ಮಡಿಕೇರಿ, ಸೆ. ೬: ಮುಂಬೈಯಲ್ಲಿರುವ ಕೂರ್ಗ್ ಅಸೋಸಿಯೇಷನ್ (ಸಿ.ಎ.ಎಂ.) ೧೦೦ ವರ್ಷಗಳನ್ನು ಪೂರೈಸಿದೆ. ಈ ಶತಮಾನೋತ್ಸವ ಸಮಾರಂಭವನ್ನು ‘ಕೈಲ್ ಪೊಳ್ದ್’ ಹಬ್ಬದೊಂದಿಗೆ ಸಂಭ್ರಮದಿAದ ಆಚರಿಸಲಾಯಿತು. ೧೯೨೧ರಲ್ಲಿ ಕೂರ್ಗ್ ಅಸೋಸಿಯೇಷನ್ ಮುಂಬೈ ಸಂಸ್ಥೆ ಪ್ರಾರಂಭಗೊAಡಿದ್ದು, ೨೦೨೧ಕ್ಕೆ ನೂರು ವರ್ಷ ಪೂರೈಸಿದೆ. ಆದರೆ ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ಕಾರ್ಯಕ್ರಮ ಆಚರಿಸಿರಲಿಲ್ಲ.
ಶತಮಾನೋತ್ಸವ ಸಮಾರಂಭವನ್ನು ಇದೀಗ ಕೈಲ್ ಪೊಳ್ದ್ ಹಬ್ಬದೊಂದಿಗೆ ಆಚರಿಸಲಾಯಿತು. ಕೂರ್ಗ್ ಅಸೋಸಿಯೇಷನ್ ಸಂಸ್ಥೆ ನವಿ ಮುಂಬೈಯ ಐರೋಲಿಯಲ್ಲಿ ಸ್ವಂತ ಕಟ್ಟಡವನ್ನು ಹೊಂದಿದೆ. ೧೯೯೬ರಲ್ಲಿ ಸಂಸ್ಥೆಗೆ ಸ್ವಂತ ಕಟ್ಟಡವನ್ನು ನಿರ್ಮಿಸಲಾಗಿದೆ. ಇಲ್ಲಿ ಸಂಸ್ಥೆಯ ಸದಸ್ಯರು ಕೊಡಗಿನ ಹಬ್ಬಗಳಾದ ಕೈಲ್ ಪೊಳ್ದ್,
(ಮೊದಲ ಪುಟದಿಂದ) ಕಾವೇರಿ ಸಂಕ್ರಮಣ, ಪುತ್ತರಿಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇದಲ್ಲದೆ ಸಂಸ್ಥೆ ಪ್ರತ್ಯೇಕವಾದ ಹಾಕಿ ತಂಡವನ್ನು ಹೊಂದಿದ್ದು, ೧೯೩೦ರಲ್ಲಿ ಇದನ್ನು ಮುಂಬೈ ಹಾಕಿ ಸಂಸ್ಥೆಯೊAದಿಗೆ ನೋಂದಾಯಿಸ ಲಾಗಿದೆ.
ಇದೀಗ ನಡೆದ ಶತಮಾನೋತ್ಸವ ಹಾಗೂ ಕೈಲ್ ಪೊಳ್ದ್ ಕಾರ್ಯಕ್ರಮದಲ್ಲಿ ಮುಂಬೈ ವ್ಯಾಪ್ತಿಯಲ್ಲಿರುವ ಕೊಡವ ಜನಾಂಗದವರು ಭಾಗಿಗಳಾಗಿದ್ದರು. ಕಾರ್ಯಕ್ರಮದಲ್ಲಿ ೧೦೦ ವರ್ಷದ ಸವಿನೆನಪಿನ ಹಿನ್ನೆಲೆಯಲ್ಲಿ ವಿವಿಧ ಮಾಹಿತಿಗಳನ್ನು ಒಳಗೊಂಡ ‘ಎ ಸೆಂಚುರಿ ಆಫ್ ಎಂಡೆವರ್ ಸಕ್ಸಸ್’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭ ಆಯುಧ ಪೂಜೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ವಾಲಗತಾಟ್ ನಡೆಯಿತು ಎಂದು ನಾಪಂಡ ಎಂ. ರಮೇಶ್ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ನ ಅಧ್ಯಕ್ಷರಾದ ಮಾಜಿ ಒಲಂಪಿಯನ್ ಮನೆಯಪಂಡ ಎಂ. ಸೋಮಯ್ಯ, ಕಾರ್ಯದರ್ಶಿ ಬೊಳ್ಳಚೆಟ್ಟಿರ ಮಂದಣ್ಣ, ಖಜಾಂಚಿ ಪಳಂಗAಡ ನಾಣಯ್ಯ, ಪದಾಧಿಕಾರಿಗಳಾದ ನಾಪಂಡ ಎಂ. ರಮೇಶ್, ಡಾ. ಕಾವ್ಯ, ಕುಪ್ಪಂಡ ಮುದ್ದಯ್ಯ, ಕಳ್ಳಿಚಂಡ ಅಯ್ಯಣ್ಣ, ಬಿದ್ದಂಡ ಜಗದೀಪ್ ನಂಜಪ್ಪ, ಅರೆಯಡ ರಾಜ, ಪಾಂಡAಡ ರಮೇಶ್, ಪುಷ್ಪ ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.