ಪೊನ್ನಂಪೇಟೆ, ಸೆ.೬: ಇದೇ ತಿಂಗಳ ೭ರಿಂದ ಲಂಡನ್ನಿನ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕರಾಟೆ ಚಾಂಪಿಯನ್ ಶಿಪ್ಗೆ ಭಾರತ ತಂಡವನ್ನು ಪ್ರತಿನಿಧಿಸಲು ಹಿರಿಯ ಕರಾಟೆಪಟು ಮತ್ತು ಮಾಜಿ ಶಾಸಕ ಸಿ. ಎಸ್. ಅರುಣ್ ಮಾಚಯ್ಯ ಭಾರತದಿಂದ ತೆರಳಿದ್ದಾರೆ.
ಜಗತ್ತಿನ ೭೦ ರಾಷ್ಟçಗಳು ಪಾಲ್ಗೊಳ್ಳಲಿರುವ ಕಾಮನ್ವೆಲ್ತ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಪಾಲ್ಗೊಳ್ಳಲು ಭಾರತ ತಂಡಕ್ಕೆ ಆಯ್ಕೆಗೊಂಡಿರುವ ೭೦ ಕರಾಟೆಪಟುಗಳ ತಂಡದ ನಾಯಕತ್ವ ವಹಿಸಿಕೊಂಡಿರುವ ಅರುಣ್ ಮಾಚಯ್ಯ ಅವರು, ತಮ್ಮ ತಂಡದೊAದಿಗೆ ಕಳೆದ ಭಾನುವಾರ ಲಂಡನ್ನಿಗೆ ಪ್ರಯಾಣ ಬೆಳೆಸಿದ್ದಾರೆ.
ದಕ್ಷಿಣ ಭಾರತ ಕರಾಟೆ ಫೆಡರೇಷನ್ ಅಧ್ಯಕ್ಷರು, ಕರಾಟೆ ಇಂಡಿಯಾ ಆರ್ಗನೈಜೇಷನ್ ಹಿರಿಯ ಉಪಾಧ್ಯಕ್ಷರು ಹಾಗೂ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಸಿ.ಎಸ್. ಅರುಣ್ ಮಾಚಯ್ಯ ಅವರು ಈ ಹಿಂದೆ ವಿಶ್ವದ ಹಲವೆಡೆ ನಡೆದ ಹಲವಾರು ಅಂರ್ರಾಷ್ಟಿçÃಯ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.