ಸುಂಟಿಕೊಪ್ಪ, ಸೆ. ೭: ನಿನ್ನೆ ದಿನ ಇಲ್ಲಿಗೆ ಸಮೀಪದ ಭೂತನಕಾಡುವಿನ ನಲ್ಲೂರುವಿನಲ್ಲಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಈರ್ವರು ಯುವಕರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ವಿದ್ಯಾರ್ಥಿನಿ ಆಫಿದಾ (೧೯) ಆತ್ಮಹತ್ಯೆ ಮಾಡಿಕೊಂಡ ಸಂದರ್ಭ ಸ್ಥಳದಲ್ಲಿ ಸಮೀಪದ ಹೊಸಕೋಟೆಯ ಪ್ರದೀಶ್ ಹಾಗೂ ಜಿತೇಶ್ ಎಂಬಿಬ್ಬರು ಯುವಕರುಗಳಿದ್ದು, ಅವರುಗಳು ಆತ್ಮಹತ್ಯೆಗೆ ಪ್ರೇರೇಪಿಸಿದ್ದಾರೆ ಎಂದು ಮೃತಳ ತಂದೆ ಅಲಿ ನೀಡಿರುವ ದೂರಿನ ಆಧಾರದಲ್ಲಿ ಸೆಕ್ಷನ್ ೩೦೬ರಡಿ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ಈರ್ವರನ್ನು ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ.