ನಾಪೋಕ್ಲು, ಸೆ. ೧೮: ವೈಶಿಷ್ಟö್ಯ ಪೂರ್ಣವಾದ ಅರೆಭಾಷೆ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ, ಬೆಳೆಸುವಂತಾಗಬೇಕೆAದು ಶಾಸಕ ಕೊಂಬಾರನ ಜಿ. ಬೋಪಯ್ಯ ಕರೆ ನೀಡಿದರು. ಸುಮಾರು ೨.೫೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾರುಗುಂದ ದಲ್ಲಿ ನೂತನವಾಗಿ ನಿರ್ಮಿಸಲಾಗಿ ರುವ ಚೇರಂಬಾಣೆ ಗೌಡ ಸಮಾಜದ ಸಭಾಭವನ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಅರೆಭಾಷೆ ಸಮುದಾಯ ಬಾಂಧವರು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡುತ್ತಿದ್ದು, ರಾಜ್ಯಕ್ಕೆ ಮತ್ತು ದೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ ಮಾತನಾಡಿ, ಕಾರುಗುಂದದಲ್ಲಿ ಇಂದು ಭವ್ಯಕಟ್ಟಡ ತಲೆ ಎತ್ತಿ ನಿಲ್ಲಲು ಕೊಡಪಾಲು ಗಣಪತಿ ಮತ್ತು ಅವರ ತಂಡದ ಪರಿಶ್ರಮ ಕಾರಣವಾಗಿದೆ. ಸಮುದಾಯ ಬಾಂಧವರು ಸಭಾಭವನವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ ಮಾತನಾಡಿ, ವಿಶಿಷ್ಟ ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ಅರೆಭಾಷೆಯ ಸಾಹಿತ್ಯ ರಚನೆಯಲ್ಲಿ ಯುವ ಸಮುದಾಯ ತೊಡಗಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಎಸ್. ಗಪ್ಪು ಗಣಪತಿ ಮಾತನಾಡಿ, ಸರ್ಕಾರ ಮತ್ತು ದಾನಿಗಳ ನೆರವಿನೊಂದಿಗೆ ೧ ಎಕರೆ ಜಾಗದಲ್ಲಿ ೨.೫೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನೂತನ ಸಭಾ ಭವನ ನಿರ್ಮಿಸಲಾಗಿದೆ. ೧೮ ಗ್ರಾಮಗಳ ದಾನಿಗಳು ಸಹಕಾರ ನೀಡಿದ್ದಾರೆ ಎಂದರು.
ಉದ್ಯಮಿಗಳಾದ ಕೇಕಡ ಎ.ನಂದ ನೂತನ ಸಭಾಂಗಣವನ್ನು ಉದ್ಘಾಟಿಸಿದರು. ಬೆಂಗಳೂರಿನ ಹೃದ್ರೋಗ ಹಾಗೂ ಮಧುಮೇಹ ತಜ್ಞರಾದ ಡಾ.ಬೋಜಮ್ಮ ಜೋಯಪ್ಪ ಬೈತಡ್ಕ ವೇದಿಕೆಯನ್ನು ಉದ್ಘಾಟಿಸಿ ದರು. ಈ ಸಂದರ್ಭ ತೇನನ ಎಸ್. ರಾಜೇಶ್, ಆರ್ಕಿಟೆಕ್ಟ್ ಇಂಜನಿಯರ್ ಮುಕ್ಕಾಟಿ ಎ. ಮನೋಜ್ ಕುಮಾರ್ ಮಾತನಾಡಿದರು. ಕುಂದಚೇರಿ ನಿವೃತ್ತ ಇಂಜಿನಿಯರ್ ಕೆದಂಬಾಡಿ ಆರ್. ರಾಜು, ಗೌಡ ಸಮಾಜದ ಉಪಾಧ್ಯಕ್ಷ ಕೇಕಡ ಎ.ದಿನೇಶ್, ಖಜಾಂಚಿ ಬೈಮನ ಬಿ.ಹರೀಶ್, ನಿರ್ದೇಶಕರಾದ ಪೊಡನೋಲನ ಟಿ.ಶ್ರೀನಿವಾಸ್, ಎಡಿಕೇರಿ ಪ್ರವೀಣ, ತೊತ್ತಿಯನ ಚೇತಕ್, ಕೂರನ ಮೋಹನ್, ನೈಯ್ಯಣಿ ಜಯಪ್ರಕಾಶ್, ಕೂಡಕಂಡಿ ಕಾವೇರಮ್ಮ ಸೋಮಣ್ಣ, ನೈಯ್ಯಣಿ ಹೇಮಲತಾ,
(ಮೊದಲ ಪುಟದಿಂದ) ಮುಕ್ಕಾಟಿ ವೇದಾವತಿ ಇತರರು ಉಪಸ್ಥಿತರಿದ್ದರು. ಗೌಡ ಸಮಾಜದ ಕಾರ್ಯದರ್ಶಿ ಬೆಳ್ಯನ ಚಂದ್ರಪ್ರಕಾಶ್ (ರವಿ) ಪ್ರಾಸ್ತಾವಿಕವಾಗಿ ಮಾತನಾಡಿದರು.
ನಿರ್ದೇಶಕರಾದ ಕೊಡಗನ ತೀರ್ಥಪ್ರಸಾದ್ ಸ್ವಾಗತಿಸಿ, ಬೈಮನ ಜ್ಯೋತಿ ಬಳಗ ಪ್ರಾರ್ಥಿಸಿದರು, ಪಟ್ಟಡ ಶಿವಕುಮಾರ್, ಕಡ್ಲೇರ ತುಳಸಿ ಮೋಹನ್, ಕಾರ್ಯಕ್ರಮ ನಿರೂಪಿಸಿ ಮುಕ್ಕಾಟಿ ಆರ್. ನಾಣಯ್ಯ ವಂದಿಸಿದರು. ಮಧ್ಯಾಹ್ನ ನಂತರ ಸಮಾರಂಭದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. -ದುಗ್ಗಳ