ಮಡಿಕೇರಿ, ಸೆ. ೭: ಕೊಡವರು ತಮ್ಮ ಜನ್ಮ ಭೂಮಿಯನ್ನು ಪ್ರೀತಿಸಬೇಕು. ಇದರೊಂದಿಗೆ ಹಾಗೆ ತಮ್ಮ ಜನ್ಮದತ್ತ ಆಯುಧವಾದ ಕೋವಿಯನ್ನು ಪೂಜಿಸಿ ಅದರ ಗೌರವ ಉಳಿಸಿಕೊಳ್ಳಬೇಕು ಹಾಗೂ ತಮ್ಮ ಸಾಂಪ್ರದಾಯಿಕ ಹಬ್ಬವಾದ ಕೈಲ್‌ಪೊಳ್ದ್ ಹಬ್ಬವನ್ನು ಹುರುಪಿನಿಂದ ಆಚರಿಸಬೇಕೆಂದು ವಿಧಾನ ಪರಿಸತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಅವರು ಕರೆ ನೀಡಿದರು. ಮಡಿಕೇರಿ, ಸೆ. ೭: ಕೊಡವರು ತಮ್ಮ ಜನ್ಮ ಭೂಮಿಯನ್ನು ಪ್ರೀತಿಸಬೇಕು. ಇದರೊಂದಿಗೆ ಹಾಗೆ ತಮ್ಮ ಜನ್ಮದತ್ತ ಆಯುಧವಾದ ಕೋವಿಯನ್ನು ಪೂಜಿಸಿ ಅದರ ಗೌರವ ಉಳಿಸಿಕೊಳ್ಳಬೇಕು ಹಾಗೂ ತಮ್ಮ ಸಾಂಪ್ರದಾಯಿಕ ಹಬ್ಬವಾದ ಕೈಲ್‌ಪೊಳ್ದ್ ಹಬ್ಬವನ್ನು ಹುರುಪಿನಿಂದ ಆಚರಿಸಬೇಕೆಂದು ವಿಧಾನ ಪರಿಸತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಅವರು ಕರೆ ನೀಡಿದರು. ನಂತರ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಸಮಾಜದ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪೈಪೋಟಿ ಕಾರ್ಯಕ್ರಮದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವುದು ಸೇರಿದಂತೆ ವಿವಿಧ ಕ್ರೀಡೆಗಳನ್ನು ನಡೆಸಲಾಯಿತು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಕೇಲೆಟಿರ ಪವಿತ್, ೨ನೇ ಬಹುಮಾನ ಕರೋಟಿರ ಬೆಲ್ಲು, ೩ನೇ ಬಹುಮಾನ ಮುಂಡ್ಯೋಳAಡ ದಿನು ಪಡೆದರು.
ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನಪರಿಷತ್ ಸದಸ್ಯರಾದ ಮಂಡೇಪAಡ ಸುಜಾ ಕುಶಾಲಪ್ಪ ವಹಿಸಿದ್ದರು. ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಖಜಾಂಚಿ ಚಿರಿಯಪಂಡ ಕಾಶಿಯಪ್ಪ ಇವರುಗಳು ಇದ್ದರು.