ಕುಶಾಲನಗರ, ಸೆ.೭: ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾದ ವಿ.ಪಿ. ಶಶಿಧರ್ ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರ ಗಡಿ ಭಾಗದಲ್ಲಿ ಪಕ್ಷದ ಕಾರ್ಯಕರ್ತರು ಸ್ವಾಗತಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ವರಿಷ್ಟರು ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಲಾಗುವುದು. ಕಾರ್ಯಕರ್ತರನ್ನು ಒಗ್ಗೂಡಿಸಿ ಬಲವರ್ಧನೆಗೆ ಶ್ರಮಿಸಲಾಗುವುದು ಎಂದರು.
ಮಡಿಕೇರಿ ಕ್ಷೇತ್ರದಲ್ಲಿ ಕುಶಾಲನಗರ ಬ್ಲಾಕ್ ಒಂದರಲ್ಲೇ ಶೇ.೪೦ರಷ್ಟು ಮತದಾರರು ಇದ್ದಾರೆ. ಇದು ಪಕ್ಷದ ಜಯಭೇರಿಗೆ ಪೂರಕವಾಗಲಿದೆ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಧೀರ್ಘಕೇಶಿ ಶಿವಣ್ಣ ಪ್ರಮುಖರಾದ ಮಂಜುನಾಥ ಗುಂಡುರಾವ್, ಅಬ್ದುಲ್ ಖಾದರ್, ಅಬ್ದುಲ್ ರಜಾಕ್, ತನ್ನೀರ ಮೈನಾ, ಎಂ.ಕೆ ದಿನೇಶ್, ಕಲೀಮುಲ್ಲಾ, ಟಿ.ಪಿ ಹಮೀದ್, ರಮೇಶ್, ಮುಸ್ತಾಫ, ಕೃಷ್ಣೋಜಿರಾವ್, ಭೀಮಯ್ಯ, ಬಿ.ಡಿ. ಅಣ್ಣಯ್ಯ ಪಕ್ಷದ ಪ್ರಮುಖರು ಇದ್ದರು. ಇದೇ ವೇಳೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.