ಕರಿಕೆ, ಸೆ. ೧೩: ಕೊಡಗಿನ ಪರಿಸರ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ‘ದೇವರ ಕಾಡಿಗೆ ದೂಪಾಲಂಕಾರ’ ಎಂಬ ವಿನೂತನ ಕಾರ್ಯಕ್ರಮವನ್ನು ವೀರಾಜಪೇಟೆ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಬೇರಳೆನಾಡು, ವಿ. ಬಾಡಗ ಗ್ರಾಮದಲ್ಲಿ ಮರೋಡಿ ಯುವಕ ಸಂಘ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ರುದ್ರಗುಪ್ಪೆಯ ಶ್ರೀ ಜೋಡು ಭಗವತಿ, ಮಹದೇವರ ದೇವಸ್ಥಾನ, ಅಯ್ಯಪ್ಪ ದೇವರಕಾಡಿನಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೂಪದ ಗಿಡದ ಮಹತ್ವದ ಕುರಿತು ಮಾತನಾಡಿದ ಸಂತೋಷ್ ತಮ್ಮಯ್ಯ ಅವರು ಕೊಡಗಿನ ದೇವರ ಕಾಡಿಗೆ ಬ್ರಿಟಿಷರ ಕಾಲದಿಂದಲೂ ವಿಶೇಷತೆ ಇರುವುದರ ಬಗ್ಗೆ ಮಾಹಿತಿಯಿತ್ತರು.

ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ದೂಪದ ಗಿಡ ನೆಟ್ಟು ಮಾತನಾಡಿ, ಕೊಡಗಿನ ಜನ ಪ್ರಕೃತಿಯಲ್ಲಿ ದೇವರನ್ನು ಕಾಣುತ್ತಾರೆ. ಪ್ರತಿಯೊಂದು ಊರಿನಲ್ಲಿಯೂ ದೇವರ ಕಾಡಿದ್ದು ಅದನ್ನು ಆಯಾ ಊರಿನ ಜನರೇ ಸಂರಕ್ಷಣೆ ಮಾಡುತ್ತಿದ್ದು ಸಂತೋಷ್ ತಮ್ಮಯ್ಯ ಅವರ ಕೋರಿಕೆಯಂತೆ ಈ ವಿಶೇಷ ಕಾರ್ಯಕ್ರಮಕ್ಕೆ ದ.ಕ. ಜಿಲ್ಲೆಯಿಂದ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಬಿಳಿ ದೂಪದ ಗಿಡವನ್ನು ತರಿಸಿ ನೆಡುತ್ತಿದ್ದು ಇದರಿಂದ ಪ್ರಾಣಿ ಪಕ್ಷಿಗಳಿಗೆ ಆಹಾರವಾಗು ವುದಲ್ಲದೇ ಬೀಜಗಳು ಮೊಳಕೆ ಬಂದು ಮುಂದಕ್ಕೆ ಕಾಡಿನಲ್ಲಿ ಗಿಡಗಳ ಸಂತಾನೋತ್ಪತ್ತಿ ಹೆಚ್ಚಾಗುತ್ತದೆ. ಅಲ್ಲದೆ ಪರಿಸರ ಸಮತೋಲನ ಉಂಟಾಗುತ್ತದೆ ಎಂದರು. ಈ ಸಂದರ್ಭ ಊರಿನ ಪ್ರಮುಖರು, ದೇವಾಲಯ ಆಡಳಿತ ಮಂಡಳಿಯ ಪ್ರಮುಖರು ಹಾಜರಿದ್ದರು.