ನಾಸಲ್ ಕೋವಿಡ್ ಲಸಿಕೆಗೆ ಅನುಮೋದನೆ

ನವದೆಹಲಿ, ಸೆ. ೬: ಭಾರತ್ ಬಯೋಟೆಕ್ ಸಂಸ್ಥೆಯ ನಾಸಲ್ ಕೋವಿಡ್ ಲಸಿಕೆಗೆ ಭಾರತೀಯ ಔಷಧ ನಿಯಂತ್ರಕ ಪ್ರಾಧಿಕಾರ ಡಿಸಿಜಿಐ ಅನುಮೋದನೆ ನೀಡಿದೆ. ದೇಶದಲ್ಲಿ ೧೮ ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಸೋಂಕಿನ ವಿರುದ್ಧ ಪ್ರಾಥಮಿಕ ಪ್ರತಿರಕ್ಷಣೆ ನೀಡುವ ಉದ್ದೇಶದಿಂದ ಭಾರತೀಯ ಔಷಧಿ ನಿಯಂತ್ರಣ ಪ್ರಾಧಿಕಾರ(ಡಿಜಿಸಿಐ)ದಿಂದ ಅನುಮೋದನೆಯನ್ನು ಪಡೆದಿದೆ. ಕೋವಿಡ್-೧೯ ವಿರುದ್ಧ ರಕ್ಷಣೆ ನೀಡುವುದಕ್ಕಾಗಿ ಮೂಗಿನ ಮೂಲಕ ನೀಡಬಹುದಾದ ಮೊದಲ ಲಸಿಕೆ ಇದಾಗಿದೆ. ಇಂಟ್ರಾನಾಸಲ್ ಕೋವಿಡ್-೧೯ ಲಸಿಕೆಗಾಗಿ ಭಾರತ್ ಬಯೋಟೆಕ್ ಮಂಗಳವಾರ ಡಿಸಿಜಿಐನಿಂದ ತುರ್ತು ಬಳಕೆಯ ಅಧಿಕಾರವನ್ನು ಪಡೆದುಕೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಇದು ಕೋವಿಡ್-೧೯ಗಾಗಿ ಭಾರತದ ಮೊದಲ ಮೂಗಿನ ಮೂಲಕ ಹಾಕುವ ಲಸಿಕೆಯಾಗಿದೆ. ಕೋವಿಡ್-೧೯ ವಿರುದ್ಧದ ಭಾರತದ ಹೋರಾಟಕ್ಕೆ ದೊಡ್ಡ ಭರವಸೆ ಸಿಕ್ಕಿದಂತಾಗಿದೆ.

ಮೈಸೂರು ಮೇಯರ್, ಉಪಮೇಯರ್ ಆಯ್ಕೆ

ಮೈಸೂರು, ಸೆ. ೬: ತೀವ್ರ ಕುತೂಹಲ ಮೂಡಿಸಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಪ್ರಕ್ರಿಯೆ ಮುಗಿದಿದ್ದು ಬಿಜೆಪಿಯ ಅಭ್ಯರ್ಥಿ ಶಿವಕುಮಾರ್ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ಬಿಜೆಪಿಗೆ ಬೆಂಬಲ ಸೂಚಿಸಿದರೂ ಉಪಮೇಯರ್ ಪಟ್ಟದಿಂದ ವಂಚಿತವಾಗಿದೆ. ಮೇಯರ್ ಸ್ಥಾನಕ್ಕಾಗಿ ಮೂರು ಪಕ್ಷಗಳಿಂದ ತೀವ್ರ ಪೈಪೋಟಿ ನಡೆದಿತ್ತು. ಕೊನೆಯ ಹಂತದವರೆಗೂ ಯಾವುದೇ ಪಕ್ಷಗಳು ತಮ್ಮ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಕೊನೆಗೆ ಬಿಜೆಪಿಗೆ ಮೈಸೂರಿನ ಮಹಾಪೌರ ಪಟ್ಟ ದೊರೆತಿದೆ. ನಗರದ ೪೭ನೇ ವಾರ್ಡ್ ಸದಸ್ಯ ಶಿವಕುಮಾರ್ ಮೇಯರ್ ಆಗಿ ನೇಮಕಗೊಂಡಿದ್ದಾರೆ. ಆದರೆ ಉಪಮೇಯರ್ ಆಗಬೇಕಿದ್ದ ಜೆಡಿಎಸ್‌ನ ರೇಷ್ಮಾ ಉಪಮೇಯರ್ ನಾಮಪತ್ರ ತಿರಸ್ಕೃತಗೊಂಡಿದ್ದರಿAದ ಬಿಜೆಪಿಯ ಅಭ್ಯರ್ಥಿ ನಾಗೇಶ್ ಆಯ್ಕೆಯಾಗಿದ್ದಾರೆ. ಈ ಮೂಲಕ ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಎರಡನೇ ಬಾರಿಗೂ ಬಿಜೆಪಿ ಅಭ್ಯರ್ಥಿಯೇ ಮೇಯರ್ ಆಯ್ಕೆಯಾಗುವುದರ ಜೊತೆಗೆ ಉಪಮೇಯರ್ ಸ್ಥಾನವನ್ನು ದಕ್ಕಿಸಿಕೊಂಡಿದೆ.

ಮಹಾಮಳೆಗೆ ರಾಜಧಾನಿ ಪರಿಸ್ಥಿತಿ ಅಯೋಮಯ

ಬೆಂಗಳೂರು, ಸೆ. ೬: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿಯು ತ್ತಿರುವ ಭಾರೀ ಮಳೆ ಹಲವು ಅವಾಂತರಗಳನ್ನು ಸೃಷ್ಟಿ ಮಾಡುತ್ತಿ ರುವಂತೆಯೇ ಈ ಹಿಂದಿನ ದಾಖಲೆಗಳನ್ನೂ ಕೂಡ ಮುರಿಯುತ್ತಾ ಸಾಗಿದೆ. ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆ ೫೧ ವರ್ಷಗಳಲ್ಲಿ ಬಿದ್ದ ೨ನೇ ದಾಖಲೆಯ ಗರಿಷ್ಠ ಮಳೆಯಾಗಿದೆ. ನಗರದಲ್ಲಿ ೧೯೭೧ರಲ್ಲಿ ಮಳೆಗಾಲದಲ್ಲಿ ೭೨೫ ಮಿ.ಮೀ. ಮಳೆಯಾಗಿತ್ತು. ಈ ವರ್ಷ ಸೆಪ್ಟೆಂಬರ್‌ನಲ್ಲಿ ಈಗಾಗಲೇ ೭೦೯ ಮಿ.ಮೀ. ಮಳೆಯಾಗಿದ್ದು, ಇದು ೫೧ ವರ್ಷಗಳಲ್ಲಿ ಎರಡನೇ ದಾಖಲೆ ಮಳೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು. ಆಗಸ್ಟ್ ೩೧ರ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದ್ದು, ಭಾನುವಾರ ರಾತ್ರಿ ಅತೀ ಹೆಚ್ಚು ಪ್ರಮಾಣದಲ್ಲಿ ಮಳೆಯಾಗಿದೆ. ಪೂರ್ವ ಹಾಗೂ ಬೊಮ್ಮನಹಳ್ಳಿ ಭಾಗದಲ್ಲಿ ಹೆಚ್ಚಾಗಿ ಮಳೆಯಾಗಿದೆ. ೨೦೧೭ ಬಿಟ್ಟರೆ ಇದೀಗ ಮಹದೇವಪುರ, ಪೂರ್ವ ವಲಯದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ೭೦೦ ಮಿ.ಮೀ. ಹೆಚ್ಚು ಮಳೆಯಾಗಿದೆ. ಹೀಗಾಗಿ, ಸಮಸ್ಯೆ ಹೆಚ್ಚಾಗಿದೆ. ನಾಲ್ಕು ಪಟ್ಟು ಹೆಚ್ಚು ಮಳೆ ಆಗಸ್ಟ್ ೩೦ ರಿಂದ ಸೆಪ್ಟೆಂಬರ್ ೫ ರವರೆಗೆ ಆಗಿದೆ. ಬೊಮ್ಮನಹಳ್ಳಿಯಲ್ಲಿ ೯ ಪ್ರದೇಶಗಳಲ್ಲಿ ಸಾಕಷ್ಟು ಸಮಸ್ಯೆ ಆಗಿದೆ. ಪೂರ್ವ ಭಾಗದಲ್ಲಿ ೨೪ ಕಡೆ ಹಾಗೂ ಮಹದೇಪುರದಲ್ಲಿ ೨೨ ಕಡೆ ಸಮಸ್ಯೆ ಆಗಿದೆ ಎಂದು ತುಷಾರ್ ಗಿರಿನಾಥ್ ವಿವರಿಸಿದರು.

ಲೈಂಗಿಕ ಕಿರುಕುಳ ಪ್ರಕರಣ-ಮತ್ತೋರ್ವನ ಬಂಧನ

ಚಿತ್ರದುರ್ಗ, ಸೆ. ೬: ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಬಂಧನಕ್ಕೀಡಾಗಿರುವ ಮುರಾಘಾ ಮಠದ ಶಿವಮೂರ್ತಿ ಮುರುಘಾ ಶ್ರೀಗಳ ಪ್ರಕರಣಕ್ಕೆ ಸಂಬAಧಿಸಿದAತೆ ೫ನೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ೫ನೇ ಪ್ರಮುಖ ಆರೋಪಿಯಾಗಿರುವ ವಕೀಲ ಗಂಗಾಧರಯ್ಯ ಮಂಗಳವಾರ ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದ್ದು, ಚಿತ್ರದುರ್ಗದ ಡಿವೈಎಸ್‌ಪಿ ಕಚೇರಿಯಲ್ಲಿ ಗಂಗಾಧರಯ್ಯ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ. ಪ್ರಕರಣದ ೩ನೇ ಆರೋಪಿಯಾಗಿರುವ ಮಠದ ಉತ್ತರಾಧಿಕಾರಿ ಮತ್ತು ೪ನೇ ಆರೋಪಿ ಪರಮಶಿವಯ್ಯ ಮತ್ತು ೩ನೇ ಆರೋಪಿ ಬಸವಾಧಿತ್ಯ ಈವರೆಗೆ ಪೊಲೀಸರಿಗೆ ಸಿಕ್ಕಿಲ್ಲ. ಅವರ ಬಂಧನಕ್ಕಾಗಿ ಹುಡುಕಾಟ ಮುಂದುವರಿದಿದೆ. ೨ನೇ ಆರೋಪಿ ಲೇಡಿ ವಾರ್ಡನ್ ರಶ್ಮಿಯನ್ನು ವಿಚಾರಣೆಗಾಗಿ ತಮ್ಮ ೭ ದಿನ ತಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ಕೇಳಿದ್ದಾರೆ. ಸದ್ಯ ಈಕೆ ಶಿವಮೊಗ್ಗ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇಂದಿನಿAದ ದೂರದ ‘ಭಾರತ್ ಜೋಡೋ’ ಯಾತ್ರೆ

ನವದೆಹಲಿ, ಸೆ. ೬: ಕಾಂಗ್ರೆಸ್ ಪಕ್ಷದ ಬಹುನಿರೀಕ್ಷಿತ ೩,೫೭೦ ಕಿಲೋ ಮೀಟರ್ ದೂರದ ಭಾರತ್ ಜೋಡೋ ಯಾತ್ರೆಗೆ ಕನ್ಯಾಕುಮಾರಿಯಲ್ಲಿ ತಾ. ೭ ರಂದು (ಇಂದು) ಚಾಲನೆ ದೊರೆಯಲಿದೆ. ಈ ಯಾತ್ರೆ ಆರಂಭಕ್ಕೂ ಮುನ್ನ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪೆರಂಬೂರಿನ ರಾಜೀವ್ ಗಾಂಧಿ ಸ್ಮಾರಕದಲ್ಲಿ ನಡೆಯುವ ಪ್ರಾರ್ಥನಾ ಸಭೆಯಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ. ನಂತರ ಕನ್ಯಾಕುಮಾರಿಯಲ್ಲಿ ನಡೆಯಲಿರುವ ಭಾರತ್ ಜೋಡೋ ಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಖಾದಿ ರಾಷ್ಟç ಧ್ವಜವನ್ನು ರಾಹುಲ್ ಗಾಂಧಿ ಹಸ್ತಾಂತರಿಸುವರು.

ಧಾರ್ಮಿಕ ಕೇಂದ್ರದಲ್ಲಿ ಭಯೋತ್ಪಾದಕ ಚಟುವಟಿಕೆ ಆರೋಪ

ಗುವಾಹಟಿ, ಸೆ. ೬: ಇಬ್ಬರು ಬಾಂಗ್ಲಾದೇಶಿ ಪ್ರಜೆಗಳು ಅಸ್ಸಾಂನ ಗೋಲ್ಪಾರಾ ಜಿಲ್ಲೆಯ ಮದರಸಾವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿದ್ದಾರೆಂದು ಆರೋಪಿಸಿ ಸ್ಥಳೀಯರು ನೆಲಸಮಗೊಳಿಸಿದ್ದಾರೆ. ಬಾಂಗ್ಲಾದೇಶಿ ಪ್ರಜೆಗಳಾದ ಅಮಿನುಲ್ ಇಸ್ಲಾಂ ಮತ್ತು ಜಹಾಂಗೀರ್ ಅಲೋಮ್ ಅಲ್ ಖೈದಾ ಅಂಗಸAಸ್ಥೆಯ ಸದಸ್ಯರಾಗಿದ್ದಾರೆ. ಅವರು ೨೦೨೦-೨೨ ರ ನಡುವೆ ಮದರಸಾದಲ್ಲಿ ಕಲಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮಿನುಲ್ ಇಸ್ಲಾಂ ಮತ್ತು ಜಹಾಂಗೀರ್ ಅಲೋಮ್ ಸದ್ಯ ಪರಾರಿಯಾಗಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿದೆ. ಪಖಿಯುರಾ ಚಾರ್ ಪ್ರದೇಶದ ಮದರಸಾದ ಪಕ್ಕದ ಮನೆಯನ್ನು ಸಹ ನೆಲಸಮಗೊಳಿಸಲಾಗಿದೆ. ಮದರಸಾ ಧ್ವಂಸದಲ್ಲಿ ಸ್ಥಳೀಯರೇ ಭಾಗಿಯಾಗಿದ್ದು, ಯಾವುದೇ ಸರ್ಕಾರಿ ಅಧಿಕಾರಿಗಳು ಧ್ವಂಸದಲ್ಲಿ ಭಾಗಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮದರಸಾದಲ್ಲಿ ಬೋಧನೆ ಮಾಡಲು ಇಬ್ಬರು ಅಲ್ ಖೈದಾ ಸದಸ್ಯರನ್ನು ಸೇರಿಸಿಕೊಂಡಿದ್ದ ಧರ್ಮಗುರು ಜಲಾಲುದ್ದೀನ್ ಸೇಖ್‌ನನ್ನು ಕಳೆದ ತಿಂಗಳು ಬಂಧಿಸಲಾಗಿತ್ತು. ರಾಜ್ಯದಲ್ಲಿ ಭಯೋತ್ಪಾದಕ ಸಂಘಟನೆಗಳೊAದಿಗೆ ನಂಟು ಮತ್ತು ಜಿಹಾದಿ ಸ್ಲೀಪರ್ ಸೆಲ್‌ಗಳನ್ನು ಸ್ಥಾಪಿಸುವ ಪ್ರಯತ್ನಗಳ ಆರೋಪದ ಮೇಲೆ ಕಳೆದ ಒಂದು ತಿಂಗಳಲ್ಲಿ ನೆಲಸಮಗೊಂಡ ನಾಲ್ಕನೇ ಅಸ್ಸಾಂ ಮದರಸಾ ಇದಾಗಿದೆ.

ಪಿಎಸ್‌ಐ ನೇಮಕಾತಿ ಹಗರಣ-ಶಾಸಕನ ಆಡಿಯೋ ವೈರಲ್

ಕೊಪ್ಪಳ, ಸೆ. ೬: ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬAಧಿಸಿದAತೆ ಆಡಿಯೋವೊಂದು ಲೀಕ್ ಆಗಿದ್ದು, ಸ್ವತಃ ಸ್ಥಳೀಯ ಶಾಸಕರೇ ಅಭ್ಯರ್ಥಿಗಳಿಂದ ಹಣ ಪಡೆದಿದ್ದೇನೆ ಎಂದು ಹೇಳಿಕೊಂಡಿರುವ ಆಡಿಯೋ ಟೇಪ್ ಇದೀಗ ವ್ಯಾಪಕ ವೈರಲ್ ಆಗಿದೆ. ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದಲ್ಲಿ ಅಭ್ಯರ್ಥಿಗಳಿಂದ ಹಣ ಪಡೆದಿದ್ದನ್ನು ಆಡಳಿತ ಪಕ್ಷದ ಶಾಸಕ ಒಪ್ಪಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಮೂಲಕ ಪಿಎಸ್‌ಐ ನೇಮಕಾತಿ ಹಗರಣ ಮತ್ತೊಂದು ತಿರುವು ಪಡೆದಿದೆ. ಹಗರಣಕ್ಕೆ ಸಂಬAಧಿಸಿದAತೆ ಆಡಿಯೋ ವೈರಲ್ ಆಗಿದೆ. ಪಿಎಸ್‌ಐ ನೇಮಕಾತಿಗಾಗಿ ಹಣ ಪಡೆದಿದ್ದನ್ನು ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸುಗೂರು ಒಪ್ಪಿಕೊಂಡಿದ್ದು, ಪರಸಪ್ಪ ಎಂಬುವರ ಮಗನ ನೇಮಕಾತಿಗೆ ಹಣ ಪಡೆದಿರುವ ಶಾಸಕರ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.