ವೀರಾಜಪೇಟೆ, ಸೆ. ೮: ವೀರಾಜಪೇಟೆ ಪಟ್ಟಣದಲ್ಲಿ ಪ್ರತಿಷ್ಠಾಪಿಸಿರುವ ೨೨ ಗಣಪತಿಯ ಮೂರ್ತಿಗಳ ವಿಸರ್ಜನೋತ್ಸವಕ್ಕೆ ಸಕಲ ಸಿದ್ದತೆ ನಡೆಸಲಾಗಿದೆ. ತಾ. ೯ರ ರಾತ್ರಿ ಪೂರ್ತಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೂರ್ತಿಗಳ ವಿಸರ್ಜನೋತ್ಸವ ನಡೆಯಲಿದ್ದು, ಪೊಲೀಸ್ ಇಲಾಖೆ ಸಹ ಅಗತ್ಯ ಕ್ರಮಗಳನ್ನು ಕೈಗೊಂಡು ಕರ್ತವ್ಯಕ್ಕೆ ೬೦೦ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದೆ.

ಈಗಾಗಲೆ ಸಭೆಯನ್ನು ನಡೆಸಿರುವ ಪೊಲೀಸ್ ಇಲಾಖೆ ಆಯಾ ಸಮಿತಿಯವರಿಗೆ ಯಾವ ರೀತಿ ನಿಯಮ ಪಾಲನೆ ಮಾಡಬೇಕು ಎಂಬ ಕುರಿತು ಮಾಹಿತಿ ನೀಡಿದೆ. ಅಲ್ಲದೆ ತಾ. ೯ರ ಮಧ್ಯಾಹ್ನ ೧೨ ಗಂಟೆಯಿAದ ತಾ. ೧೦ ಬೆಳಿಗ್ಗೆ ೧೦ ಗಂಟೆವರೆಗೆ ಪಟ್ಟಣದೊಳಗೆ ಎಲ್ಲಾ ವೀರಾಜಪೇಟೆ, ಸೆ. ೮: ವೀರಾಜಪೇಟೆ ಪಟ್ಟಣದಲ್ಲಿ ಪ್ರತಿಷ್ಠಾಪಿಸಿರುವ ೨೨ ಗಣಪತಿಯ ಮೂರ್ತಿಗಳ ವಿಸರ್ಜನೋತ್ಸವಕ್ಕೆ ಸಕಲ ಸಿದ್ದತೆ ನಡೆಸಲಾಗಿದೆ. ತಾ. ೯ರ ರಾತ್ರಿ ಪೂರ್ತಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೂರ್ತಿಗಳ ವಿಸರ್ಜನೋತ್ಸವ ನಡೆಯಲಿದ್ದು, ಪೊಲೀಸ್ ಇಲಾಖೆ ಸಹ ಅಗತ್ಯ ಕ್ರಮಗಳನ್ನು ಕೈಗೊಂಡು ಕರ್ತವ್ಯಕ್ಕೆ ೬೦೦ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದೆ.

ಈಗಾಗಲೆ ಸಭೆಯನ್ನು ನಡೆಸಿರುವ ಪೊಲೀಸ್ ಇಲಾಖೆ ಆಯಾ ಸಮಿತಿಯವರಿಗೆ ಯಾವ ರೀತಿ ನಿಯಮ ಪಾಲನೆ ಮಾಡಬೇಕು ಎಂಬ ಕುರಿತು ಮಾಹಿತಿ ನೀಡಿದೆ. ಅಲ್ಲದೆ ತಾ. ೯ರ ಮಧ್ಯಾಹ್ನ ೧೨ ಗಂಟೆಯಿAದ ತಾ. ೧೦ ಬೆಳಿಗ್ಗೆ ೧೦ ಗಂಟೆವರೆಗೆ ಪಟ್ಟಣದೊಳಗೆ ಎಲ್ಲಾ ಮಹಾಗಣಪತಿ ಸೇವಾ ಸಂಘ, ಶ್ರೀ ಬಸವೇಶ್ವರ ದೇವಸ್ಥಾನ, ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ಶ್ರೀ ವಿನಯಕ ಯುವ ಭಕ್ತ ಮಂಡಳಿ, ಶ್ರೀ ವಿಜಯ ವಿನಾಯಕ ಉತ್ಸವ ಸಮಿತಿ, ಶ್ರೀ ಕಣ್ಮಣಿ ವಿನಾಯಕ ಉತ್ಸವ ಸೇವಾ ಸಮಿತಿ, ಶ್ರೀ ಗಣಪತಿ ಸೇವಾ ಸಮಿತಿ, ಶ್ರೀ ದೋಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ಶ್ರೀ ವಿಘ್ನೇಶ್ವರ ಗಣಪತಿ ಸೇವಾ ಸಮಿತಿ, ಶ್ರೀ ವಿಘ್ನೇಶ್ವರ ಗಣಪತಿ ಸೇವಾ ಸಮಿತಿ, ಶ್ರೀ ಜಲದರ್ಶೀನಿ ವಿನಾಯಕ ಸೇವ ಸಮಿತಿ, ಶ್ರೀ ವಿಘ್ನೇಶ್ವರ ಉತ್ಸವ ಸಮಿತಿ, ಶ್ರೀ ಸರ್ವ ಸಿದ್ದಿ ವಿನಾಯಕ ಉತ್ಸವ ಸಮಿತಿ ಭಾಗವಹಿಸಲಿದ್ದು, ಈ ಎಲ್ಲಾ ಮೂರ್ತಿಗಳನ್ನು ತಾ. ೧೦ ರಂದು ಬೆಳಿಗ್ಗಿನ ಜಾವ ಐತಿಹಾಸಿಕ ಗೌರಿಕೆರೆಯಲ್ಲಿ ವಿರ್ಸಜಿಸಲಾಗುತ್ತದೆ. ಇದಕ್ಕಾಗಿ ಪ.ಪಂ. ಸಕಲ ಸಿದ್ಧತೆಗಳನ್ನು ಈಗಾಗಲೆ ನಡೆಸಿದೆ. ಉತ್ಸವ ಮೂರ್ತಿ ಗಳು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಬಳಿಕ ರಾಜಬೀದಿಯಲ್ಲಿ ಮೆರವಣಿಗೆ ನಡೆಸಲಿವೆ. ಇದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸಲಿದ್ದು, ಮಿನಿ ದಸರಾವೆಂದೇ ಪ್ರಖ್ಯಾತಿ ಪಡೆದುಕೊಂಡಿದೆ.