ಸೋಮವಾರಪೇಟೆ, ಸೆ. ೧೮: ಗೌಡಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಆಲೂರು ಸಿದ್ದಾಪುರ ಕ್ಲಸ್ಟರ್ ವತಿಯಿಂದ ನಡೆದ ತಾಲೂಕು ಮಟ್ಟದ ಹಾಕಿ ಪಂದ್ಯಾಟದಲ್ಲಿ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಗೌಡಳ್ಳಿ ಮಲ್ಲೇಶ್ವರ ಪ್ರೌಢಶಾಲೆ ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಯಿತು.
ಕೂಡಿಗೆಯ ಮೊರಾರ್ಜಿ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಹಟ್ಟಿಹೊಳೆಯ ನಿರ್ಮಲಾ ವಿದ್ಯಾಸಂಸ್ಥೆ ಪ್ರಥಮ ಹಾಗೂ ಗೌಡಳ್ಳಿಯ ಪ್ರೌಢಶಾಲೆ ದ್ವಿತೀಯ ಸ್ಥಾನವನ್ನು ಪಡೆಯಿತು.
ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಶನಿವಾರಸಂತೆ ಸರ್ಕಾರಿ ಪ್ರಾಥಮಿಕ ಶಾಲೆ ಮೊದಲ ಸ್ಥಾನವನ್ನು ಪಡೆಯಿತು. ದ್ವಿತೀಯ ಸ್ಥಾನವನ್ನು ಸೋಮವಾರಪೇಟೆ ಓಎಲ್‌ವಿ ಪ್ರಾಥಮಿಕ ಶಾಲೆ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಓಎಲ್‌ವಿ ಪ್ರಾಥಮಿಕ ಶಾಲೆ ಹಾಗು ದ್ವಿತೀಯ ಸ್ಥಾನವನ್ನು ಗೌಡಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆ ಗಳಿಸಿತು.
ಪಂದ್ಯಾಟಕ್ಕೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವೇದಣ್ಣ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಅಜ್ಜಳ್ಳಿ, ಗೌಡಳ್ಳಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಮಂಜಯ್ಯ, ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಮತ್ತಿತರರು ಇದ್ದರು. ತೀರ್ಪುಗಾರರಾಗಿ ಎನ್.ಎಂ. ನಾಗೇಶ್, ಬಿ.ಕೆ. ಶಿವಶಂಕರ, ಬಿ.ಎಸ್. ಆಶಾ, ಅಜಿತ್‌ಕುಮಾರ್, ಮಲ್ಲಿಕಾರ್ಜುನ, ರಮೇಶ್, ಮಹೇಂದ್ರ ಹಾಗು ಸುನೀಲ್ ಕಾರ್ಯನಿರ್ವಹಿಸಿದರು.