯಿತು. ಆದರೆ ಇದು, ನಾಗರಹೊಳೆ, ಬಂಡೀಪುರ ಇಕೋಸೆನ್ಸಿಟಿವ್ ಜೋನ್ ವ್ಯಾಪ್ತಿಗೆ ಬರಲಿದ್ದು, ಹುಲಿ ಮತ್ತು ಆನೆ ಕಾರಿಡಾರ್ ಇರುವ ಸ್ಥಳವಾಗಿದೆ. ಹಾಗಾಗಿ ನಮ್ಮ ಪರಿಸರ ಸಂಪತ್ತಿನ ರಕ್ಷಣೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಕೇರಳ ಮುಖ್ಯಮಂತ್ರಿಗೆ ತಿಳಿಸಿದ್ದಾಗಿ ಬೊಮ್ಮಾಯಿ ಹೇಳಿದರು.
ಅರಣ್ಯ ವ್ಯಾಪ್ತಿಗೆ ಧಕ್ಕೆಯಾಗದಂತೆ ಸುರಂಗ ಮಾರ್ಗವನ್ನಾದರೂ ಮಾಡಲು ಒಪ್ಪಿಗೆ ನೀಡಿ ಎಂದು ಕೇರಳ ಸಿಎಂ ವಿನಂತಿಸಿಕೊAಡಿದ್ದರು. ಆದರೆ ಅದನ್ನೂ ನಾವು ಒಪ್ಪಲಿಲ್ಲ. ಸುರಂಗ ಮಾರ್ಗ ನಿರ್ಮಾಣಕ್ಕೆ ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶವಾಗಲಿದೆ. ಅಲ್ಲದೆ ಸುರಂಗ ನಿರ್ಮಾಣದ ಪರಿಣಾಮ ಭೂಮಿಯ ಮೇಲೆಯೂ ಆಗಲಿದೆ. ಹಾಗಾಗಿ ಸುರಂಗ ಮಾರ್ಗಕ್ಕೂ ಒಪ್ಪಿಗೆ ನೀಡಿಲ್ಲ ಎಂದರು. ನಂತರ ರಾತ್ರಿ ವೇಳೆ ನಾಗರಹೊಳೆ, ಬಂಡೀಪುರ ಮಾರ್ಗದಲ್ಲಿ ೨ ಬಸ್ ಬದಲು ೪ ಬಸ್ ಸಂಚಾರಕ್ಕೆ ಅನುಮತಿ ನೀಡುವಂತೆ ಕೇಳಲಾಯಿತು.
ಆದರೆ ಆ ಪ್ರಸ್ತಾವನೆಯನ್ನೂ ಕೂಡ ತಿರಸ್ಕರಿಸಿದ್ದೇವೆ. ನಾಗರಹೊಳೆ ಮತ್ತು ಬಂಡೀಪುರ ಪರಿಸರ ಸೂಕ್ಷö್ಮ ವಲಯ ಆಗಿರುವ ಕಾರಣ ಅವರ ಪ್ರಸ್ತಾಪ ನಾವು ಒಪ್ಪುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಬಗ್ಗೆ ರಾಜ್ಯಕ್ಕೆ ಕೇಂದ್ರದಿAದ ಯಾವುದೇ ಪ್ರಸ್ತಾಪ ಬಂದಿಲ್ಲ. ಅವರು ಪ್ರಸ್ತಾಪ ಕಳಿಸಿದ ನಂತರ ನಾವು ಪರಿಶೀಲಿಸಿ ನಿರ್ಧಾರ ಮಾಡಲಿದ್ದೇವೆ. ಆದರೆ ಯಾವ ಕಾರಣಕ್ಕೂ ಪರಿಸರ ಸೂಕ್ಷö್ಮ ಪ್ರದೇಶದ ವಿಚಾರದಲ್ಲಿ ನಾವು ರಾಜಿಯಾಗುವುದಿಲ್ಲ ಎಂದು ಸಿಎಂ ತಿಳಿಸಿದರು.
ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಪರಿಸರವಾದಿಗಳು ಸ್ವಾಗತಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ನಾಗರಹೊಳೆಯ ಮಾಜಿ ಅರಣ್ಯಾಧಿಕಾರಿ ಹಾಗೂ ಪರಿಸರವಾದಿ ಕೆ.ಎಂ. ಚಿಣ್ಣಪ್ಪ ಅವರು ಕೇಂದ್ರ ಸರ್ಕಾರ ಬಹಳ ಹಿಂದೆಯೇ ಈ ಯೋಜನೆಯನ್ನು ತಿರಸ್ಕರಿಸಿದೆ. ಇದಕ್ಕೆ ಅನುಮತಿ ನೀಡಿದರೆ ದೊಡ್ಡ ಪ್ರಮಾಣದಲ್ಲಿ ಅರಣ್ಯ ಸಂಪತ್ತು , ಪರಿಸರ ನಾಶವಾಗುತಿತ್ತು ಎಂದು ಹೇಳಿದರು.
-ಕೋವರ್‌ಕೊಲ್ಲಿ ಇಂದ್ರೇಶ್