ಕಡಂಗ, ಸೆ. ೧೩: ಕಳೆದ ೪೦ ವರ್ಷಗಳಿಂದ ಕಡಂಗ ಸುತ್ತಮುತ್ತಲಿನ ತೋಟಗಳಲ್ಲಿ ಕೆಲಸ ಮಾಡುತ್ತ ಒಬ್ಬಂಟಿ ಯಾಗಿ ವಾಸವಾಗಿದ್ದ ಕೇರಳದ ಮಲಪುರಂ ನಿವಾಸಿ ಹಸನ್ ಎಂಬ ೭೦ ವರ್ಷದ ವೃದ್ಧ ಕಳೆದ ೧೦-೧೫ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಈ ವ್ಯಕ್ತಿಯ ಸ್ಥಿತಿಯನ್ನು ಅರಿತ ಗ್ರಾಮದ ಅಬ್ದುಲ್ ರಜಾಕ್ ಮತ್ತು ಸಂಗಡಿಗರು ಅವರ ರಕ್ಷಣೆಗೆ ಮುಂದಾದರು.
ಊರಿನ ದಾನಿಗಳ ನೆರವಿನಿಂದ ಹಣವನ್ನು ಸಂಗ್ರಹಿಸಿ ಹಸನ್ ಎಂಬ ವ್ಯಕ್ತಿಯ ಸಂಬAಧಿಕರಿಗೆ ಕರೆ ಮಾಡಿ ಈ ವಿಷಯವನ್ನು ಅವರ ಗಮನಕ್ಕೆ ತಿಳಿಸಲಾಯಿತು.
ವೃದ್ಧನ ಕೂದಲು ಕಟ್ಟಿಂಗ್ ಮತ್ತು ಶೇವ್ ಮಾಡಿಸಿ ನಂತರ ಸ್ಥಳೀಯ ಪಂಚಾಯಿತಿ ಸದಸ್ಯ ಸುಬಿರ್ ಸಿ.ಈ. ಅವರ ವಾಹನದಲ್ಲಿ ಸುಮಾರು ೩೫೦ ಕಿಲೋಮೀಟರ್ ದೂರದಲ್ಲಿರುವ ಹಸನ್ ಎಂಬವರ ಸಹೋದರನ ಮನೆಗೆ ಕರೆದುಕೊಂಡು ಹೋಗಲಾಯಿತು.
ಈ ಸಂದರ್ಭ ಸಮಾಜ ಸೇವಕರಾದ ಝಕರಿಯ, ದುಬೈ ಅಬ್ದುಲ್ ರಜಾಕ್, ಆಟೋ ಚಾಲಕ ರಜಾಕ್ ಹಾಜರಿದ್ದರು.
- ನೌಫಲ್