ಮಡಿಕೇರಿ, ಸೆ. ೧೩: ವಾಮಾಚಾರಕ್ಕಾಗಿ ಮಹಿಳೆ ಯೋರ್ವರನ್ನು ಕೊಲೆ ಮಾಡಿದ್ದ ಪ್ರಕರಣ ಸಾಬೀತಾದ ಹಿನ್ನೆಲೆ ೪ ಆರೋಪಿಗಳಿಗೆ ೧ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೋಯಿಕೇರಿ ಇಬ್ನಿವಳವಾಡಿ ಗ್ರಾಮದಲ್ಲಿ ವಾಸವಾಗಿದ್ದ ಧರಣಿ ಬೊಳ್ಳವ್ವ ಎಂಬವರ ಮನೆಯನ್ನು ದುರ್ಗಾದತ್ತ ಕಾಳಿದಾಸ ಸ್ವಾಮಿ ಅಲಿಯಾಸ್ ಮಹಮ್ಮದ್ ಇಕ್ಬಾಲ್ ಎಂಬಾತ ದೇವಾಲಯವನ್ನಾಗಿ ಮಾಡಿಕೊಂಡು ತನ್ನ ಮೇಲೆ ದೇವರು ಬರುತ್ತದೆ ಎಂದು ಹೇಳಿಕೊಂಡಿದ್ದ, ಧರಣಿ ಬೊಳ್ಳವ್ವ ಅವರ ಮೂಲಕ ಜನರು ಇಲ್ಲಿಗೆ ಬಂದು ದೇವರ ಅನುವಾದ ಪಡೆಯುತ್ತಿದ್ದರು, ಅದರಂತೆ ಇಬ್ನಿವಳವಾಡಿ ಗ್ರಾಮದ ಆಶಾ ಎಂಬವರು ೧೧-೧೦-೨೦೧೫ ರಂದು ತೆರಳಿದ್ದು, ಅದೇ ದಿನ ಪೂಜೆ ಆರಂಭಿಸಿ

(ಮೊದಲ ಪುಟದಿಂದ) ಮರುದಿನ ಬೆಳಿಗ್ಗೆಯ ತನಕ ಪೂಜೆ ನಡೆಸಿ ತನ್ನ ಶಕ್ತಿ ಹೆಚ್ಚಿಸಿಕೊಳ್ಳುವ ಸಲುವಾಗಿ ಮಾಂತ್ರಿಕನು ಧರಣಿ ಬೊಳ್ಳವ್ವ ಹಾಗೂ ಅವರ ಮಕ್ಕಳಾದ ಕವನ್, ಭವನ್ ಅವರುಗಳನ್ನು ಸೇರಿಸಿಕೊಂಡು ತ್ರಿಶೂಲದಿಂದ ಒಡೆದು ಮಹಿಳೆಯನ್ನು ಕೊಲೆ ಮಾಡಿದ್ದರು.

ಘಟನೆ ಬೆಳಕಿಗೆ ಬಂದAತೆ ಅಂದಿನ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಕರೀಂ ತನಿಖೆ ನಡೆಸಿ ತಪ್ಪಿತಸ್ಥರನ್ನು ವಶಕ್ಕೆ ಪಡೆದು ತನಿಖೆ ನಡೆಸಿ ಆರೋಪಿತರ ವಿರುದ್ಧ ದೋಷಾರೋಪಣ ಪಟ್ಟಿ ನೀಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಿ. ಪ್ರಶಾಂತಿ ಅವರು ಮಾಂತ್ರಿಕ ಸೇರಿದಂತೆ ಆರೋಪಿಗಳಾದ ಧರಣಿ ಬೊಳ್ಳವ್ವ, ಕವನ್, ಭವನ್ ಅವರುಗಳಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಸರಕಾರಿ ಅಭಿಯೋಜಕರಾದ ದೇವೇಂದ್ರ ಅವರು ವಾದ ಮಂಡಿಸಿದರು.

ವಾಮಾಚಾರಕ್ಕಾಗಿ ಮಹಿಳೆಯ ಕೊಲೆ ಪ್ರಕರಣ