ಪೊನ್ನಂಪೇಟೆ, ಸೆ. ೧೩: ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಲಯದಲ್ಲಿ ಇತ್ತೀಚೆಗೆ ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ತಾಲೂಕು ಮಟ್ಟದ ಅಂತರ್ ಶಾಲಾ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸ ಲಾಗಿತ್ತು. ಸ್ವಾತಂತ್ರö್ಯ ಹೋರಾಟಗಾರ ದಿ. ಕಾಕಮಾಡ ಎನ್. ನಾಣಯ್ಯ ಅವರ ಜ್ಞಾಪಕಾರ್ಥ ಅವರ ಪುತ್ರ ಕಾಕಮಾಡ ಚಂಗಪ್ಪ ಅವರು ನೀಡಿರುವ ದತ್ತಿನಿಧಿಯಿಂದ ವರ್ಷಂಪ್ರತಿ ಸ್ವಾತಂತ್ರö್ಯ ದಿನಾಚರಣೆಯ ಅಂಗವಾಗಿ ಈ ಸ್ಪರ್ಧೆಯನ್ನು ನಡೆಸಲಾಗುತ್ತದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಮಂಡಚAಡ ದಿನೇಶ್ ಚಿಟ್ಟಿಯಪ್ಪ, ಗೌರವ ಕಾರ್ಯದರ್ಶಿ ಮೂಕಳಮಾಡ ಅರಸು ನಂಜಪ್ಪ, ತೀರ್ಪುಗಾರರು ಹಾಗೂ ಶಾಲಾ ಮುಖ್ಯೋಪಾ ಧ್ಯಾಯಿನಿ ತನುಜ ನೆರವೇರಿಸಿದರು.

ಪ್ರೌಢಶಾಲಾ ವಿಭಾಗಕ್ಕೆ ‘ಸ್ವಾತಂತ್ರö್ಯ ದೊರೆತ ೭೫ ವರ್ಷಗಳ ನಂತರ ಭಾರತವನ್ನು ನಿಜವಾಗಿಯೂ ವಿಶ್ವದ ಸ್ವತಂತ್ರ ರಾಷ್ಟçಗಳಲ್ಲಿ ಪರಿಗಣಿಸಬಹುದೇ? ಹೌದು / ಇಲ್ಲ’, ಹಿರಿಯ ಪ್ರಾಥಮಿಕ ವಿಭಾಗಕ್ಕೆ ‘ಅತಿಯಾದ ದೇಶಪ್ರೇಮವು ಕೆಲವೊಂದು ಸಂದರ್ಭಗಳಲ್ಲಿ ದೇಶಕ್ಕೆ ಮಾರಕವಾಗುತ್ತಿದೆಯೇ? ಹೌದು / ಇಲ್ಲ’ ಎಂಬ ವಿಷಯದಲ್ಲಿ ಸುಮಾರು ೫೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದ ತೀರ್ಪುಗಾರ ರಾಗಿ ಆಂಗ್ಲ ವಿಭಾಗದಲ್ಲಿ ಡಾ. ವೀಣಾ ಕೆ.ಜಿ., ಇಂಗ್ಲಿಷ್ ವಿಭಾಗದ ಮುಖ್ಯಸ್ಥರು ಕಾವೇರಿ ಕಾಲೇಜು, ವೀರಾಜಪೇಟೆ, ಕಾವ್ಯಶ್ರೀ ಇಂಗ್ಲಿಷ್ ಉಪನ್ಯಾಸಕರು ಸಿ.ಐ.ಟಿ. ಹಳ್ಳಿಗಟ್ಟು, ಕಾವ್ಯ ಸೋಮಯ್ಯ-ಜೆ.ಸಿ.ಐ. ಮಾಜಿ ಅಧ್ಯಕ್ಷರು, ಜೆ.ಸಿ.ಐ. ಗೋಲ್ಡನ್ ಪೊನ್ನಂಪೇಟೆ ಹಾಗೂ ಕನ್ನಡ ವಿಭಾಗದಲ್ಲಿ ತೀರ್ಪುಗಾರರಾಗಿ ರವೀಶ್- ಮುಖ್ಯೋಪಾಧ್ಯಯರು ಬೆಳ್ಳೂರು ಹಿರಿಯ ಪ್ರಾಥಮಿಕ ಶಾಲೆ, ದಮಯಂತಿ- ಉಪನ್ಯಾಸಕರು ಮೂರ್ನಾಡು ಪಿ.ಯು. ಕಾಲೇಜು, ಸುಶ್ಮಿತ - ಕನ್ನಡ ಉಪನ್ಯಾಸಕರು, ಸಿ.ಐ.ಟಿ. ಹಳ್ಳಿಗಟ್ಟು ಭಾಗವಹಿಸಿದ್ದರು.

ಚರ್ಚಾ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದ ಇಂಗ್ಲೀಷ್ ನಲ್ಲಿ ಪ್ರಥಮ ಸ್ಥಾನ, ಮುತ್ತಮ್ಮ ಎ.ಇ., ಎಸ್.ಎಂ.ಎಸ್. ಶಾಲೆ ಅರಮೇರಿ ದ್ವಿತೀಯ, ಮಿಶಾ ಮುತ್ತವ್ವ ಹಾಗೂ ಸಾತ್ವಿಕ್ ತಿಮ್ಮಯ್ಯ ಕಾಲ್ಸ್ ಶಾಲೆ, ಗೋಣಿಕೊಪ್ಪಲು, ತೃತೀಯ ಲಿಖಿತ್ ಬೋಪಣ್ಣ ಜಿ.ಯು. ಅಪ್ಪಚ್ಚಕವಿ ವಿದ್ಯಾಲಯ ಪಡೆದುಕೊಂಡರು.

ಕನ್ನಡ ವಿಭಾಗದಲ್ಲಿ ಪ್ರಥಮ ಸ್ಥಾನ ಪ್ರಾಪ್ತಿ ಪೂವಮ್ಮ - ಕಾಲ್ಸ್ ಶಾಲೆ, ಗೋಣಿಕೊಪ್ಪಲು, ದ್ವಿತೀಯ ಗೆಹನಾ ಎಂ.ಆರ್.-ಲಯನ್ಸ್ ಪ್ರೌಢಶಾಲೆ ಗೋಣಿಕೊಪ್ಪಲು, ತೃತೀಯ ಹಿತ ಅಕ್ಕಮ್ಮ- ಕಾಲ್ಸ್ ಶಾಲೆ ಗೋಣಿಕೊಪ್ಪಲು ಹಾಗೆಯೇ ಹಿರಿಯ ಪ್ರಾಥಮಿಕ ವಿಭಾಗ ಕನ್ನಡದಲ್ಲಿ ಪ್ರಥಮ ಸ್ಥಾನ ಈಶಾನಿ ರೈ- ಕಾಲ್ಸ್ ಶಾಲೆ ಗೋಣಿಕೊಪ್ಪಲು, ತೃತೀಯ - ನಿಶಾ ಟಿ.ಪಿ. - ಅಪ್ಪಚ್ಚಕವಿ ವಿದ್ಯಾಲಯ ಹಾಗೂ ಜಾಗೃತಿ ಬಿಂದು - ಸಂತ ಅಂತೋಣಿ ಶಾಲೆ ಪೊನ್ನಂಪೇಟೆ, ಇಂಗ್ಲೀಷ್ ವಿಭಾಗದಲ್ಲಿ ಪ್ರಥಮ ಸ್ಥಾನ ಸೌಜನ್ಯ ಸಿ.ಯಂ.- ಅಪ್ಪಚ್ಚಕವಿ ವಿದ್ಯಾಲಯ, ದ್ವಿತೀಯ ಪೂಜಿತ ಕಾವೇರಪ್ಪ- ಕಾಲ್ಸ್ ಶಾಲೆ, ತೃತೀಯ ಅಂಚಲ್ ಅಕ್ಕಮ್ಮ - ಸಂತ ಅಂತೋಣಿ ಶಾಲೆ, ಪೊನ್ನಂಪೇಟೆ.

ಈ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಾಕಮಾಡ ಚಂಗಪ್ಪ ಹಾಗೂ ಗಂಗಾ ಚಂಗಪ್ಪ ಅವರು ಗೌರವ ಅತಿಥಿಗಳಾಗಿ ಪಾಲ್ಗೊಂಡಿ ದ್ದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದರು.

ಈ ಸಂದರ್ಭ ವಿವಿಧ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಪಾಲ್ಗೊಂಡಿದ್ದರು, ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿ, ಶಿಕ್ಷಕಿ ಯಂ.ಎಸ್. ಕಾವೇರಮ್ಮ ಕಾರ್ಯಕ್ರಮ ನಿರೂಪಿಸಿ, ಸಹ ಶಿಕ್ಷಕಿ ರೋಮಿ ವಂದಿಸಿದರು. ಭೋಜನದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.