ಮಡಿಕೇರಿ, ಸೆ. ೧೭: ಭಾರತ ದೇಶವನ್ನು ೨೦೨೫ ರ ವೇಳೆಗೆ ಕ್ಷಯ ಮುಕ್ತವನ್ನಾಗಿಸುವ ಮಹತ್ತರ ಉದ್ದೇಶದಿಂದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ತಾ. ೯ ರಂದು ಭಾರತದ ರಾಷ್ಟçಪತಿಗಳಾದ ದ್ರೌಪದಿ ಮುರ್ಮು ಅವರು “ಪ್ರಧಾನಮಂತ್ರಿ ಕ್ಷಯ ಮುಕ್ತ ಭಾರತ ಅಭಿಯಾನ” ವನ್ನು ಕೇಂದ್ರದ ಆರೋಗ್ಯ ಮಂತ್ರಿಗಳು, ಎಲ್ಲಾ ರಾಜ್ಯದ ರಾಜ್ಯಪಾಲರು, ಎಲ್ಲಾ ರಾಜ್ಯದ ಆರೋಗ್ಯ ಸಚಿವರು, ಕೇಂದ್ರ ಕ್ಷಯರೋಗ ವಿಭಾಗದ ಅಧಿಕಾರಿಗಳು ಇವರ ಸಮ್ಮುಖದಲ್ಲಿ ವೀಡಿಯೋ ಕಾನ್ಫ್ರೆನ್ಸ್ ಮುಖಾಂತರ ಉದ್ಘಾಟಿಸಿದ್ದಾರೆ.
ಈ ಅಭಿಯಾನದಡಿಯಲ್ಲಿ ಪ್ರತಿಯೊಬ್ಬ ಕ್ಷಯರೋಗಿಯನ್ನು ಅವರ ಚಿಕಿತ್ಸೆಯ ಸಂದರ್ಭದಲ್ಲಿ ದತ್ತು ಪಡೆದುಕೊಂಡು ಅವರಿಗೆ ಬೇಕಾದ ಪೌಷ್ಟಿಕ ಅಹಾರ, ಚಿಕಿತ್ಸೆ ಮತ್ತು ಬೆಂಬಲ, ಕೌಶಲ್ಯಾಧಾರಿತ ತರಬೇತಿ ಹಾಗೂ ಹೆಚ್ಚುವರಿ ಪೌಷ್ಟಿಕ ಪೂರಕ ಆಹಾರ ನೀಡಲು ಸಮಾಜದಲ್ಲಿರುವ ಸಹಕಾರ ಸಂಘಗಳು, ಸ್ವಯಂ ಸೇವಾ ಸಂಸ್ಥೆಗಳು, ಇತರ ಸಂಘ-ಸAಸ್ಥೆಗಳು, ಚುನಾಯಿತ ಪ್ರತಿನಿಧಿಗಳು, ರಾಜಕೀಯ ಪಕ್ಷಗಳು, ಇತರ ಉದ್ಯಮ ಕ್ಷೇತ್ರಗಳು ಹಾಗೂ ಇತರೆ ದಾನಿಗಳು ಕನಿಷ್ಟ ಒಂದರಿAದ ಮೂರು ವರ್ಷಗಳ ಅವಧಿಗೆ ನಿಕ್ಷಯ್ ಮಿತ್ರರಾಗಿ ನೋಂದಾಯಿಸಿಕೊAಡು ನೀಡುವಂತೆ ಕರೆ ನೀಡಿರುತ್ತಾರೆ. ಅದರಂತೆ ಕೊಡಗು ಜಿಲ್ಲೆಯಲ್ಲಿರುವ ಎಲ್ಲಾ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ನೀಡಲು ಸಾರ್ವಜನಿಕರು, ಸ್ವಯಂ ಸೇವಾ ಸಂಸ್ಥೆಗಳು, ಸಹಕಾರ ಸಂಘಗಳು, ಇತರ ಸಂಘ-ಸAಸ್ಥೆಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷಗಳು ಮುಂದೆ ಬಂದು ನಿಕ್ಷಯ್ ಮಿತ್ರರಾಗಿ ನೋಂದಾಯಿಸಿ ಕೊಂಡು ಪೌಷ್ಟಿಕ ಆಹಾರ ಚಿಕಿತ್ಸೆ ಮತ್ತು ಬೆಂಬಲ, ಕೌಶಲ್ಯಾಧಾರಿತ ತರಬೇತಿ ಹಾಗೂ ಹೆಚ್ಚುವರಿ ಪೌಷ್ಟಿಕ ಪೂರಕ ಆಹಾರಗಳನ್ನು ನೀಡುವಂತೆ ಮನವಿ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಕ್ಷಯರೋಗ ವಿಭಾಗವು ಕ್ಷಯರೋಗಿಗಳಿಗೆ ಒಂದು ತಿಂಗಳಿಗೆ ಒಬ್ಬ ಕ್ಷಯರೋಗಿಗೆ ನೀಡಬೇಕಾದ ಪೌಷ್ಟಿಕ ಆಹಾರದ ಆಯ್ಕೆ ಕೋಷ್ಠಕವನ್ನು ನಮೂದಿಸಿದೆ.
ಆಹಾರದ ವಿಧಗಳು: ವಯಸ್ಕರಿಗೆ ಏಕದಳ ಧಾನ್ಯಗಳು ಹಾಗೂ ಸಿರಿ ಧಾನ್ಯಗಳು ೩ ಕೆ.ಜಿ., ದ್ವಿದಳ ಧಾನ್ಯಗಳು ೧.೫ ಕೆ.ಜಿ. ಅಡುಗೆ ಎಣ್ಣೆ ೨೫೦ ಗ್ರಾಂ, ಮೊಟ್ಟೆಗಳು ೩೦, ಹಾಲಿನ ಪುಡಿ ಅಥವಾ ಹಾಲು ೧ ಕೆ.ಜಿ/೬ ಲೀ., ಮಕ್ಕಳಿಗೆ(೧೪ ವರ್ಷ ಕೆಳಪಟ್ಟವರಿಗೆ) ಏಕದಳ ಧಾನ್ಯಗಳು ಹಾಗೂ ಸಿರಿ ಧಾನ್ಯಗಳು ೨ ಕೆ.ಜಿ. ದ್ವಿದಳ ಧಾನ್ಯಗಳು ೧ ಕೆ.ಜಿ., ಅಡುಗೆ ಎಣ್ಣೆ ೧೫೦ ಗ್ರಾಂ., ಮೊಟ್ಟೆ ೩೦, ಹಾಲಿನ ಪುಡಿ ಅಥವಾ ಹಾಲು ೭೫೦ ಗ್ರಾಂ. ಆಹಾರ ನೀಡಬೇಕು.
ಈ ರೀತಿಯ ಬೆಂಬಲದಿAದಾಗಿ ಕ್ಷಯರೋಗಿಗೆ ನೈತಿಕ ಸ್ಥೆöÊರ್ಯ ತುಂಬಿದAತಾಗಿ ಕ್ಷಯ ರೋಗಿಯು ಅವರಿಗೆ ಸಿಗುವ ಪೌಷ್ಟಿಕ ಆಹಾರದಿಂದ ಬೇಗ ಗುಣಮುಖ ರಾಗುವುದಲ್ಲದೆ ಇತರರಿಗೆ ರೋಗವನ್ನು ಹರಡುವ ಪ್ರಮಾಣವು ಕಡಿಮೆಯಾಗಿ ಕ್ಷಯರೋಗ ಬೇಗ ಗುಣಮುಖವಾಗುವುದಲ್ಲದೆ, ಮರಣ ಪ್ರಮಾಣವು ಸಹ ಕಡಿಮೆಯಾಗಿ ದೇಶವನ್ನು ನಿಗದಿತ ಅವಧಿಯೊಳಗಾಗಿ ಕ್ಷಯ ಮುಕ್ತ ದೇಶವನ್ನಾಗಿ ಮಾಡಲು ಸಾಧ್ಯವಾಗುತ್ತದೆ.
ಕೊಡಗು ಜಿಲ್ಲೆಯಲ್ಲಿ ೧೯೫ ಕ್ಷಯರೋಗಿಗಳು ಚಿಕಿತ್ಸೆಯನ್ನು ಪಡೆಯುತ್ತಿದ್ದು ಅವುಗಳಲ್ಲಿ ೧೩೬ ಕ್ಷಯರೋಗಿಗಳು ಪೌಷ್ಟಿಕ ಆಹಾರ ಹಾಗೂ ಸಮುದಾಯದ ಬೆಂಬಲ ಪಡೆಯಲು ಒಪ್ಪಿಗೆ ನೀಡಿರುತ್ತಾರೆ. ಅವುಗಳಲ್ಲಿ ೧೯ ರೋಗಿಗಳಿಗೆ ಪೌಷ್ಟಿಕ ಆಹಾರ ನೀಡಲು ನಿಕ್ಷಯ್ ಮಿತ್ರದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಸುಮಾರು ೧೦ ಕ್ಷಯರೋಗಿಗಳಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಮಡಿಕೇರಿ ಘಟಕದಿಂದ ಪೌಷ್ಟಿಕ ಆಹಾರ ನೀಡಲು ನೋಂದಾ ಯಿಸಿದ್ದು ಉಳಿದಂತೆ ೯ ರೋಗಿಗಳಿಗೆ ಪೌಷ್ಟಿಕ ಆಹಾರ ನೀಡಲು ಸಾರ್ವಜನಿಕರು ಮುಂದೆ ಬಂದಿದ್ದಾರೆ. ಆದ್ದರಿಂದ ಜಿಲ್ಲೆಯ ಕೊಡುಗೈ ದಾನಿಗಳು, ಸಹಕಾರ ಸಂಘಗಳು, ಚುನಾಯಿತ ಪ್ರತಿನಿಧಿಗಳು, ಸಂಘ-ಸAಸ್ಥೆಗಳು ಹಾಗೂ ಇತರ ಸಾರ್ವಜನಿಕರು ಈ ಮಹತ್ಕಾರ್ಯದಲ್ಲಿ ಕೈಜೋಡಿಸಿ “ಪ್ರಧಾನಮಂತ್ರಿ ಟಿ.ಬಿ. ಮುಕ್ತ ಭಾರತ ಅಭಿಯಾನ”ದ ಯಶಸ್ವಿಗೆ ಸಹಕರಿಸಲು ಕೋರಿದೆ. ನಿಕ್ಷಯ್ ಮಿತ್ರ ನೋಂದಣಿಗಾಗಿ hಣಣಠಿs://ಛಿommuಟಿiಣಥಿsuಠಿಠಿoಡಿಣ. ಟಿiಞshಚಿಥಿ.iಟಿ ಜಾಲತಾಣಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ವಿವರಗಳಿಗೆ ಈ ಕಚೇರಿ ದೂರವಾಣಿ ೦೮೨೭೨-೨೨೧೨೯೨ ಅಥವಾ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಮೊಬೈಲ್ ಸಂಖ್ಯೆ ೯೪೪೯೮೪೩೨೩೪ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಆನಂದ್ ತಿಳಿಸಿದ್ದಾರೆ.