ಮಡಿಕೇರಿ, ಸೆ. ೧೮: ಅಕ್ಟೋಬರ್ ೧ ರಂದು ಮಡಿಕೇರಿ ದಸರಾ ಸಮಿತಿ ವತಿಯಿಂದ ಆಯೋಜಿಸಿರುವ ಯುವ ದಸರಾದ ಲೋಗೋವನ್ನು ದಸರಾ ಸಮಿತಿ ಪ್ರಮುಖರು ನಗರದ ಗುರುಕುಲ ಕಲಾ ಅಕಾಡೆಮಿ ಸಭಾಂಗಣದಲ್ಲಿ ಬಿಡುಗಡೆ ಗೊಳಿಸಿದರು.
ದಸರಾ ಸಮಿತಿ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ದಸರಾ ಕಾರ್ಯಕ್ರಮದಲ್ಲಿ ಯುವದಸರಾ ಆಕರ್ಷಣೀಯ ಕೇಂದ್ರಬಿAದುವಾಗಿದೆ. ಈ ಬಾರಿ ವಿನೂತನವಾಗಿ ಆಚರಣೆಯಾಗುತ್ತಿದೆ. ಈ ಬಾರಿ ಡಿಜೆ ಹಾಗೂ ಡ್ಯಾನ್ಸ್ ಮಾತ್ರವಲ್ಲದೆ ಬೇರೆ ಸ್ವರೂಪದಲ್ಲಿ ಕಾರ್ಯಕ್ರಮ ರೂಪಿಸಲು ಯುವತಂಡ ಮುಂದಾಗಿದೆ. ಸಂಭ್ರಮದೊAದಿಗೆ ಆಚಾರ, ವಿಚಾರ, ಪದ್ಧತಿ, ಪರಂಪರೆಗೆ ಒತ್ತು ನೀಡುವಂತೆ ಕರೆ ನೀಡಿದರು.
ಕಾರ್ಯಾಧ್ಯಕ್ಷ ಕೆ.ಎಸ್.ರಮೇಶ್ ಮಾತನಾಡಿ, ೨೦೦೯ ರಿಂದ ವರ್ಷದಿಂದ ವರ್ಷಕ್ಕೆ ಯುವದಸರಾ ಜನಪ್ರಿಯತೆ ಪಡೆದುಕೊಂಡಿದೆ. ಕಳೆದ ವರ್ಷ ೨೦ ಸಾವಿರ ಜನ ಆಗಮಿಸಿದ್ದರು. ಈ ಬಾರಿ ದುಪ್ಪಟ್ಟಾಗಲಿದೆ. ಜೊತೆಗೆ ರಾತ್ರಿ ೧೨.೩೦ ಗಂಟೆಯೊಳಗೆ ಕಾರ್ಯಕ್ರಮ ಮುಗಿಸಿ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಬಿ.ಎನ್.ಹರೀಶ್, ಖಜಾಂಜಿ ಶ್ವೇತಾ, ಪ್ರಮುಖರಾದ ನವೀನ್ ಪೂಜಾರಿ, ವಿಶು, ವಿಘ್ನೇಶ್, ಯುವ ದಸರಾದ ಆಯೋಜಕರುಗಳಾದ ಕಿಂಬರ್ಲಿ ರಿಕ್ರಿಯೇಶನ್ಸ್ ತಂಡದ ಕೆ.ಎಂ.ಬಿ. ಮದನ್, ದಿನೇಶ್, ಪ್ರಜ್ಞಾ, ಪ್ರಜ್ವಲ್, ನಚಿಕೇತ್, ಬೋಪಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.