ಮಡಿಕೇರಿ, ಸೆ. ೧೭: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿ ಇವರ ಆಶ್ರಯದಲ್ಲಿ ಮೂರ್ನಾಡಿನ ಎಂ. ಬಾಡಗ ಅಂಗನವಾಡಿ ಕೇಂದ್ರದ ವತಿಯಿಂದ ಪೋಷಣಾ ಅಭಿಯಾನ ಕಾರ್ಯಕ್ರಮ ಹಾಗೂ ರಾಷ್ಟಿçÃಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ ನಡೆಯಿತು. ಮಕ್ಕಳು, ಗರ್ಭಿಣಿ, ಬಾಣಂತಿಯರು ಆರೋಗ್ಯಯುತವಾಗಿರಲು ಉತ್ತಮ ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಇದರಿಂದ ತಾಯಿ ಮತ್ತು ಮಗು ಆರೋಗ್ಯಯುತವಾಗಿರಲು ಸಹಕಾರಿ ಎಂದರು.

ಹುಟ್ಟಿನಿAದಲೇ ಮಕ್ಕಳ ಪೋಷಣೆ ಮತ್ತು ಬಾಣಂತಿಯರ ಆರೈಕೆ ಬಹಳ ಮುಖ್ಯವಾಗಿದೆ. ಹುಟ್ಟಿದ ಮಕ್ಕಳಿಗೆ ತಾಯಿ ಎದೆಹಾಲು ಬಹಳ ಮುಖ್ಯ ಎಂದು ಅವರು ತಿಳಿಸಿದರು. ಅಪೌಷ್ಟಿಕತೆಯನ್ನು ಹೋಗಲಾಡಿಸಿ ಪೌಷ್ಟಿಕತೆಯನ್ನು ನೀಡುವುದು ಹಾಗೂ ಜನರಲ್ಲಿ ಪೌಷ್ಟಿಕತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಈ ಕಾರ್ಯಕ್ರಮವನ್ನು ತಳಮಟ್ಟಕ್ಕೆ ತಲುಪಿಸುವಲ್ಲಿ ಎಲ್ಲ ಅಂಗನವಾಡಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಕಾರ್ಯಕ್ರಮ ಕುರಿತಾಗಿ ಪ್ರಾಸ್ತವಿಕವಾಗಿ ಎಂ. ಬಾಡಗ ಅಂಗನವಾಡಿ ಕಾರ್ಯಕರ್ತೆ ಬಿ.ಬಿ. ಜಯಂತಿ ಮಾತನಾಡಿ, ಸ್ವಾಗತಿಸಿದರು. ಬಾಲವಿಕಾಸ ಸಮಿತಿಯ ಅಧ್ಯಕ್ಷೆ ದಿವ್ಯ, ಅಂಗನವಾಡಿ ಕಾರ್ಯಕರ್ತೆ ಚೈತ್ರ ಪಿ.ಯು. ಹಾಗೂ ಭವ್ಯ ಬಿ.ಆರ್., ಸಹಾಯಕಿ ಪ್ರೀತು, ಸ್ವ,-ಸಹಾಯ ಹಾಗೂ ಸ್ತಿçà ಶಕ್ತಿ ಗುಂಪಿನ ಸದಸ್ಯರು, ಪುಟಾಣಿ ಮಕ್ಕಳು, ತಾಯಂದಿರು ಹಾಜರಿದ್ದರು. ಈ ಸಂದರ್ಭ ಸೀಮಂತ ಕಾರ್ಯಕ್ರಮ ಹಾಗೂ ಪೋಷಣಾ ವಸ್ತುಗಳ ಪ್ರಾತ್ಯಕ್ಷಿಕೆ ನಡೆಯಿತು.