ಗೋಣಿಕೊಪ್ಪಲು, ಸೆ.೧೮: ಗೋಣಿಕೊಪ್ಪ ದಸರಾ ಜನೋತ್ಸವ ಕಾರ್ಯಕ್ರಮವು ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಉತ್ತಮವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಮನವಿ ಮಾಡಿದರು.

ಗೋಣಿಕೊಪ್ಪಲುವಿನ ಆರ್.ಎಂ.ಸಿ.ಸಭಾAಗಣದಲ್ಲಿ ಶ್ರೀ ಕಾವೇರಿ ದಸರಾ ಸಮಿತಿ ಆಯೋಜಿಸಿದ್ದ ವಿವಿಧ ಸಮಿತಿಗಳ ಪದಾಧಿಕಾರಿಗಳ ಹಾಗೂ ಪ್ರಮುಖರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೋಪಯ್ಯ, ಕಳೆದ ನಾಲ್ಕು ವರ್ಷ ವಿವಿಧ ಕಾರಣಗಳಿಂದ ದಸರಾ ಆಯೋಜಿಸಲು ಸಾಧ್ಯವಾಗಲಿಲ್ಲ. ಈ ಬಾರಿ ಅತ್ಯಂತ ಯಶಸ್ವಿಯಾಗಿ ದಸರಾ ಜನೋತ್ಸವ ನಡೆಸಲು ಸರ್ಕಾರ ೫೦ ಲಕ್ಷ ಅನುದಾನ ಬಿಡುಗಡೆ ಮಾಡಿದೆ, ಹತ್ತು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಈ ಮಣ್ಣಿನ ಕಲೆ, ಸಂಸ್ಕೃತಿ ಆಚಾರ, ವಿಚಾರಗಳಿಗೆ ಯಾವುದೇ ಧÀಕ್ಕೆ ಆಗದ ರೀತಿಯಲ್ಲಿ ಕಾರ್ಯಕ್ರಮ ನಡೆಸಬೇಕು.

ಮುಂದಿನ ವಾರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪೂರಕ ನಿರ್ದೇಶನ ನೀಡಲಾಗುತ್ತದೆ, ಬೈಪಾಸ್ ರಸ್ತೆ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದೆ, ಕಾಂಕ್ರಿಟ್ ರಸ್ತೆ ಮಾಡಲಾಗುತ್ತದೆ, ದಸರಾ ದಿನದಂದು ಮಂಟಪಗಳು ಚಲಿಸಲು ರಸ್ತೆಯ ಗುಂಡಿ ಮುಚ್ಚುವ ಕೆಲಸ ಕೈಗೆತ್ತಿಕೊಳ್ಳಲಾಗುತ್ತದೆ ಎಂದರು. ವಿವಿಧ ಇಲಾಖೆಯ ವತಿಯಿಂದ ಸ್ತಬ್ಧ ಚಿತ್ರವನ್ನು ನಡೆಸಲಾಗುತ್ತದೆ, ಎಲ್ಲಾ ಕಾರ್ಯಕ್ರಮ ಉತ್ತಮವಾಗಿ ನಡೆಸುವ ಜವಾಬ್ದಾರಿಯನ್ನು ವಿವಿಧ ಸಮಿತಿಗಳು ನಿಭಾಯಿಸಬೇಕು ಎಂದರು.

ಸಭೆಯಲ್ಲಿ ಮಾತನಾಡಿದ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾದ ಬಿ.ಎನ್.ಪ್ರಕಾಶ್ ಈಗಾಗಲೇ ಹಲವು ಉಪ ಸಮಿತಿಗಳ ಸಭೆ ನಡೆಸಲಾಗಿದೆ, ಜವಾಬ್ದಾರಿ ಹಂಚಿಕೆ ಮಾಡಲಾಗಿದೆ, ದಸರಾ ದಿನದಂದು

(ಮೊದಲ ಪುಟದಿಂದ) ಬೆಳಿಗ್ಗೆ ೧೦ ಗಂಟೆಗೆ ಸ್ತಬ್ಧ ಚಿತ್ರ ಮೆರವಣಿಗೆ ಆರಂಭವಾಗಲಿದೆ. ರಾತ್ರಿ ೮ ಗಂಟೆಯ ನಂತರ ಮಂಟಪಗಳು ಉಮಾಮಹೇಶ್ವರಿ ದೇವಾಲಯದಿಂದ ಮೆರವಣಿಗೆ ಆರಂಭಿಸಲು ದಶ ಮಂಟಪಗಳು ಗಮನಹರಿಸಬೇಕು ಎಂದರು.

ಸಭೆಯಲ್ಲಿ ದಶಮಂಟಪದ ಅಧ್ಯಕ್ಷರಾದ ಕಾಡ್ಯಮಾಡ ಚೇತನ್, ಪ್ರಮುಖರಾದ ಗಿರೀಶ್ ಗಣಪತಿ, ರಾಮಕೃಷ್ಣ, ಚೈತ್ರ ಬಿ.ಚೇತನ್, ಸಿ.ಕೆ.ಬೋಪಣ್ಣ, ಕೆ.ಪಿ.ಬೋಪಣ್ಣ, ಪ್ರಮೋದ್ ಗಣಪತಿ, ಕೇಶವ್ ಕಾಮತ್, ಬಾಲಕೃಷ್ಣ ರೈ, ಮಲ್ಚೀರ ಗಾಂಧಿ ದೇವಯ್ಯ, ಸುನೀಲ್ ಮಾದಪ್ಪ, ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು. ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು, ದಶಮಂಟಪಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಜಪ್ಪು ಸುಬ್ಬಯ್ಯ ಸ್ವಾಗತಿಸಿ, ವಂದಿಸಿದರು.

ಕಾವೇರಿ ದಸರಾ ಸಮಿತಿ, ಸೌತ್ ಕೂರ್ಗ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ತಾ.೨೪ ಹಾಗೂ ೨೫ ರಂದು ಗೋಣಿಕೊಪ್ಪಲುವಿನಲ್ಲಿ ನಡೆಯಲಿರುವ ಆಟೋ ಕ್ರಾಸ್ ೨೦೨೨ ನ ಲೋಗೋ ಬಿಡುಗಡೆಯನ್ನು ಶಾಸಕ ಕೆ.ಜಿ.ಬೋಪಯ್ಯ ನೆರವೇರಿಸಿದರು. ಈ ವೇಳೆ ಸೌತ್ ಕೂರ್ಗ್ ಕ್ಲಬ್‌ನ ಚೆಪ್ಪುಡೀರ ಮಾಚು, ವಾಟೇರಿರ ಸೂರಜ್, ಸಿ.ಕೆ.ಬೋಪಣ್ಣ, ಗುಮ್ಮಟೀರ ದರ್ಶನ್, ಚಿಣ್ಣಪ್ಪ, ಕಾವೇರಿ ದಸರಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.