ವೀರಾಜಪೇಟೆ, ಸೆ. ೧೫: ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸಲ್ಲಿ ಸಂತೋಷವನ್ನು ಹಂಚಿಕೊಳ್ಳುವAತದ್ದು. ಈಗಾಗಲೇ ಸ್ವಾತಂತ್ರೊö್ಯÃತ್ಸವವನ್ನು ಎಲ್ಲರು ಆಚರಿಸಿದ್ದೇವೆ. ಸ್ವಾತಂತ್ರ ತಂದು ಕೊಟ್ಟವರನ್ನು ನೆನಪಿಸುವ ಮೂಲಕ ನಮ್ಮ ಕರ್ತವ್ಯವನ್ನು ಮಾಡುವಂತಾಗಬೇಕು ಎಂದು ಅರಮೇರಿ ಕಳಂಚೇರಿ ಶ್ರೀ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಜಿ ಹೇಳಿದರು.
ವೀರಾಜಪೇಟೆ ಗಾಂಧಿನಗರದ ಶ್ರೀ ಗಣಪತಿ ಸೇವಾ ಸಮಿತಿ ವತಿಯಿಂದ ೩೦ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಏರ್ಪಡಿಸಿದ್ದ ನೃತ್ಯ ಕಾರ್ಯಕ್ರಮ ಹಾಗೂ ಉತ್ತಮ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ಧರ್ಮ ಅಂದರೆ ಎಲ್ಲಾ ವಸ್ತುಗಳನ್ನು ಪ್ರೀತಿಯಿಂದ ಕಾಣುವಂತಾಗಬೇಕು. ಸಾಲು ಮರದ ತಿಮ್ಮಕ್ಕ ರಾಷ್ಟçವೇ ಗುರುತಿಸುವಂತ ಕಾರ್ಯ ಮಾಡಿದ್ದಾರೆ. ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟ, ನಾವೆಲ್ಲರು ಒಗ್ಗಟ್ಟಿನಿಂದ ಬಾಳುವಂತಾಗಬೇಕು. ವಿದ್ಯಾರ್ಥಿಗಳು ಸಿಗುವ ವೇದಿಕೆಯನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ತೋರುವಂತಾಗಲಿ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ ಗಾಂಧಿನಗರದ ಗಣಪತಿ ಸೇವಾ ಸಮಿತಿ ಯವರು ವಿಭಿನ್ನ ರೀತಿಯಲ್ಲಿ ಉತ್ಸವವನ್ನು ಆಚರಿಸುವ ಮೂಲಕ ಸ್ಥಳಿಯ ಗ್ರಾಮೀಣ ಪ್ರದೇಶದ ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದು ಮಕ್ಕಳು ಈ ವೇದಿಕೆಯನ್ನು ಬಳಸಿಕೊಂಡು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿಯೂ ಪ್ರಶಸ್ತಿ ಪಡೆಯುವಂತಾಗಲಿ. ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಬಹುಮಾನ ಹಾಗೂ ಪ್ರೋತ್ಸಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಹೈಕೋರ್ಟ್ ಹಿರಿಯ ವಕೀಲರು ಕೆಪಿಸಿಸಿ ಕಾನೂನು ಘಟಕದ ಮುಖ್ಯಸ್ಥರಾದ ಎ.ಎಸ್.ಪೊನ್ನಣ್ಣ ಮಾತನಾಡಿ ಕೊಡಗಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಪ್ರಕೃತಿ ವಿಕೋಪ ಸಂದರ್ಭ ಅನೇಕರು ಆಸ್ತಿ ಮನೆ ಕಳೆದುಕೊಂಡಿದ್ದರು. ಇನ್ನು ಮುಂದೆ ಹಾಗೆ ಆಗದಂತೆ ದೇವರಲ್ಲಿ ಎಲ್ಲರು ಪ್ರಾರ್ಥಿಸೋಣ. ಯಾರೇ ಆಗಲಿ ಕಷ್ಟದಲ್ಲಿರುವುದನ್ನು ಕಂಡಾಗ ಅವರಿಗೆ ಕೈಲಾದಷ್ಟು ಸಹಾಯ ಮಾಡುವಂತಗಬೇಕು ಎಂದರು.
ಕಾರ್ಯಕ್ರಮದ ಮೊದಲಿಗೆ ಮೈಸೂರಿನ ಚಾಮುಂಡಿ ವಿಹಾರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಷ್ಟಿçÃಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ನಲ್ಲಿ (ಇಂಡ್ವಿಜಿಯಲ್ ಕುಮಿತೆ)ಯಲ್ಲಿ ಚಿನ್ನದ ಪದಕ ಗೆದ್ದಿರುವ ವಿ.ಎಂ. ಪ್ರಜ್ವಲ್ ಮಂಜುನಾಥ್ ಅವರಿಗೆ ಶಾಂತಮಲ್ಲಿಕಾರ್ಜುನ ಸ್ವಾಮಿ ಹಾಗೂ ಅತಿಥಿಗಳು ಸನ್ಮಾನಿಸಿ ಗೌರವಿಸಿದರು. ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಪಿ.ನಿತಿನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿ ಅಂಜಪರವAಡ ಅನೀಲ್, ಇಂಜಿನಿಯರ್ ಬಿ.ಎಸ್.ಪ್ರಕಾಶ್, ಕಾಫಿ ಬೆಳೆಗಾರ ಕಾಳೇಂಗಡ ಜೈನ್, ಮ್ಯಾಗ್ನೋಲಿಯ ರೆಸಾರ್ಟ್ನ ಪ್ರವೀಣ್ ಅರವಿಂದ ಉಪಸ್ಥಿತರಿದ್ದರು. ಗಣಪತಿ ಸಮಿತಿಯ ಪಿ.ಎ.ಮಂಜುನಾಥ್ ಸ್ವಾಗತಿಸಿದರು. ಎಂ.ಎA.ಶಶಿಧರನ್ ನಿರೂಪಿಸಿ, ವಂದಿಸಿದರು.