ವೀರಾಜಪೇಟೆ, ಸೆ. ೮: ವೀರಾಜಪೇಟೆ ನಗರದಲ್ಲಿ ಗೌರಿ- ಗಣೇಶೋತ್ಸವ ಉತ್ಸವ ಮೂರ್ತಿ ಸಾಮೂಹಿಕ ವಿಸರ್ಜನೆ ವೇಳೆಯಲ್ಲಿ ನಗರ ಸಂಚಾರದಲ್ಲಿ ಬದಲಾವಣೆಗೊಳಿಸಲಾಗಿದೆ ಎಂದು ಆರಕ್ಷಕ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.

ವೀರಾಜಪೇಟೆ ನಗರದ ಐತಿಹಾಸಿಕ ಗೌರಿ-ಗಣೇಶೋತ್ಸವ ವಿಸರ್ಜನೆ ಯು ತಾ. ೯ ರಂದು ಉತ್ಸವ ಮೂರ್ತಿಗಳ ಶೋಭಾಯತ್ರೆ ಮೂಲಕ ನಡೆಯಲಿದ್ದು, ಶೋಭಾಯಾತ್ರೆ ಸುಗಮವಾಗಿ ನಡೆಯುವ ಸಲುವಾಗಿ, ವೀರಾಜಪೇಟೆ ನಗರದಲ್ಲಿ ವಾಹನ ನಿಲುಗಡೆ ವ್ಯವಸ್ಥೆಗೆ ಬದಲಾವಣೆ ನಿಷೇಧ ಮಾಡಲಾಗಿದೆ. ತಾ. ೯ರ ಮಧ್ಯಾಹ್ನ ೧ ಗಂಟೆಯಿAದ ಮರು ದಿನ ಉತ್ಸವ ಮೂರ್ತಿಗಳ ವಿಸರ್ಜನೆ ಆಗುವವರೆಗೆ ಈ ವ್ಯವಸ್ಥೆ ಜಾರಿಯಲ್ಲಿರಲಿದೆ.

ವೀರಾಜಪೇಟೆ ನಗರಕ್ಕೆ ಪ್ರವೇಶವನ್ನು ಪಡೆಯುವ ವಾಹನಗಳು ಪಂಜರ್ ಪೇಟೆಯಲ್ಲಿ ವಾಹನ ನಿಲುಗಡೆ ಮಾಡಬಹುದು, ಕೇರಳ ರಾಜ್ಯದಿಂದ ಆಗಮಿಸುವ ಪ್ರಯಾಣಿಕರು. ಕೀರ್ತಿ ಹೋಟೆಲ್ ಮಲಬಾರ್ ರಸ್ತೆ- ಆರ್ಜಿ ರಸ್ತೆಯಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಮಡಿಕೇರಿಯಿಂದ ನಗರಕ್ಕೆ ಆಗಮಿಸುವವರು, ಚಿಕ್ಕಪೇಟೆ ಜಂಕ್ಷನ್ ಬಳಿ ವಾಹನ ನಿಲುಗಡೆಗೊಳಿಸಬೇಕು. ಅಮ್ಮತ್ತಿ ಸಿದ್ದಾಪುರ ಮಾರ್ಗವಾಗಿ ಆಗಮಿಸುವ ಪ್ರಯಾಣಿಕರು ಸುಂಕದ ಕಟ್ಟೆ - ಸಿದ್ದಾಪುರ ರಸ್ತೆಯಲ್ಲಿ ವಾಹನ ನಿಲುಗಡೆಗೊಳಿಸಬೇಕು.

ಮಡಿಕೇರಿಗೆ ತೆರಳುವ ವಾಹನಗಳು ಹಾತೂರು ಕೊಮ್ಮೆತ್ತೋಡು,ಅಮ್ಮತ್ತಿ ಕೊಂಡAಗೇರಿ, ಮೂರ್ನಾಡು ಮಾರ್ಗವಾಗಿ ಚಲಿಸಬಹುದಾಗಿದೆ . ಕೇರಳ ರಾಜ್ಯಕ್ಕೆ ತೆರಳುವ ವಾಹನಗಳು ಮೈಸೂರು, ಹುಣಸೂರು, ಗೋಣಿಕೊಪ್ಪಲು ಬಾಳುಗೋಡು ಪೆರುಂಬಾಡಿ (ಪೊಲೀಸ್ ಚೆಕ್‌ಪೋಸ್ಟ್) ಮಾರ್ಗವಾಗಿ ತೆರಳುಬಹುದಾಗಿದೆ.