ಸೋಮವಾರಪೇಟೆ,ಸೆ.೧೮: ಓಡಿಪಿ ಸಂಸ್ಥೆ, ಸಂತ ಜೊಸೇಫರ ಆಸ್ಪತ್ರೆ-ಮೈಸೂರು, ಕಾರಿಥಾಸ್ ಇಂಡಿಯಾ, ಸಂಘಮಿತ್ರ, ಪ್ರಕೃತಿ ರೈತ ಉತ್ಪಾದಕರ ಸಮಿತಿ ಹಾಗೂ ಹಾನಗಲ್ಲು ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ತಾ.೨೦ರಂದು (ನಾಳೆ) ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಪ್ರಕೃತಿ ರೈತ ಉತ್ಪಾದಕರ ಸಮಿತಿ ಅಧ್ಯಕ್ಷ ರಾಜು ಪೊನ್ನಪ್ಪ ತಿಳಿಸಿದ್ದಾರೆ.
ಶಿಬಿರದಲ್ಲಿ ಸಾಮಾನ್ಯ ತಪಾಸಣೆ, ಥರ್ಮಲ್ ಸ್ಕಿçÃನಿಂಗ್, ರಕ್ತದೊತ್ತಡ, ಮಧುಮೇಹ, ಸೀಳುತುಟಿ ಶಸ್ತç ಚಿಕಿತ್ಸೆ, ಸಲಹೆ, ದಂತ ಪರೀಕ್ಷೆ, ಭೌತಿಕ ದ್ರವ್ಯರಾಶಿ, ಸಮಾಲೋಚನೆ, ಚರ್ಮ ರೋಗ ಮತ್ತು ಇತರ ಸಾಮಾನ್ಯ ಪರೀಕ್ಷೆ, ಕ್ಯಾನ್ಸರ್, ಕೊರೊನಾ ವೈರಸ್ ಕುರಿತು ಅರಿವು ನಡೆಯಲಿದೆ ಎಂದು ರಾಜು ತಿಳಿಸಿದ್ದಾರೆ.