ಸೋಮವಾರಪೇಟೆ, ಸೆ. ೪: ಸುಂಟಿಕೊಪ್ಪ ಸಮೀಪದ ಗುಂಡುಗುಟ್ಟಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನಿವೃತ್ತ ಎ.ಎಸ್.ಐ. ಕೃಷ್ಣಪ್ಪ ಅವರು ಉಚಿತವಾಗಿ ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ವಿತರಿಸಿದರು.

ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಹಾಗೂ ಸಂಯಮವನ್ನು ಅಳವಡಿಸಿಕೊಳ್ಳಬೇಕು ಎಂದರು. ಪ್ರಮುಖರಾದ ಬಿ.ಬಿ. ಜಯರಾಮ್, ಎ.ಸಿ. ಪೊನ್ನಪ್ಪ, ಜಯರಾಜ್, ಕುಶಾಲಪ್ಪ, ರಾಧಾ, ಎಂ.ಎ. ವಸಂತ್, ಪ್ರಭಾರ ಮುಖ್ಯ ಶಿಕ್ಷಕಿ ಎಸ್.ಎಲ್. ಗೌರಮಣಿ, ವಿದ್ಯಾರ್ಥಿ ತಂಡದ ನಾಯಕ ಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.