ಕುಶಾಲನಗರ, ಸೆ. ೧೮: ಕುಶಾಲನಗರದಲ್ಲಿ ಕೊರಿಯರ್ ಮೂಲಕ ನಡೆದ ವಂಚನೆ ಪ್ರಕರಣದಲ್ಲಿ ನಕಲಿ ಮೊಬೈಲ್ ಚಾರ್ಜರ್‌ಗಳನ್ನು ಬಳಸಿ ೨೫ ಲಕ್ಷ ರೂಗಳಿಗೂ ಅಧಿಕ ಹಣ ವಂಚನೆ ಮಾಡಿರುವುದಾಗಿ ಪೊಲೀಸ್ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಅವರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ಪ್ರಕರಣಕ್ಕೆ ಸಂಬAಧಿಸಿದAತೆ ಐದು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳಾದ ಮಂಗಳೂರು ಸುರತ್ಕಲ್‌ನ ಹಿತೇಶ್ ರೈ, ಗುಡ್ಡೆಹೊಸೂರು
(ಮೊದಲ ಪುಟದಿಂದ) ಬೊಳ್ಳೂರು ಗ್ರಾಮದ ಎಸ್ ಆರ್ ಧರ್ಮ, ರಂಗಸಮುದ್ರ ಗ್ರಾಮದ ತೀರ್ಥೇಶ್ ರೈ, ಕುಶಾಲನಗರದ ಆದಿ ಶಂಕರಚಾರ್ಯ ಬಡಾವಣೆಯ ಎಂ.ಟಿ ಕೀರ್ತನ್ ಮತ್ತು ಶಿರಂಗಾಲ ಗ್ರಾಮದ ಎಸ್. ಆರ್ ವಿನಯ್ ಎಂಬ ಐದು ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆರೋಪಿಗಳಿಂದ ೧೪ ಲಕ್ಷದ ಇಪ್ಪತ್ತು ಸಾವಿರ ನಗದು ಹಣ, ೭೩,೫೦೦ ರೂ. ಬೆಲೆಬಾಳುವ ಆಪಲ್ ಕಂಪನಿಗೆ ಸೇರಿದ ಒರಿಜಿನಲ್ ಮೊಬೈಲ್ ಚಾರ್ಜರ್‌ಗಳು, ೧೬ ಬಾಕ್ಸ್ನಲ್ಲಿದ್ದ ೧೮೭೪ ನಕಲಿ ಮೊಬೈಲ್ ಚಾರ್ಜರ್‌ಗಳು ಮತ್ತು ಕೃತ್ಯಕ್ಕೆ ಬಳಸಿದ ಮೂರು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಕುಶಾಲನಗರದಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯ ರಸ್ತೆಯ ಬಟ್ಟೆಯ ಅಂಗಡಿಯೊAದರ ವಿಳಾಸದಲ್ಲಿ ವಿನಾಯಕ ಟ್ರೇಡಿಂಗ್ ಎಂಬ ಬೇನಾಮಿ ವಿಳಾಸ ನೀಡಿ ಲಕ್ಷಾಂತರ ಮೌಲ್ಯದ ಮೊಬೈಲ್‌ಗಳನ್ನು ಕೊರಿಯರ್ ಮೂಲಕ ಶಿಫ್ಟ್ ಮೆಂಟ್ ಮಾಡುತ್ತಿದ್ದರು. ಕೊರಿಯರ್ ಮೂಲಕ ಬಂದ ಬಾಕ್ಸ್ಗಳನ್ನು ಈ ಬಟ್ಟೆ ಅಂಗಡಿಯಲ್ಲಿ ಓಪನ್ ಮಾಡಿ ನಕಲಿ ಚಾರ್ಜರ್‌ಗಳನ್ನು ತುಂಬಿಸಿ ಅಂಗಡಿಗಳಿಗೆ ನೀಡುತ್ತಿದ್ದರು.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಅವರ ನಿರ್ದೇಶನದಂತೆ ಸೋಮವಾರಪೇಟೆ ಉಪವಿಭಾಗ ಪೊಲೀಸ್ ಉಪ ಅಧೀಕ್ಷಕ ಆರ್.ವಿ. ಗಂಗಾಧರಪ್ಪ ನೇತೃತ್ವದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರಾದ ಬಿ.ಜಿ. ಮಹೇಶ್, ಕುಶಾಲನಗರ ಪಟ್ಟಣ ಪೊಲೀಸ್ ಠಾಣಾಧಿಕಾರಿ ಎಂ ಡಿ ಅಪ್ಪಾಜಿ, ಪ್ರೊಬೆಷನರಿ ಪಿಎಸ್‌ಐ ಕಾಶಿನಾಥ ಬಗಲಿ, ಎಎಸ್‌ಐ ಪಿ.ಕೆ. ಗಣಪತಿ, ಸಿಬ್ಬಂದಿಗಳಾದ ಜಯಪ್ರಕಾಶ್, ಸಂದೀಪ್, ಅರುಣ್ ಕುಮಾರ್, ಮನೋಜ್ ಕುಮಾರ್, ಸಿದ್ದರಾಜು, ಸೌಮ್ಯ, ರಾಜೇಶ್, ಗಿರೀಶ್, ಪ್ರವೀಣ್, ಚಾಲಕ ಯೋಗೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ಪ್ರಕರಣವನ್ನು ಪತ್ತೆಹಚ್ಚಿದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪೊಲೀಸ್ ವರಿಷ್ಠಾಧಿಕಾರಿಗಳು ನಗದು ಬಹುಮಾನವನ್ನು ಘೋಷಿಸಿದ್ದಾರೆ.