ಮಡಿಕೇರಿ, ಸೆ. ೮: ಯುನೈಟೆಡ್ ಕಿಂಗ್‌ಡಮ್‌ನಲ್ಲಿನ ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕರಾಟೆ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಇದುವರೆಗೆ ೧೬ ಪದಕಗಳನ್ನು ಪಡೆದುಕೊಂಡಿದ್ದಾರೆ. ಭಾರತ ತಂಡದ ಉಸ್ತುವಾರಿಯನ್ನು ಕೊಡಗು ಜಿಲ್ಲೆಯವರಾದ ಮಾಜಿ ಎಂ.ಎಲ್.ಸಿ ಅರುಣ್ ಮಾಚಯ್ಯ ಅವರು ವಹಿಸಿಕೊಂಡಿದ್ದು, ತಂಡವು ೩ ಚಿನ್ನ, ೫ ಬೆಳ್ಳಿ ಹಾಗೂ ೮ ಕಂಚಿನ ಪದಕಗಳನ್ನು ಪಡೆದುಕೊಂಡಿದ್ದು ಕ್ರೀಡಾಕೂಟದಲ್ಲಿ ೩ನೇ ಸ್ಥಾನದಲ್ಲಿದೆ.