ಚೆಟ್ಟಳ್ಳಿ, ಸೆ. ೧೪: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್ ರಾಜ್ಯ ಸಮಿತಿಯ ನಿರ್ದೇಶನದಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ನಡೆಯುತ್ತಿರುವ ದಅವಾ ಕಾನ್ಫರೆನ್ಸ್ ಕೊಡಗು ಜಿಲ್ಲಾ ಮಟ್ಟದ ದಅವಾ ಕಾನ್ಫರೆನ್ಸ್ ಎಮ್ಮೆಮಾಡಿನ ಶಾದಿ ಮಹಲಿನಲ್ಲಿ ನಡೆಯಿತು. ಝುಬೈರ್ ಸಅದಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವು ಜಿಲ್ಲೆಯ ನಾಯಿಬ್ ಖಾಝಿ ಶೈಖುನಾ ಶಾದುಲಿ ಫೈಝಿ ಉಸ್ತಾದ್ ಉದ್ಘಾಟಿಸಿದರು.
ಕೂರ್ಗ್ ಜಂಇಯ್ಯತುಲ್ ಉಲಮಾ ಕೊಶಾಧಿಕಾರಿ ಹುಸೈನ್ ಸಖಾಫಿ ಹಾಗೂ ಎಸ್.ವೈ.ಎಸ್. ಜಿಲ್ಲಾ ಅಧ್ಯಕ್ಷ ಸಯ್ಯಿದ್ ಎರುಮಾಡ್ ತಂಙಳ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮೊದಲ ತರಗತಿಯು ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಅಹ್ಸನೀ ಉಸ್ತಾದರ ನೇತೃತ್ವದಲ್ಲಿ ನಡೆಯಿತು. ಮುತ ಅಲ್ಲಿಮರು ಸಂಘಟನೆಯಲ್ಲಿ ಹೇಗೆ ಕಾರ್ಯಾಚರಿಸಬೇಕು ಎಂಬುದನ್ನು ವಿವರಿಸಿದರು.
ನಂತರ ಸಿರಾಜುಲ್ ಹುದಾ ಮುದರ್ರಿಸ್ ಉಸ್ತಾದ್ ಉಮರ್ ಸಖಾಫಿ ಫಿಖ್ಹ್ ಹಾಗೂ ತಸವ್ವುಫ್ ಎಂಬ ವಿಷಯದ ಕುರಿತು ತರಗತಿ ನಡೆಸಿದರು. ಕಾರ್ಯಕ್ರಮದಲ್ಲಿ ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ, ಮಾಜಿ ಅಧ್ಯಕ್ಷ ಉಸ್ಮಾನ್ ಹಾಜಿ, ರಾಜ್ಯ ಸಮಿತಿ ಸದಸ್ಯರಾದ ಜಲೀಲ್ ಅಮೀನಿ, ಮುಜೀಬ್ ಕೊಂಡAಗೇರಿ, ಉಪಸ್ಥಿತರಿದ್ದರು. ಜಿಲ್ಲಾ ದಅವಾ ಕಾರ್ಯದರ್ಶಿ ರಫೀಕ್ ಲತೀಫಿ ಸ್ವಾಗತಿಸಿ, ಕನ್ವೀನರ್ ಕಮರುದ್ದೀನ್ ಸಖಾಫಿ ವಂದಿಸಿದರು.