ಭಾಗಮಂಡಲ, ಸೆ. ೬ : ಚೇರಂಬಾಣೆ ಸಮೀಪದ ಕೊಳಗದಾಳು ಪಾಕ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಕಾಣಿಕೆ ಹುಂಡಿಯಿAದ ಹಣ ಕಳವು ಮಾಡಿದ ಪ್ರಕರಣ ವಿರೋಧಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಹಿಂದೂ ಪರ ಕಾರ್ಯಕರ್ತರು ಚೇರಂಬಾಣೆಯಲ್ಲಿ ಜನಜಾಗೃತಿ ಸಭೆ ನಡೆಸಿ ಕೃತ್ಯಕ್ಕೆ ಬೆಂಬಲ ನೀಡಿದವರನ್ನು ಬಂಧಿಸುವAತೆ ಒತ್ತಾಯಿಸಿದರು.

ದುರ್ಗಾ ಪರಮೇಶ್ವರಿ ದೇವಾಲಯದ ಹುಂಡಿಯನ್ನು ನಕಲಿ ಕೀ ಬಳಸಿ ಹಣವನ್ನು ಅಪಹರಿಸಿದ್ದು ಮಾತ್ರವಲ್ಲದೆ ದೇವಾಲಯದ ಪಕ್ಕದ ನದಿಯಲ್ಲಿ ಭಕ್ತರ ನಂಬಿಕೆಯ ಪ್ರತೀಕವಾಗಿರುವ ಮೀನುಗಳನ್ನು ಕೊಲ್ಲುವುದರ ಮೂಲಕ ಹಿಂದೂ ಭಕ್ತರ ನಂಬಿಕೆಗೆ ಘಾಸಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಹಿಂದೂ ವಿರೋಧಿ ನಿಲುವಿನ ಸಂಘಟನೆಗಳ ಕಾರ್ಯ ಕರ್ತರಾಗಿದ್ದಾರೆ. ದೇವಾಲಯದಲ್ಲಿ ಕೃತ್ಯ ನಡೆಸಿ ಸಮಾಜದ ವಾತಾವರಣ ವನ್ನು ಹಾಳುಗೆಡವಿದ್ದಾರೆ ಎಂದು ದೂರಿದರು.

ಜಿಲ್ಲೆಯಲ್ಲಿ ಹಲವು ದೇವಾಲಯ ಗಳಲ್ಲಿ ಈ ಹಿಂದೆ ಕಾಣಿಕೆ ಹುಂಡಿ ದೇವರ ವಿಗ್ರಹಗಳನ್ನು ಕಳವು ಮಾಡಿದ ಪ್ರಕರಣಗಳಿವೆ. ಆದರೆ, ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ದರು. ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಭಾಗಮಂಡಲ ಠಾಣಾಧಿಕಾರಿ ಪ್ರಿಯಾಂಕ ಅವರಿಗೆ ಜನಜಾಗೃತಿ ಸಭೆಯ ಬಳಿಕ ಮನವಿ ನೀಡಿದರು.

(ಮೊದಲ ಪುಟದಿಂದ) ಜೊತೆಗೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅವರಿಗೂ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಪ್ರಮುಖ ಪ್ರಚಾರಕ ಧನುರಾಜ್ ಭಟ್, ಹಿಂದೂ ವಿರೋಧಿಯಾಗಿ ನಡೆದುಕೊಂಡು ಸಮಾಜದ ಸ್ವಾಸ್ಥö್ಯ ಕದಡುತ್ತಿರುವ ಎಸ್‌ಡಿಪಿಐ ಸಂಘಟನೆ ನಿಷೇಧಕ್ಕೆ ಒತ್ತಾಯಿಸಿದರು.

ಪಾಕ ದೇವಸ್ಥಾನದ ಕಳವು ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದ್ದು ಇತರ ಆರೋಪಿಗಳನ್ನು ಬಂಧಿಸಬೇಕು ಎಂದರು. ಹಿಂದೂ ಜಾಗರಣ ವೇದಿಕೆಯ ಕುಕ್ಕೆರ ಅಜಿತ್ ಮಾತನಾಡಿದರು.

ಈ ಸಂದರ್ಭ ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಕುಮಾರ್ ವಿಎಸ್‌ಎಸ್‌ಎನ್ ಅಧ್ಯಕ್ಷ ಸುಮನ್, ಪಾಣತ್ತಲೆ ಕವನ್, ದೇವಾಲಯದ ಅಧ್ಯಕ್ಷ ಎಂ .ಬಿ. ರಮೇಶ್ , ಪ್ರಮುಖರಾದ ಕಿಶೋರ್, ಬೆಳ್ಳಿಯಪ್ಪ , ಮನೋಹರ್, ಕಾರ್ಯಕರ್ತರು ಉಪಸ್ಥಿತರಿದ್ದರು. -ಸುನಿಲ್