ಗೋಣಿಕೊಪ್ಪ ವರದಿ, ಸೆ. ೧೮: ಕಕೂನ್ ಸಭಾಂಗಣದಲ್ಲಿ ಗೋಣಿಕೊಪ್ಪ ರೋಟರಿ ಕ್ಲಬ್ ವತಿಯಿಂದ ಶುಕ್ರವಾರ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಚೂರಿಕಾಡು ಸರ್ಕಾರಿ ಪ್ರೌಢÀಶಾಲೆ ಶಿಕ್ಷಕಿ ಬಿ.ಕೆ. ಜಯಲಕ್ಷಿö್ಮ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಪ್ರೊಫೆಸರ್ ಮುಕ್ಕಾಟೀರ ಎನ್. ರಮೇಶ್ ಅವರುಗಳನ್ನು ಸನ್ಮಾನಿಸಲಾಯಿತು. ಸದಸ್ಯರಿಗೆ ಹಾಡುಗಾರಿಕೆ, ಮನರಂಜನೆ ಕ್ರೀಡೆ ನಡೆಯಿತು.

ನೀರಿನ ಸದ್ಭಳಕೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕಲುಷಿತ ನೀರು, ಸಂರಚನೆ ವಿಘಟಿತವಾಗಿರುವ ನೀರು ಶಕ್ತಿ ಕಳೆದುಕೊಂಡಿರುವ ಬಗ್ಗೆ, ಮಣ್ಣು ಮತ್ತು ಇಳುವರಿ ಮೇಲೆ ಪರಿಣಾಮ ಬೀರುವುದನ್ನು ನಿಯಂತ್ರಿಸಲು ಬೇಕಾದ ಮಾರ್ಗೋಪಾಯವನ್ನು ಖಜಾಂಚಿ ಮಾಚಿಮಂಡ ಕಿಶೋರ್ ಮಾದಪ್ಪ ಈ ಸಂದರ್ಭ ತಿಳಿಸಿಕೊಟ್ಟರು.

ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷೆ ಜೆ. ಕೆ. ಸುಭಾಷಿಣಿ, ಕಾರ್ಯದರ್ಶಿ ಅರುಣ್, ತಮ್ಮಯ್ಯ ಇದ್ದರು.