ಮಡಿಕೇರಿ, ಸೆ. ೬: ನಗರದ ಕಾನ್ವೆಂಟ್ ಜಂಕ್ಷನ್‌ನಲ್ಲಿ ನೀರು ಸರಬರಾಜು ಪೈಪ್ ಒಡೆದು ಹೋದ ಪರಿಣಾಮ ಸುಮಾರು ೧ ಗಂಟೆಗೂ ಹೆಚ್ಚು ಕಾಲ ಪೈಪ್‌ನಿಂದ ಹೊರಹೊಮ್ಮತ್ತಿದ್ದ ಅತ್ಯಂತ ಒತ್ತಡದ ನೀರು ಸ್ಥಳೀಯರಿಗೆ ಕಾರಂಜಿ ಅನುಭವ ನೀಡಿತು. ದಾರಿ ಹೋಕರು ಹಾಗೂ ಸಾರ್ವಜನಿಕರು ರಸ್ತೆ ಬದಿ ನಿಂತು ಫೋಟೋ ಕ್ಲಿಕ್ಕಿಸುತ್ತಿದ್ದ ದೃಶ್ಯ ಕಂಡು ಬಂತು. ಸನಿಹದಲ್ಲೇ ಇದ್ದ ಹೈಮಾಸ್ಟ್ ದೀಪಕ್ಕಿಂತ ಎತ್ತರಕ್ಕೆ ನೀರು ಚಿಮ್ಮುತ್ತಿತ್ತು.

ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನಿರ್ವಹಣೆಯ ಪೈಪ್ ದುಸ್ಥಿತಿಯಿಂದ ಒಡೆದು ಹೋದ ಪರಿಣಾಮ ನೀರು ಹೊರ ಚಿಮ್ಮಿದ್ದು ಬಳಿಕ ನೀರನ್ನು ಖಾಲಿಗೊಳಿಸಿ ಪೈಪ್ ದುರಸ್ತಿ ಕಾರ್ಯ ನಡೆಯಿತು.

ಸ್ಥಳದಲ್ಲಿ ನಗರಸಭಾ ಸದಸ್ಯರಾದ ಅರುಣ್ ಶೆಟ್ಟಿ, ಮಹೇಶ್ ಜೈನಿ ಹಾಗೂ ಇತರರು ಇದ್ದರು.