ವೀರಾಜಪೇಟೆ, ಸೆ. ೪: ವೀರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಶ್ರೀ ಮಹಾ ಗಣಪತಿ ಆಂಜನೇಯ ದೇವ ಸ್ಥಾನದ ಸಭಾಂಗಣದಲ್ಲಿ ವೀರಾ ಜಪೇಟೆ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಭರತನಾಟ್ಯದಲ್ಲಿ ಸಾಧನೆ ಮಾಡಿದ ಐದು ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಟಿ.ವಿ. ಅನಿಲ್ ಕುಮಾರ್ ಉದ್ಘಾಟಿಸಿ ದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಪುಸ್ತಕದ ಜೊತೆಗೆ ನೃತ್ಯ, ಕ್ರೀಡೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ನಾಟ್ಯ ಮಯೂರಿ ನೃತ್ಯ ಶಾಲೆಯ ಸಂಸ್ಥಾಪಕರಾದ ವಿದೂಷಿ ಪ್ರೇಮಾಂಜಲಿ ಆಚಾರ್ಯ ಮಾತನಾಡಿದರು.
ನೃತ್ಯ ಶಾಲೆಯ ಲಾವಣ್ಯ, ಸಾನಿದ್ಯ, ಶ್ರೇಯಾ ಸೋಮಣ್ಣ, ಶ್ರೀದೇವಿ, ನೌಶಿದ ಇವರುಗಳನ್ನು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಮಹಾಗಣಪತಿ ಆಂಜನೇಯ ದೇವಸ್ಥಾನದ ಧರ್ಮ ದರ್ಶಿಗಳಾದ ಬಾಬಾ ಶಂಕರ್, ಕರ್ನಾಟಕ ರಕ್ಷಣಾ ವೇದಿಕೆ ಸಂತೋಷ್ ಕುಮಾರ್, ಜುನೈದ್ ಹಾಗೂ ಪತ್ರಕರ್ತೆ ರಜಿತ ಕಾರ್ಯಪ್ಪ ಸೇರಿದಂತೆ ನೃತ್ಯ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.