ಪೊನ್ನಂಪೇಟೆ, ಸೆ.೧೫: ಕೊಡಗು ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಫ್ರೂಟ್ಸ್ ತಂತ್ರಾAಶದ ಮೂಲಕ ಫಾರಂ-೩ ಡಿಕ್ಲರೇಷನ್ ಮತ್ತು ಅಡಮಾನ ಪತ್ರಿಕೆಗಳನ್ನು ನೊಂದಾವಣಿ ಮಾಡಿಕೊಳ್ಳದೇ ಇರುವುದರಿಂದ ಶೂನ್ಯ ಬಡ್ಡಿದರದ ಕೃಷಿ ಸಾಲ ಸೌಲಭ್ಯ ಪಡೆಯಲು ಬೆಳೆಗಾರರು ಸಾಲದ ಪ್ರಮಾಣದ ಶೇ.೧.೫% ರಷ್ಟು ಮುದ್ರಂಕ ಶುಲ್ಕ ಪಾವತಿಸುವ ಮೂಲಕ ಅನಗತ್ಯ ಹೊರೆಯಾಗಿದೆ. ಈ ಬಗ್ಗೆ ಕೊಡಗು ಜಿಲ್ಲೆಯ ಬೆಳೆಗಾರರಿಗೆ ಅನ್ಯಾಯವಾಗಿದ್ದು ಶೀಘ್ರದಲ್ಲಿ ಈ ಅನ್ಯಾಯವನ್ನು ಸರಿಪಡಿಸಿ ಈಗಾಗಲೇ ಸಾಲ ಪಡೆಯುವ ಸಂದರ್ಭ ಬೆಳೆಗಾರರು ಪಾವತಿಸಿರುವ ಶುಲ್ಕವನ್ನು ಸರಕಾರ ಮರುಪಾವತಿಸಬೇಕು. ಇಲ್ಲದಿದ್ದರೆ ಕಾನೂನು ರೀತಿಯಲ್ಲಿ ಜಿಲ್ಲೆಯ ಬೆಳೆಗಾರರಿರಿಗೆ ನ್ಯಾಯ ಒದಗಿಸಲು ಮುಂದಾಗುವುದಾಗಿ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಮತ್ತು ರಾಜ್ಯ ಸರಕಾರದ ಮಾಜಿ ಅಡ್ವಕೇಟ್ ಜನರಲ್ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ೨೦೨೨ ಏಪ್ರಿಲ್ ನಿಂದ ಬೆಳೆಗಾರರಿಗೆ ನೂತನ ನೀತಿಯಿಂದ ಅನ್ಯಾಯವಾಗುತ್ತಿದೆ.ಈ ಬಗ್ಗೆ ಬೆಳೆಗಾರರ ಸಂಘಟನೆ,ಜಿಲ್ಲಾಧಿಕಾರಿಗಳು ಮತ್ತು ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರು ಸಹ ಮುಖ್ಯಮಂತ್ರಿಗಳು, ಸಂಬAಧಿಸಿದ ಸಚಿವರು ಮತ್ತು ಜಿಲ್ಲೆಯ ಶಾಸಕರುಗಳಿಗೆ ೨೦೨೨ ಏಪ್ರಿಲ್ ನಿಂದ ಪತ್ರ ಬರೆದು ಮನವಿ ಮಾಡಿದರೂ, ಕೊಡಗಿನ ಬೆಳೆಗಾರರ ಬಗ್ಗೆ ಇವರೆಲ್ಲರೂ ನಿರ್ಲಕ್ಷ್ಯ ಮತ್ತು ಮಲತಾಯಿ ಧೋರಣೆ ತಳೆದಿದ್ದಾರೆ.ಕಳೆದ ೬ ತಿಂಗಳಿಗೂ ಹೆಚ್ಚು ಸಮಯದಿಂದ ಬೆಳೆಗಾರರು ಯಾತನೆ ಪಡುತ್ತಿದ್ದರೂ ಸ್ಪಂದಿಸದೇ ಜಿಲ್ಲೆಯ ಬೆಳೆಗಾರರನ್ನು ವಂಚಿಸಲಾಗುತ್ತಿದೆ.ಆದ್ದರಿAದ ಈ ಬಗ್ಗೆ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಕೂಡಲೇ ಅನ್ಯಾಯ ಸರಿಪಡಿಸದಿದ್ದರೆ,ಕಾನೂನು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಪೊನ್ನಣ್ಣ ಅವರು ಎಚ್ಚರಿಸಿದ್ದಾರೆ.

ಈ ಸಮಸ್ಯೆ ಬಗ್ಗೆ ವಿವರಿಸಿದ ಅವರು,ಕೊಡಗು ಜಿಲ್ಲೆಯ ಸಹಕಾರ ಸಂಘಗಳು ಕಾಫಿ ಬೆಳೆಗೆ ಕೃಷಿ ಸಾಲ ವಿತರಿಸಲು ಫಾರಂ-೩ ಡಿಕ್ಲರೇಷನ್‌ಗಳನ್ನು ಉಪನೋಂದಾವಣಾಧಿಕಾರಿಗಳಿಗೆ ಫ್ರೂಟ್ಸ್ ತಂತ್ರಾAಶದ ಮೂಲಕ ಸಲ್ಲಿಸುತ್ತಿದ್ದು, ಕಾಫಿ ಬೆಳೆಗೆ ಸಂಬAಧಿಸಿದ ದಸ್ತಾವೇಜುಗಳಿಗೆ ತಂತ್ರಾAಶದಲ್ಲಿ ಮುದ್ರಾಂಕ ಶುಲ್ಕ ವಿಧಿಸಲು ಅವಕಾಶವಿಲ್ಲ ಎಂದು ಕಾರಣ ನೀಡಿ ನೋಂದಾವಣೆಯನ್ನು ಸ್ಥಗಿತಗೊಳಿಸಿದೆ. ಇದರಿಂದ ರೈತರಿಗೆ ಸಾಲ ಪಡೆಯಲು ತೊಂದರೆಯಾಗುತ್ತಿದ್ದು, ಜಿಲ್ಲೆಯಲ್ಲಿ ಸಾವಿರಾರು ಬೆಳೆಗಾರರು ಬೆಳೆ ಸಾಲ ಪಡೆಯುವ ಸಂದರ್ಭದಲ್ಲಿ ವಿಧಿಯಿಲ್ಲದೇ ಸಾಲದ ಪ್ರಮಾಣದ ಶೇ.೧.೫ ರಷ್ಟು ಮುದ್ರಂಕ ಶುಲ್ಕ ಪಾವತಿಸುವ ಹೊರೆ ಬಿದ್ದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಯ ಉಪನೋಂದಾವಣೆ ಅಧಿಕಾರಿ ಕಚೇರಿಯಲ್ಲಿ ಸಹಕಾರ ಸಂಘಗಳು ಕಾಫಿ ಬೆಳೆಗೆ ಬೆಳೆ ಸಾಲ ವಿತರಿಸಲು ಫಾರಂ-೩ ಡಿಕ್ಲರೇಷನನ್ನು ಈ ಹಿಂದೆ ಭೌತಿಕವಾಗಿ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಯಾವುದೇ ಮುದ್ರಾಂಕ ಶುಲ್ಕವನ್ನು ವಸೂಲು ಮಾಡದೇ ನೋಂದಾವಣೆಯನ್ನು ಮಾಡಿಕೊಳ್ಳುತ್ತಿತ್ತು. ಕೊಡಗು ಜಿಲ್ಲೆಯಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರು, ಬೆಳೆಗಾರರಿಗೆ ಸಾಲ ನೀಡುವ ಸಂದರ್ಭ ಉಪನೋಂದಾಣಿ ಕಚೇರಿಯಲ್ಲಿ ಸಹಕಾರ ಸಂಘದ ಫ್ರೂಟ್ಸ್ ತಂತ್ರಾAಶದ ಮೂಲಕ ಸರಳವಾಗಿ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಇದೆ.

ಈ ಪ್ರಕ್ರಿಯೆಯಲ್ಲಿ ಕಾಫಿ ಬೆಳೆಗಾರರಿಗೆ ಬೆಳೆಸಾಲ ತೆಗೆಯಲು ಕಾಫಿಯನ್ನು ವಾಣಿಜ್ಯ ಬೆಳೆ ಎಂದು ಕಾರಣ ನೀಡಿ ಉಪನೋಂದಾಣಿ ಕಚೇರಿಯಲ್ಲಿ ಫಾರಂ-೩ ನೋಂದಾವಣೆಯನ್ನು ಸ್ಥಗಿತಗೊಳಿಸಲಾಗಿದೆ.ಇದರಿಂದ ಶೂನ್ಯ ಬಡ್ಡಿ (ರೂ.೩ ಲಕ್ಷದ ವರೆಗೆ)ದರದಲ್ಲಿ ಬೆಳೆ ಸಾಲ ಸೌಲಭ್ಯವನ್ನು ಸರ್ಕಾರ ನೀಡಿದರೂ ಬೆಳೆಗಾರರು, ರೈತರಿಗೆ ಈ ಸೌಲಭ್ಯ ದೊರೆಯದೇ ವಂಚಿತರಾಗುವAತೆ ಆಗಿದೆ. ಕೊಡಗು ಜಿಲ್ಲೆಯಲ್ಲಿ ಹಲವಾರು ಸಹಕಾರ ಸಂಘಗಳಲ್ಲಿ ಬೆಳೆ ಸಾಲ ತೆಗೆಯಲು ಇದರಿಂದ ಸಾಧ್ಯವಾಗದೇ ಸಾವಿರಾರು ಬೆಳೆಗಾರರಿಗೆ ಬೆಳೆ ಸಾಲ ದೊರೆಯದೇ ಸಂಕಷ್ಟ ಅನುಭವಿಸುತ್ತಿದ್ದಾರೆ .

ಕಳೆದ ೬ ತಿಂಗಳಿನಿAದ ಈ ಸಮಸ್ಯೆ ಉಂಟಾಗಿದ್ದು, ಬೇರೆ ಮಾರ್ಗ ಕಾಣದೆ ಕಾಫಿ ಬೆಳೆಗಾರರು ಬೆಳೆ ಸಾಲ ಪಡೆಯುವ ಸಂದರ್ಭ ಉಪನೋಂದಾವಣೆ ಕಚೇರಿಗೆ ಬೆಳೆ ಸಾಲ ಪಡೆಯಲು ಒಟ್ಟು ಬೆಳೆ ಸಾಲದ ಶೇ. ೧.೫ ರಷ್ಟು (ಒಂದು ಲಕ್ಷಕ್ಕೆ ರೂ.೧೫೦೦ ರಂತೆ) ಮುದ್ರಾಂಕ ಶುಲ್ಕ ಪಾವತಿಸಿ ಮಾರ್ಟಿಗೇಜ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ಸೌಲಭ್ಯ ನೀಡಿದರೂ ಬೆಳೆಗಾರರಿಗೆ ಇದರ ಸದುಪಯೋಗವಾಗದೇ ಅನಗತ್ಯವಾಗಿ ಮುದ್ರಾಂಕ ಶುಲ್ಕ ಪಾವತಿಸುವುದು ಮತ್ತು ಉಪನೋಂದಾಣಿ ಕಚೇರಿಗೆ ಅಲೆದಾಡುವಂತಾಗಿದೆ.

ಆದರೆ, ಚಿಕ್ಕಮಗಳೂರು ಹಾಸನ ಮತ್ತು ಶಿವಮೊಗ್ಗ ಜಿಲ್ಲೆಯ ಕಾಫಿ ಬೆಳೆಗಾರರು ಉಪನೋಂದಾವಣೆ ಕಚೇರಿಯಲ್ಲಿ ಫಾರಂ ೩ ಮೂಲಕ ನೋಂದಾಣಿ ಮಾಡಿಕೊಂಡು ಸಾಲ ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ ಕೊಡಗು ಜಿಲ್ಲೆಗೆ ತಾರತಮ್ಯ ಮಾಡುತ್ತಿರುವುದು ಕಂಡುಬAದಿದೆ. ಆದ್ದರಿಂದ ತಾವುಗಳು ಈ ಬಗ್ಗೆ ತಕ್ಷಣ ಸ್ಪಂದಿಸಿ ಈ ಫ್ರೂಟ್ಸ್ ತಂತ್ರಾAಶದ ಫಾರಂ ೩ ಮೂಲಕವೇ ಕಾಫಿ ಬೆಳೆಗಾರರಿಗೆ ಬೆಳೆ ಸಾಲ ದೊರೆಯುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಪೊನ್ನಣ್ಣ ಆಗ್ರಹಿಸಿದ್ದಾರೆ.