ಶನಿವಾರಸಂತೆ, ಸೆ. ೭: ಪಟ್ಟಣದ ಕಾವೇರಿ ರಸ್ತೆಯಲ್ಲಿ ಕಾವೇರಿ ಪಿಯು ಕಾಲೇಜು ಇದ್ದು, ಮುಂಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಅಲ್ಲಲ್ಲಿ ಹೊಂಡಗಳಿದ್ದು, ದುರಸ್ತಿಯಾಗದ ಈ ರಸ್ತೆಯಲ್ಲಿ ನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಗೊಣಗುತ್ತಲೆ ತಿರುಗಾಡುತ್ತಿದ್ದಾರೆ.

೨ ದಿನಗಳಿಂದ ಕಾಲೇಜಿನ ಎದುರು ರಸ್ತೆ ಬದಿಯಲ್ಲಿ ಆಳೆತ್ತರದ ಹೊಂಡ ನಿರ್ಮಾಣ ಮಾಡಿ ನೀರಿನ ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ಆಗಾಗ್ಗೆ ಸುರಿಯುವ ಮಳೆಗೆ ಚರಂಡಿ ವ್ಯವಸ್ಥೆಯಿಲ್ಲದ ರಸ್ತೆ ಕೆಸರುಮಯವಾಗಿದೆ. ಕೆಸರಿನಲ್ಲಿ ಬಿದ್ದು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿ ಪಿಡಿಓ, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರಿಗೆ ಮನವಿಪತ್ರ ಸಲ್ಲಿಸಲಾಗಿದೆ. ಸಂಬAಧಪಟ್ಟ ಅಧಿಕಾರಿಗಳು ಶೀಘ್ರ ಈ ರಸ್ತೆಯ ದುರಸ್ತಿ ಕಾಮಗಾರಿ ಕೈಗೊಳ್ಳಲಿ ಎಂದು ಕಾವೇರಿ ಕಾಲೇಜು ಪ್ರಾಂಶುಪಾಲ ಎಚ್.ಎನ್. ದೇವರಾಜ್ ಆಗ್ರಹಿಸಿದ್ದಾರೆ.