ಆಲೂರು ಸಿದ್ದಾಪುರ, ಸೆ. ೭: ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಯಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧÀ್ಯಕ್ಷ ಸ್ಥಾನವನ್ನು ಉಪಾಧ್ಯಕ್ಷ ಅನಂತ್ ಕುಮಾರ್ ಅವರಿಗೆ ನೀಡುವಂತೆ ಒತ್ತಾಯಿಸಿದ್ದಾರೆ.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧÀ್ಯಕ್ಷರಾಗಿದ್ದ ಅನಂತ್ ಕುಮಾರ್ ಅವರನ್ನು ಬದಲಾಯಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೆೆÃರಿಗೆ ಒಮ್ಮೆಯೂ ಭೇಟಿ ನೀಡದ ವ್ಯಕ್ತಿಯನ್ನು ಅಧÀ್ಯಕ್ಷರಾಗಿ ಮಾಡಿರುವ ಕ್ರಮವನ್ನು ವಿರೋಧಿಸಿ ಇಂದು ಶನಿವಾರಸಂತೆ ಸಮೀಪದ ಹಂಡ್ಲಿ ಬೀಕಳ್ಳಿಯ ಅನಂತ್ ಕುಮಾರ್ ನಿವಾಸದಲ್ಲಿ ಕರೆದಿದ್ದ ಸಭೆಯಲ್ಲಿ ಅನಂತ್ ಕುಮಾರ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಜಿಲ್ಲಾ ಕಾರ್ಯಾಧÀ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಅಧÀ್ಯಕ್ಷರ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧÀ್ಯಕ್ಷ

(ಮೊದಲ ಪುಟದಿಂದ) ಅನಂತ್ ಕುಮಾರ್ ಪಕ್ಷ ಅನೇಕ ಜವಾಬ್ದಾರಿಗಳನ್ನು ನೀಡಿದೆ; ಅದನ್ನು ಸರಿಯಾಗಿ ನಿಭಾಯಿಸಿದ್ದೇನೆ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧÀ್ಯಕ್ಷ ಸ್ಥಾನ ನೀಡಿದ ನಂತರ ಕಾಂಗ್ರೆಸ್ ಮತದಾರರ ಸಂಖ್ಯೆ ಹೆಚ್ಚಾಗಿದೆ. ಪಕ್ಷಕ್ಕೆ ಇನ್ನಷ್ಟು ಬಲ ತುಂಬುವ ಕೆಲಸ ಮಾಡಿದ್ದೇನೆ. ಆದರೆ ನನ್ನನ್ನು ಕೇಳದೆ ಏಕಾಏಕಿ ಅಧÀ್ಯಕ್ಷ ಸ್ಥಾನ ಬದಲಾಯಿಸಿದ್ದಾರೆ. ನಾನು ಪಕ್ಷ ಸಂಘಟನೆ ಮಾಡಿದ್ದು, ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡಿದ್ದೇನೆ. ಆದರೆ ಇದೀಗ ಈ ರೀತಿಯ ನೋವು ಕೊಟ್ಟಿರುವುದು ಬೇಸರದÀ ಸಂಗತಿ ಎಂದರು. ಇದೇ ರೀತಿ ಮುಂದುವರೆದರೆ ಕಾಂಗ್ರೆಸ್‌ನಲ್ಲಿ ಯಾವ ಕಾರ್ಯಕರ್ತರು ಇರುವುದಿಲ್ಲ; ಮತದಾರರು ಸಹ ಇರುವುದಿಲ್ಲ. ಇತರ ಪಕ್ಷದವರು ಸುಲಭವಾಗಿ ಗೆಲ್ಲಲು ಅವಕಾಶ ಮಾಡಿಕೊಡುತ್ತಿರುವುದು ಇಂತಹ ಕಾರ್ಯಾಧÀ್ಯಕ್ಷರುಗಳು ಹಾಗೂ ಕೆಲ ಕಾಂಗ್ರೆಸ್ ನಾಯಕರುಗಳೇ ಎಂದರು.

ಪಕ್ಷದ ಸಿದ್ಧಾಂತ ಸರಿಯಾಗಿದೆ; ಆದರೆ ಜಿಲ್ಲಾ ಕಾರ್ಯಾಧÀ್ಯಕ್ಷರ ಹಾಗೂ ಕೆಲ ನಾಯಕರ ನಡೆ ಬದಲಾಗಬೇಕಿದೆ. ಇಲ್ಲವಾದಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ಅನಂತ್ ಕುಮಾರ್ ಅಸಮಾಧಾನ ಹೊರಹಾಕಿದರು.

ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧÀ್ಯಕ್ಷ ಸತೀಶ್, ಡಿಸಿಸಿ ಕಾರ್ಯದರ್ಶಿ ಕಾಂತರಾಜ್, ಜನಾರ್ಧನ್, ಸದಸ್ಯರಾದ ಹೂವಯ್ಯ, ಶರತ್ ಶೇಖರ್, ವಿರೇಂದ್ರ, ಜಿಲ್ಲಾ ಪಂಚಾಯ್ತಿ ಮಾಜಿ ಅಧÀ್ಯಕ್ಷೆ ಜಯಮ್ಮ, ಸಂದೀಪ್, ಕಾಂಗ್ರೆಸ್ ವಕ್ತಾರ ಸುರೇಶ್, ರಫಿಕ್, ತಾಲೂಕು ಪಂಚಾಯ್ತಿ ಮಾಜಿ ಸದಸ್ಯೆ ಗೀತಾ ಧರ್ಮಪ್ಪ, ಕೊಡ್ಲಿಪೇಟೆ ಗ್ರಾ.ಪಂ. ಅಧÀ್ಯಕ್ಷ ಶೋಬಿತ್ ಗೌಡ, ರಂಗಸ್ವಾಮಿ, ಮಹ್ಮöದ್ ಕನ್ನಾ ಮುಂತಾದವರಿದ್ದರು.

-ವರದಿ: ದಿನೇಶ್ ಮಾಲಂಬಿ.

ಅನAತ್ ಕುಮಾರ್ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧÀ್ಯಕ್ಷರಾದ ನಂತರ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಕಾರ್ಯಕರ್ತರನ್ನು ಸೇರ್ಪಡೆಗೊಳಿಸಿದ್ದಾರೆ. ಉತ್ತಮ ಮನೆ ನಿರ್ಮಾಣ ಮಾಡಿದ ನಂತರ ಆ ಮನೆಯಲ್ಲಿ ಗೂಬೆಯನ್ನು ಕೂರಿಸಿದರೆ ಆ ಮನೆಗೆ ಯಾರು ಬರುತ್ತಾರೆ? ಇದು ಎಚ್ಚರಿಕೆ. ತಕ್ಷಣ ಬದಲಾವಣೆ ತರಬೇಕು.

-ಅಶ್ರಫ್, ಕುಶಾಲನಗರ ಕಾಂಗ್ರೆಸ್ ಮಾಜಿ ಅಧÀ್ಯಕ್ಷ.

ಕಾಂಗ್ರೆಸ್ ಜಿಲ್ಲೆಯಲ್ಲಿ ಗಟ್ಟಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎರಡು ಎಂಎಲ್‌ಎ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ. ಆದರೆ ಈ ರೀತಿ ಇರುವಾಗ ಜಿಲ್ಲೆಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡದೆ ಬೇರೆ ಜಿಲ್ಲೆಯವರಿಗೆ ಟಿಕೆಟ್ ನೀಡುವ ಮೂಲಕ ಮತ್ತೆ ಬೇರೆ ಪಕ್ಷದವರಿಗೆ ಗೆಲುವು ಸಾಧಿಸಲು ಅವಕಾಶ ಮಾಡಿಕೊಡಲು ಕೆಲ ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧÀ್ಯಕ್ಷ ಸ್ಥಾನ ಬದಲಾವಣೆ ಈ ಸಂದರ್ಭದಲ್ಲಿ ಸರಿಯಲ್ಲ. ಇದಕ್ಕೆ ವಿರೋಧವಿದೆ.

-ಕೆ.ಎಂ.ಲೊಕೇಶ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧÀ್ಯಕ್ಷ.

ಕಾಂಗ್ರೆಸ್‌ನಲ್ಲಿ ಉತ್ತಮ ಕೆಲಸಗಾರರಿದ್ದಾರೆ. ಅವರನ್ನು ಬಿಟ್ಟು ಯೋಗ್ಯತೆ ಇಲ್ಲದ ವ್ಯಕ್ತಿಯನ್ನು ಬ್ಲಾಕ್ ಕಾಂಗ್ರೆಸ್ ಅಧÀ್ಯಕ್ಷನನ್ನಾಗಿ ಮಾಡಿರುವುದು ಕಾಂಗ್ರೆಸ್ ಕಾರ್ಯಕರ್ತರ ದುರಂತ. ಇದರಿಂದ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಪಕ್ಷದ ನಾಯಕರು ಬೇಗ ಎಚ್ಚೆತ್ತುಕೊಳ್ಳಬೇಕಾಗಿದೆ.

-ಮಂಜುನಾಥ್, ಹೆಬ್ಬಾಲೆ ಗ್ರಾ.ಪಂ. ಅಧÀ್ಯಕ್ಷ.

ಅನಂತ್ ಕುಮಾರ್ ಉತ್ತಮ ಕೆಲಸಗಾರ; ಇವರಿಂದಾಗಿ ಪಕ್ಷ ಜಿಲ್ಲೆಯಲ್ಲಿ ಉತ್ತಮ ಮಟ್ಟದಲ್ಲಿದೆ. ಕಾರ್ಯಕರ್ತರಿಗೆ ಯಾವುದೇ ಸಂದರ್ಭದಲ್ಲಿ ಸಮಸ್ಯೆಯಾದಾಗ ತಕ್ಷಣ ಸ್ಪಂದಿಸುವ ವ್ಯಕ್ತಿ. ಆದರೆ ಪಕ್ಷ ವಿರೋಧಿ ಚಟುವಟಿಕೆಗಳನ್ನೇ ಮಾಡುತ್ತ ಬಂದಿರುವ ವ್ಯಕ್ತಿಗೆ ಅಧÀ್ಯಕ್ಷ ಸ್ಥಾನ ನೀಡಿರುವುದು ದುರಂತ. ಪಕ್ಷ ಜಿಲ್ಲಾಧÀ್ಯಕ್ಷ ಸ್ಥಾನವನ್ನು ಅನಂತ್ ಕುಮಾರ್ ಅವರಿಗೆ ನೀಡಬೇಕು.

-ಕುಮುದ ಧರ್ಮಪ್ಪ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ.