ಮಡಿಕೇರಿ, ಸೆ. ೧೮: ಅಂರ್ರಾಷ್ಟಿçÃಯ ಕಾಫಿ ಸಂಘಟನೆಯು (ಐ.ಸಿ.ಒ.) ಅಕ್ಟೋಬರ್ ೧ನ್ನು ‘ಅಂರ್ರಾಷ್ಟಿçÃಯ ಕಾಫಿ’ ದಿನವೆಂದು ಘೋಷಿಸಿದೆ. ಇದರ ಅಂಗವಾಗಿ ಕರ್ನಾಟಕ ರಾಜ್ಯದ ಕಾಫಿ ಬೆಳೆಯುವ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಸಮಸ್ತ ಕಾಫಿ ಬೆಳೆಗಾರರನ್ನು ಪ್ರತಿನಿಧಿಸುತ್ತಿರುವ ಕರ್ನಾಟಕ ಬೆಳೆಗಾರರ ಒಕ್ಕೂಟವು ಸ್ಥಳೀಯ ಬೆಳೆಗಾರ ಸಂಘಟನೆಗಳ ಸಹಭಾಗಿತ್ವದೊಂದಿಗೆ ಅಕ್ಟೋಬರ್ ೧ ರಂದು ಬೇಲೂರಿನಲ್ಲಿ ೮ನೇ ಅಂರ್ರಾಷ್ಟಿçÃಯ ಕಾಫಿ ದಿನಾಚರಣೆಯನ್ನು ಹಮ್ಮಿಕೊಂಡಿದೆ.
ತಾ. ೨೬ ರಿಂದ ಅಕ್ಟೋಬರ್ ೫ ರವರೆಗೆ ಪ್ರೇಕ್ಷಣೀಯ ಸ್ಥಳವಾದ ಬೇಲೂರಿನಲ್ಲಿ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವನ್ನು ಏರ್ಪಡಿಸಲಾಗಿದೆ. ಒಂಭತ್ತು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು, ಜನಪ್ರತಿನಿಧಿಗಳು ಭಾಗವಹಿಸಲಿದ್ದು, ಅಕ್ಟೋಬರ್ ೧ ರಂದು ಅಂರ್ರಾಷ್ಟೀಯ ಕಾಫಿ ದಿನಾಚರಣೆಯನ್ನೂ ಈ ವೇದಿಕೆಯಲ್ಲಿಯೇ ನಡೆಸಿದರೆ ಹೆಚ್ಚು ಅರ್ಥಪೂರ್ಣ ಹಾಗೂ ಪರಿಣಾಮಕಾರಿಯಾಗಲಿದೆೆಂದು ಅರಿತು ಅಂರ್ರಾಷ್ಟಿçÃಯ ಕಾಫಿ ದಿನದ ಆಚರಣೆಗೆ ನಿರ್ಧರಿಸಲಾಗಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ಪ ತಿಳಿಸಿದ್ದಾರೆ.