ಮಡಿಕೇರಿ, ಸೆ. ೧೭: ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿರ್ಸ್ - ಕರ್ನಾಟಕ ರಾಜ್ಯ ಘಟಕ ನೀಡುವ ‘ಎಮಿನೆಂಟ್ ಇಂಜಿನಿಯರ್’ ಪ್ರಶಸ್ತಿಯನ್ನು ಮಡಿಕೇರಿಯ ಅಬ್ರಾರ್ ಇಂಜಿನಿಯರಿAಗ್ ಕಾರ್ಪೊರೇಷನ್ನ ವ್ಯವಸ್ಥಾಪಕಿ ಸುರಯ್ಯ ಅಬ್ರಾರ್ ಅವರು ಪಡೆದುಕೊಂಡಿದ್ದಾರೆ. ತಾ.೧೫ ರಂದು ಆಚರಿಸಲಾದ ಇಂಜಿನಿಯರ್ ಗಳ ದಿನದ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನಲ್ಲಿ ಸಂಸ್ಥೆಯ ಕಚೇರಿಯಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.