ಮಡಿಕೇರಿ, ಸೆ. ೧೪: ರಾಜ್ಯ ಆಯೋಗದ ನಿರ್ದೇಶನದಂತೆ ಮತ್ತು ಗ್ರಾಹಕ ಸಂರಕ್ಷಣಾ ರೆಗ್ಯುಲೇಷನ್ ೨೦೦೫ ರ ನಿಯಮದಂತೆ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ೨೦೧೫ನೇ ಇಸವಿಯಲ್ಲಿ ವಿಲೇವಾರಿಗೊಂಡಿರುವ ಗ್ರಾಹಕ ವ್ಯಾಜ್ಯಗಳ ದೂರುಗಳು ಮತ್ತು ಅಮಲ್ಜಾರಿ ಪ್ರಕರಣಗಳನ್ನು, ಇತ್ಯರ್ಥಗೊಂಡು ಕ್ರಮವಾಗಿ ಐದು ಮತ್ತು ಮೂರು ವರ್ಷ ಅವಧಿ ಪೂರೈಸಿ ಅನ್ವಹಿಸುವ ಪ್ರಕರಣಗಳನ್ನು ಹಾಗೂ ಯಾವುದೇ ತಡೆಯಾಜ್ಞೆ ಬಾಕಿ ಇಲ್ಲದೇ ಇರುವಂತಹ ಪ್ರಕರಣಗಳಲ್ಲಿ, ಕಡತಗಳನ್ನು ನಾಶಗೊಳಿಸಲು ತೀರ್ಮಾನಿಸಿದೆ.
೨೦೧೫ನೇ ಇಸವಿಯಲ್ಲಿ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕೊಡಗು ಇಲ್ಲಿ ದಾಖಲಾತಿ ಇತ್ಯರ್ಥಗೊಂಡಿರುವ ಗ್ರಾಹಕ ವ್ಯಾಜ್ಯಗಳ ದೂರುಗಳು ಹಾಗೂ ಅಮಲ್ಜಾರಿ ಪ್ರಕರಣಗಳಲ್ಲಿ ಮೂಲ ದಾಖಲೆಗಳು ಅಥವಾ ಇನ್ನಿತರ ಯಾವುದೇ ದಾಖಲೆಗಳು ಇದ್ದಲ್ಲಿ ಹಿಂಪಡೆಯಲು ಮತ್ತು ಪಾವತಿ ಬಾಕಿಗೆ ಸಂಬAಧಿಸಿದ ಪಕ್ಷಕಾರರು ಅಥವಾ ವಕೀಲರುಗಳು ಕೊಡಗು ಜಿಲ್ಲಾ ಗ್ರಾಹಕರ ಆಯೋಗದ ಪ್ರಕಟಣೆ ಹೊರಡಿಸಿದ ದಿನಾಂಕದಿAದ ೩೦ ದಿನಗಳೊಳಗೆ ಕೊಡಗು ಜಿಲ್ಲಾ ಗ್ರಾಹಕರ ಆಯೋಗಕ್ಕೆ ಖುದ್ದಾಗಿ ಹಾಜರಾಗಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬೇಕು. ತಪ್ಪಿದಲ್ಲಿ ೨೦೧೫ನೇ ಇಸವಿಯ ಪ್ರಕರಣಗಳನ್ನು ನಾಶಗೊಳಿಸಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ನೋಂದಣಿ ಹಾಗೂ ಸಹಾಯಕ ಆಡಳಿತಾಧಿಕಾರಿ ತಿಳಿಸಿದ್ದಾರೆ.