ಮಡಿಕೇರಿ, ಸೆ. ೧೮: ಕೊಡವ ಸಮಾಜಗಳು ಸೇರಿದಂತೆ ಕೊಡವ ಸಂಘಟನೆಗಳು ಜನಾಂಗದ ಶ್ರೇಯೋಭಿವೃದ್ಧಿಗಾಗಿಯೇ ಕೆಲಸ ನಿರ್ವಹಿಸಿಕೊಂಡು ಬರುತ್ತಿವೆ. ಆದರೆ ಈ ಸಮಾಜ-ಸಂಘಟನೆಗಳ ಕಾರ್ಯನಿರ್ವಹಣೆ ನಿಲುವಿಗೆ ಸಂಬAಧಿಸಿದAತೆ ಭಿನ್ನಾಭಿಪ್ರಾಯಗಳು ಪರಸ್ಪರ ಟೀಕೆಗಳು ಬರಬಾರದು ಎಂಬುದಾಗಿ ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ನಾಪಂಡ ಎಂ. ರವಿ ಕಾಳಪ್ಪ ಅವರು ಕರೆ ನೀಡಿದರು.

ಮಡಿಕೇರಿ ಕೊಡವ ಸಮಾಜದ ವತಿಯಿಂದ ಇಂದು ನಡೆದ ‘ಕೈಲ್ ಪೊಳ್ದ್’ ಸಂತೋಷ ಕೂಟ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಸ್ತುತದ ದಿನಗಳಲ್ಲಿ ಕೊಡವ ಸಮಾಜಗಳು ಏನೂ ಮಾಡುತ್ತಿಲ್ಲ ಎಂಬAತೆ ಅಲ್ಲಲ್ಲಿ ಅಸಮಾಧಾನದ ಮಾತುಗಳ ಮೂಲಕ ಟೀಕೆ ಮಾಡುತ್ತಿರುವಂತಹ ಬೆಳವಣಿಗೆಗಳು ಕಂಡುಬರುತ್ತಿವೆ. ಕೊಡವ ಸಮಾಜಗಳು ಜನಾಂಗದ ಅಭಿವೃದ್ಧಿ-ಸಂಸ್ಕೃತಿಯ ಉಳಿಕೆಗೆ ಹಿಂದಿ ನಿಂದಲೂ ಕೆಲಸ ನಿರ್ವಹಿಸಿಕೊಂಡು ಬರುತ್ತಿವೆ. ಆದರೆ ಈಗೀಗ ಜನಾಂಗದ ಪರವಾಗಿ ಹೋರಾಟ ನಡೆಸುವ ಸಂಘಟನೆಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೊಡವ ಸಮಾಜ ಗಳ ಬಗ್ಗೆ ಕೀಳಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಸಮಂಜಸವಲ್ಲ. ಕೊಡವತನಕ್ಕಾಗಿ ಎಲ್ಲರ ಪ್ರಯತ್ನ ಅವರವರ ನಿಲುವಿಗೆ, ಅವರವರ ಸಾಮರ್ಥ್ಯಕ್ಕೆ ಅನುಸಾರವಾಗಿ ಮುಂದುವರಿಯ ಬೇಕೇ ಹೊರತು ಪರÀಸ್ಪರ ಟೀಕೆಗಳು ಬೇಡ ಎಂಬುದಾಗಿ ರವಿ ಕಾಳಪ್ಪ ಅಭಿಪ್ರಾಯಪಟ್ಟರು.

‘ಕೈಲ್ ಪೊಳ್ದ್’ ಎಂಬುದು ಜನಾಂಗದ ಮೂರು ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಇದು ಕೊಡವರ ಆಯುಧ ಪೂಜೆ ಎಂಬುದಾಗಿ ಪರಿಪಾಲಿಸಿಕೊಂಡು ಬರಲಾಗುತ್ತಿದೆ. ಕೋವಿ, ಕತ್ತಿ, ಕೃಷಿ ಪರಿಕರಗಳನ್ನು ಪೂಜಿಸುವ ಈ ಹಬ್ಬದ ಮಹತ್ವವನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ. ಇದುವೇ ಈ ಜನಾಂಗದವರ ನೈಜ ಆಯುಧ ಪೂಜೆಯೂ ಆಗಿದೆ ಎಂಬುದಾಗಿ ಅವರು ಹೇಳಿದರು.

ಪ್ರಕೃತಿ, ಪರಿಸರ, ಪ್ರಾಣಿ-ಪಕ್ಷಿಗಳ ಮಹತ್ವವನ್ನೂ ಅರಿತುಕೊಳ್ಳಬೇಕಿದೆ. ಪ್ರಸ್ತುತ ಈ ಬಗ್ಗೆ ಜನರು ಜಾಗೃತರಾಗುತ್ತಿದ್ದಾರೆ ಎಂದ ಅವರು, ಇವುಗಳ ರಕ್ಷಣೆ-ಪೋಷಣೆ ಕೂಡ ಜವಾಬ್ದಾರಿ ಎಂಬುದನ್ನು ಅರಿತು ಸಹಕರಿಸುವಂತೆ ಜೀವ ವೈವಿಧ್ಯ ಮಂಡಳಿಯ ಕುರಿತು ಪ್ರಸ್ತಾಪಿಸಿದ ಅವರು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ

ಜನಾಂಗದವರ ನೈಜ ಆಯುಧ ಪೂಜೆಯೂ ಆಗಿದೆ ಎಂಬುದಾಗಿ ಅವರು ಹೇಳಿದರು.

ಪ್ರಕೃತಿ, ಪರಿಸರ, ಪ್ರಾಣಿ-ಪಕ್ಷಿಗಳ ಮಹತ್ವವನ್ನೂ ಅರಿತುಕೊಳ್ಳಬೇಕಿದೆ. ಪ್ರಸ್ತುತ ಈ ಬಗ್ಗೆ ಜನರು ಜಾಗೃತರಾಗುತ್ತಿದ್ದಾರೆ ಎಂದ ಅವರು, ಇವುಗಳ ರಕ್ಷಣೆ-ಪೋಷಣೆ ಕೂಡ ಜವಾಬ್ದಾರಿ ಎಂಬುದನ್ನು ಅರಿತು ಸಹಕರಿಸುವಂತೆ ಜೀವ ವೈವಿಧ್ಯ ಮಂಡಳಿಯ ಕುರಿತು ಪ್ರಸ್ತಾಪಿಸಿದ ಅವರು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ

ಕೊಕ್ಕಲೆರ ಲೋಪಾಮುದ್ರ, ಹಾಕಿ ಆಟಗಾರ ಮಾತಂಡ ಆರ್ಯನ್ ಉತ್ತಪ್ಪ, ಹಾಕಿ ಆಟಗಾರ್ತಿ ಮಾಳೇಟಿರ ದಿಶಾ ಪೊನ್ನಮ್ಮ ಅವರುಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ನಂದಿನೆರವAಡ ಚೀಯಣ್ಣ, ಕಾರ್ಯದರ್ಶಿ ಕನ್ನಂಡ ಸಂಪತ್, ಜಂಟಿ ಕಾರ್ಯದರ್ಶಿ ನಂದಿನೆರವAಡ ದಿನೇಶ್ ಸೇರಿದಂತೆ ನಿರ್ದೇಶಕರುಗಳು ಉಪಸ್ಥಿತರಿದ್ದರು.

ಬೊಪ್ಪಂಡ ತಾರ ಪ್ರಾರ್ಥಿಸಿ, ನಂದಿನೆರವAಡ ಚೀಯಣ್ಣ ಸ್ವಾಗತಿಸಿದರು. ದಿನೇಶ್ ನಿರೂಪಿಸಿ, ಕನ್ನಂಡ ಸಂಪತ್ ವಂದಿಸಿದರು. ಕನ್ನಂಡ ಕವಿತಾ ಬೊಳ್ಳಪ್ಪ ಕ್ರೀಡಾ ಸಾಧಕರ ವಿವರವಿತ್ತರೆ, ಮೂವೆರ ಜಯರಾಂ ಸನ್ಮಾನಿತರ ಪರಿಚಯ ಮಾಡಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಆಯುಧ ಪೂಜೆ ನಡೆಸಲಾಯಿತು. ಬಳಿಕ ತೆಂಗಿನ ಕಾಯಿಗೆ ಗುಂಡು ಹೊಡೆಯುವುದು ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು. ಈ ಸಾಲಿನ ನೂತನ ಆಡಳಿತ ಮಂಡಳಿಯ ಪ್ರಥಮ ಕಾರ್ಯಕ್ರಮ ಇದಾಗಿತ್ತು.