ಪೊನ್ನಂಪೇಟೆ, ಸೆ. ೪: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ ಘಟಕದ ಸಮಾರೋಪ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೊಡವ ಕೂಟಾಳಿಯಡ ಕೂಟದ ಸಾಂಸ್ಕೃತಿಕ ನಿರ್ದೇಶಕಿ ಹಾಗೂ ಗಾಯಕಿ ಕಬ್ಬಚ್ಚೀರ ರಶ್ಮಿ ಕಾರ್ಯಪ್ಪ ಮಾತನಾಡಿ ರಾಷ್ಟಿçÃಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉಪಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ ಮಾತನಾಡಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂದರು. ಎನ್‌ಎಸ್‌ಎಸ್ ಅಧಿಕಾರಿ ಎಂ.ಎನ್. ವನಿತ್ ಕುಮಾರ್ ವಾರ್ಷಿಕ ವರದಿ ವಾಚಿಸಿದರು. ಎನ್‌ಎಸ್‌ಎಸ್ ವಾರ್ಷಿಕ ಶಿಬಿರದ ಉತ್ತಮ ಸ್ವಯಂಸೇವಕ ಪ್ರಶಸ್ತಿಯನ್ನು ಶರತ್, ಉತ್ತಮ ಸ್ವಯಂ ಸೇವಕಿ ಪ್ರಶಸ್ತಿಯನ್ನು ಚಂದನ, ಉತ್ತಮ ನಾಯಕ ಪ್ರಶಸ್ತಿಯನ್ನು ಮಣಿಕಂಠ ಪಡೆದುಕೊಂಡರು. ೨೦೨೨ನೇ ಸಾಲಿನ ಘಟಕದ ಉತ್ತಮ ಸ್ವಯಂ ಸೇವಕ ಲಕ್ಷ, ಉತ್ತಮ ಸ್ವಯಂ ಸೇವಕಿ ವಸುಂಧರ ಭಾರ್ಗವ್, ಉತ್ತಮ ನಾಯಕ ರಂಜಿತ್, ಉತ್ತಮ ನಾಯಕಿ ದೀಪಿಕಾ, ಶಿಸ್ತು ಬದ್ಧ ಸ್ವಯಂಸೇವಕ ಪ್ರಶಸ್ತಿಯನ್ನು ಕಲನ್ ಕಾರ್ಯಪ್ಪ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಅಧಿಕಾರಿ ಎನ್.ಪಿ. ರೀತಾ, ಕನ್ನಡ ಉಪನ್ಯಾಸಕ ಸುಕೇಶ್ ಇದ್ದರು. ಸ್ವಯಂ ಸೇವಕಿ ಪ್ರಮೀಳ ಪ್ರಾರ್ಥಿಸಿ, ಲಿಪಿಕ ಸ್ವಾಗತಿಸಿ, ವಸುಂಧರ ಭಾರ್ಗವ್ ನಿರೂಪಿಸಿದರು.